ಬದುಕೊಂದು ಬಯಲಾಟ ತೋಡಿದಷ್ಟು ತೊಳಲಾಟ ಬದುಕೊಂದು ಭರವಸೆ ಬಯಸಿದಷ್ಟು ನಿರಾಸೆದಾಯಕ ಬದುಕಲ್ಲಿ ಬೇಕಾಗಿರುವುದೊಂದೇ ಒಳ್ಳೆಯ ಬಂಧನ ಬೇರೆಯವರೊಂದಿಗೆ ಬೆರೆಯುವ ಸ್ನೇಹ ಸ್ಪಂದನ. ಮಾನವ ತನ್ನ ಹುಟ್ಟು ಯಾವಾಗ ಶುರುವಾಯಿತೋ ಆವಾಗಿಂದ ಅವನ ಬದುಕು ಶುರುವಾದಂತೆ ತನ್ನ ಪ್ರತಿಯೊಂದು ಕ್ಷಣಗಳು ಬದುಕಿನ ಅತ್ಯಮೂಲ್ಯ ಮತ್ತು ನಿಶ್ಚಿತ ಕ್ಷಣಗಳು ಹೌದು ತಡೆಯಲು ಸಾಧ್ಯವಿಲ್ಲದ ಸಮಯನುಸಾರದ ಸಂದರ್ಭಗಳು ಆಗಿರುತ್ತವೆ ಹೀಗೆ ಪ್ರತಿಯೊಬ್ಬರ ಬದುಕು ಶುರುವಾಗುತ್ತಾ ಕುಟುಂಬ ಪರಿವಾರ ರಚನೆಯಾಗಿ ಮತ್ತೊಂದು ವಿಭಿನ್ನ ಹಾಗೂ ಅನಿವಾರ್ಯದ ಬದುಕು ಶುರುವಾಗಿ ಪ್ರಮುಖವಾದ ಪ್ರಬಲವಾದ ಬದುಕು ಹುಟ್ಟಿಕೊಂಡು ವಿಭಿನ್ನತೆಯ ವಿಶಾಲವಾದ ವಿಚಾರಗಳು ಬದುಕಿನಿಲ್ಲಿ ಮೊಳಗುತ್ತವೆ. ಹೀಗೆ ಶುರುವಾದ ಬದುಕಿಗೆ ಪರಿವಾರವೆಂಬ ಒಂದು ಪಂಗಡ ಏರ್ಪಟ್ಟು ಪರಿವಾರಕ್ಕೆ ಮತ್ತೊಂದು ಮೆರಗು ನೀಡುವಂತಹ ಕಾರ್ಯ ಆ ಪಂಗಡದಿಂದ ಶುರುವಾಗುತ್ತದೆ. ಇಂತಹ ವಿಶೇಷ ಕಾರ್ಯ ವಿಭಿನ್ನ ಅನುಭವ ಪ್ರತೀ ಪಾರಿವಾರದಲ್ಲಿ ಅವಶ್ಯವಾಗಿ ನಡೆದಿರುತ್ತದೆ ಮತ್ತು ನಡೆಯಲೇಬೇಕಾದುದು ಹಾಗೆಯೇ ಇಂತಹ ಅನುಭವ ನನ್ನ ಜೀವನದಲ್ಲಿ ನಡೆದ ಕೆಲ ಕ್ಷಣವನ್ನು ಹಂಚಿಕೊಳ್ಳಲು ಇಚ್ಛೆಪಡುತ್ತೇನೆ.
ಕೆಲವೇ ಕೆಲವು ತಿಂಗಳುಗಳಷ್ಟೇ ನನ್ನ ವ್ಯಯಕ್ತಿಕ ಮತ್ತು ಉದ್ಯೋಗದ ದೃಷ್ಟಿಯಿಂದ ಬದುಕನ್ನು ಕಟ್ಟಿಕೊಳ್ಳಲು ನನ್ನ ಪರಿವಾರದಿಂದ ದೂರ ಉಳಿದು ಒಂದು ವಿಶೇಷವಾದ ದಿನ ಅದು ಮತದಾನ ಮಾಡುವ ಕಾರಣಕ್ಕಾಗಿ ನನ್ನ ಹಳ್ಳಿಗೆ ಹೋಗುವ ಮುಂಚೆ ಇಂದು ನಾನು ಊರಿಗೆ ಬರಲಿದ್ದೇನೆ ಎಂದು ಹೇಳಿದ ಕೂಡಲೇ ನನ್ನ ಹೆತ್ತವರ ಮನದಲ್ಲಿ ಅದೆಷ್ಟು ಸಂತೋಷ ತುಂಬಿತ್ತೋ ನನಗಂತೂ ತಿಳಿಯದು ಆದರೇ ತಾಸು ತಾಸಿಗೆ ಫೋನ್ ಮಾಡಿ ಎಲ್ಲಿದೀಯ ಹೇಗಿದ್ದೀಯ ಅಂತ ತಂದೆ ಕೇಳಿದರೆ ಹುಷಾರಾಗಿ ಬಾ ಅಂತ ತಾಯಿ ಕೇಳಿದರೆ ಬೈಕ್ ಮೇಲೆ ಜಾಸ್ತಿ ಫೋನ್ ಉಪಯೋಗಿಸಬೇಡ ಅಂತ ಸಹೋದರಿ ಕೇಳಿದರೆ ಸಹೋದರಿ ಮಕ್ಕಳು ಅಂದರೇ ಸೊಸೆ ಅಳಿಯಂದಿರು ಮಾತ್ರ ಮಾವ ಏನಾದ್ರೂ ತಿನ್ನೋಕೆ ತಗೊಂಡು ಬಾ ನನಗೆ ಅದು ಬೇಕು ಇದು ಬೇಕು ಅಂತ ಆಸೆ ಹೊತ್ತು ಕುಳಿತ ಸಣ್ಣ ಕಂದಮ್ಮಗಳು ಕಾದು ಕಾದು ಮಲಗಿದರೆ ತಂದೆ ತಾಯಿ ಮಾತ್ರ ನಾನು ಮನೆಗೆ ಹೋಗುವವರೆಗೆ ಕಣ್ಣುಬಿಟ್ಟು ಬರುವ ದಾರಿಯನ್ನೇ ಕಾದು ಕುಳಿತು ಅದೆಷ್ಟೇ ಸಮಯವಾಗಿದ್ದರೂ ನಾನು ಹೋದಮೇಲೆಯೇ ಉಣಬಡಿಸಿ ಒಂದೊಂದು ತುತ್ತು ತಿನ್ನುವಾಗ ನೋಡಬೇಕು ಪ್ರತಿಯೊಬ್ಬರ ಮನದಲ್ಲಿ ಅದೇನೋ ಉತ್ಸಾಹ ಮತ್ತು ಬಹಳ ದಿನಗಳಿಂದ ಪರಿವಾರದೊಂದಿಗೆ ಊಟ ಮಾಡಿದ ನೆನಪು ಬಹಳ ಕಡಿಮೆಯಾಗಿರುತ್ತದೆ ಮತ್ತು ತಂದೆ ತಾಯಿಯ ಸಂಪರ್ಕದಿಂದ ದೂರವಿದ್ದು ಒಂದೊಮ್ಮೆ ಪರಿವಾರದೊಂದಿಗೆ ಬೆರೆತು ಊಟ ಮಾಡುವಾಗ ಒಂದೊಂದು ತುತ್ತಿಗೆ ಅವರ ಕಣ್ಣೀರು ತಾಟಿಗೆ ಸೇರಿರುತ್ತದೆ ಅದು ಇಷ್ಟು ದಿನ ದೂರವಿದ್ದ ಕಾರಣಕ್ಕಾಗಿಯೂ ಹೌದು ಅದು ಸಂತೋಷದ ಕಾರಣಕ್ಕೂ ಹೌದು ಅಂತಹ ಕ್ಷಣಗಳು ನನ್ನ ಜೇವನದಲ್ಲಿ ಅಷ್ಟೇ ಅಲ್ಲ ಪ್ರತಿಯೊಬ್ಬ ಕುಟುಂಬದಲ್ಲಿ ನಡೆಯುವಂತಹ ಪ್ರಮುಖ ಕ್ಷಣಗಳೂ ಆಗಿರುತ್ತವೆ. ತನ್ನ ಪರಿವಾರದ, ಕುಟುಂಬದ ಸಲುವಾಗಿ ಏನನ್ನೋ ಸಾಧಿಸಬೇಕು ಎಂದು ಕೆಲವರು ದುಡಿಯಲು ಹೋದರೆ ಇನ್ನೂ ಕೆಲವರು ಶಿಕ್ಷಣ ಪಡೆಯಲು ಹೋಗುತ್ತಾರೆ ಇಲ್ಲಿ ಇಬ್ಬರ ಬದುಕಿನ ಉದ್ದೇಶವೂ ಒಂದೇ ಆಗಿರುತ್ತದೆ. ಹಾಗೇ ಸಾಧಿಸಲು ನಿರ್ಧರಿಸಿದಾಗ ಊರನ್ನು, ಮನೆಯನ್ನು ಅಷ್ಟೇ ಅಲ್ಲದೇ ಹೆತ್ತವರನ್ನು ಬಂಧು ಬಳಗವನ್ನು ತೊರೆದು ಮರೆಯಾಗಿ ಕಷ್ಟನೋ ಸುಖನೋ ಎಲ್ಲವನ್ನೂ ಸಂಬಾಳಿಸಿ ಬದುಕಬೇಕಾಗಿರುವುದು ಅನಿವಾರ್ಯವಾಗಿರುತ್ತದೆ.
ಇಂತಹ ಬದುಕಿನ ಹೊರೆ ಹೊತ್ತು ಹೊರಗೆ ಹೋದವರು ಒಂದೊಮ್ಮೆ ಸಾಧಿಸಿಯೋ ಅಥವಾ ಸಾಧಿಸದೆಯೋ ಮರಳಿ ಮನೆಗೆ ಬಂದು ಪರಿವಾರದೊಂದಿಗೆ ಬೆರೆತು ಭಾವನೆಗಳನ್ನು ಹಂಚಿಕೊಂಡಾಗ ಪಾಲಕರ ಮುಖದಲ್ಲಿ ಸಂತೋಹದ ಜೊತೆಗೆ ಕಣ್ಣೀರು ಬಂದಿರುತ್ತದೆ ಏಕೆಂದರೆ ಸಾಧಿಸಿ ಬಂದಿದ್ದಾನೆ ಅಂತ ಅಲ್ಲ ಸಾಧಿಸಿ ಬಂದಿಲ್ಲ ಅಂತ ಅಲ್ಲ ಮುಖ್ಯವಾಗಿ ನನ್ನ ಮಗ ನನ್ನ ಮಗಳು ಸರಳವಾಗಿ ಮನೆ ಸೇರಿದ್ದಾರೆ ಅವರೇನು ಮಾಡುವುದು ಬೇಕಿಲ್ಲ ನನ್ನ ಮಕ್ಕಳು ನನ್ನ ಕಣ್ಣುಮುಂದೆ ಆರಾಮವಾಗಿ ನಗುನಗುತ್ತಾ ಇದ್ದರೆ ಸಾಕು ಒತ್ತೋತ್ತಿಗೆ ಮಕ್ಕಳ ಜೊತೆ ಊಟ ನಲಿವು ಮಾಡುತ್ತಾ ನಮ್ಮ ಜೇವನವನ್ನು ಕಳೆಯುತ್ತೇವೆ ಎಂಬುದು ಬಹುದೊಡ್ಡ ವಿಚಾರವಾಗಿರುತ್ತದೆ. ಅದಕ್ಕಾಗಿ ಸಾಧಿಸಿ ಸಿರಿ ಸಂಪತ್ತನ್ನು ತರದೇ ಹೋದರೂ ಪರವಾಗಿಲ್ಲ ನಿಮ್ಮ ಸ್ವತ್ತನ್ನು ಮಾತ್ರ ಕಳೆದುಕೊಳ್ಳದೆ ಹಿಡಿದಿಟ್ಟುಕೊಳ್ಳಿ ಯಾಕೆಂದರೇ ನಿಮ್ಮ ಸ್ವತ್ತೇ ನಿಮಗೆ ಮತ್ತು ನಿಮ್ಮೆತ್ತವರಿಗೆ ಸಿರಿ ಸಂಪತ್ತಾಗಿರುತ್ತದೆ ಅದನ್ನು ಬಿಟ್ಟು ಬೇರೇನೂ ಆಸೆ ಪಡುವ ಹೆತ್ತವರಿಲ್ಲ ಜಗದಲ್ಲಿ ಇದು ಪ್ರತಿಯೊಬ್ಬ ಮಕ್ಕಳಿಗೆ ತಿಳಿಯಬೇಕಾದ ತಿಳಿದುಕೊಳ್ಳಲೇಬೇಕಾದ ವಿಚಾರವಾಗಿದೆ. ಅಂದುಕೊಂಡಂತೆ ನನ್ನ ಕುಟುಂಬದೊಂದಿಗೆ ನನ್ನ ಭೋಜನ ಕೂಟವು ಮುಗಿಯಿತು ಅದು ಕೆಲವು ನಿಮಿಷಗಳಲ್ಲಿ ಮಾತ್ರ ಆದರೇ ಆ ದಿನ ನನ್ನ ಮನೆಯಲ್ಲಿ ಹೆತ್ತವರೊಂದಿಗೆ ಕಷ್ಟ ಸುಖಗಳನ್ನು ಹೇಳಿಕೊಳ್ಳುತ್ತಾ ಹೆತ್ತವರ ಬಗ್ಗೆ ಕಾಳಜಿ ವಹಿಸುತ್ತಾ ಮಲಗಬೇಕು ಅನ್ನೋ ಆಸೆ ನನ್ನ ಹೆತ್ತವರಿಗೆ ಮತ್ತು ನನಗೂ ಆಸೆ ಇತ್ತು ಆದರೇ ಬಹಳ ಕಡಿಮೆ ಸಮಯವಿರುವ ಕಾರಣಕ್ಕಾಗಿ ಅಲ್ಲಿಂದ ಮತ್ತೇ ಹೆತ್ತವರಿಂದ ದೂರವಾಗಿ ಕರ್ತವ್ಯದ ದಾರಿಯನ್ನು ತುಳಿಯಬೇಕಾಯಿತು. ಜಗತ್ತಿನಲ್ಲಿ ಎಲ್ಲಾ ಶಿಕ್ಷೆಗಿಂತ ತಂದೆ ತಾಯಿ ಕುಟುಂಬದವರಿಂದ ದೊರವಿರುವುದೇ ಬಹಳ ಕಠಿಣ ಶಿಕ್ಷೆಯಾಗಿರುತ್ತದೆ. ತಂದೆ ತಾಯಿ ಎಲ್ಲದಕ್ಕೂ ಮೀರಿದವರು ಬೇರೆಲ್ಲವನ್ನೂ ಮೀರಿಸಿದವರು ಹಾಗಾಗಿ ತಂದೆ ತಾಯಿಗಳೇ ಮೊದಲ ಗುರುಗಳು ಮೊದಲ ಮಾರ್ಗದರ್ಶಕರು ಎಂದು ಹೇಳುತ್ತೇವೆ. ಇಂತಹ ಕಠಿಣ ಶಿಕ್ಷೆ ಅನುಭವಿಸಿದ ನಾನು ಒಮ್ಮಿಂದೊಮ್ಮೆಲೆ ತಂದೆ ತಾಯಿಗಳನ್ನು ಕಂಡು ಅವರೊಂದಿಗೆ ಕಳೆದ ಕೆಲವೇ ಕೆಲವು ಕ್ಷಣಗಳಲ್ಲಿ ನನ್ನ ಮನಸ್ಸು ಮಾತ್ರ ಏನೂ ಆಡದೇ ಮಾತೇ ಬರದಂತೆ ಸುಮ್ಮನೇ ಸಪ್ಪಳವಿಲ್ಲದೆ ದುಃಖ ಉಕ್ಕಿಬರುತ್ತಿತ್ತು ಆದರೇ ಅದನ್ನು ಹೆತ್ತವರ ಮುಂದೆ ತಲೆಯತ್ತಿ ಗೊತ್ತುಪಡಿಸದೆ ಗಂಟಲು ಬಿಗಿಹಿಡಿದು ಅಳುವನ್ನು ಕಡಿಮೆ ಮಾಡಿಕೊಂಡೆ ಆದರೇ ಆ ಕೆಲವೇ ಕೆಲವು ಸಮಯವನ್ನು ನನ್ನ ಹೆತ್ತವರೊಂದಿಗೆ ಕಳೆದ ಕ್ಷಣಗಳನ್ನು ನೋಡಿದಾಗ ನಾನು ಬಂದಿದ್ದು ಮತ್ತು ಬೆರೆತಿದ್ದು ನನ್ನ ಮನೆಗಷ್ಟೇ ಅಲ್ಲ ದೇಗುಲಕ್ಕೆ ಮತ್ತು ಹೆತ್ತ ಪಾದುಕೆಗಳ ಸನ್ನಿಧಿಗೆ ಎಂಬಂತೆ ನನ್ನ ಮನಸ್ಸು ತುಂಬಾ ಸಂತೋಷಗೊಂಡಿತ್ತು. ಇದು ಪ್ರತಿಯೊಂದು ಕುಟುಂಬದ ಸ್ಥಿತಿಯಾಗಿರುತ್ತದೆ ಮತ್ತು ವಸ್ತು ನಿಷ್ಠವೂ ಇದೇ ಆಗಿರುತ್ತದೆ ಹಾಗಾಗಿ ಹೆತ್ತವರ ಕನಸನ್ನು ನನಸು ಮಾಡದಿದ್ದರೂ ಪರವಾಗಿಲ್ಲ ಅವರ ಮನಸ್ಸಿಗೆ ಮುನಿಸು ತರಬೇಡಿ ಯಾಕೆಂದ್ರೆ ಅವರಿಗೆ ಕಂಡಿರುವುದು ನೀನು ಮಾತ್ರ ಒಳಗಿರುವ ನಿನ್ನ ಮನಸಲ್ಲ ಹಾಗಾಗಿ ಮತ್ತೊಬ್ಬರ ನಂಬಿದವರ ಬದುಕಿಗೆ ಹೂವಾಗದಿದ್ದರೂ ಸರಿ ಮುಳ್ಳಾಗದಿರಿ. ಹೆತ್ತವರು ಕಾಯುತ್ತಿದ್ದಾರೆ ನಿಮ್ಮೊಂದಿಗೆ ಬೆರೆಯಲು ಬೆರೆತು ಭಾವನೆಗಳನ್ನು ಹಂಚಿಕೊಳ್ಳಲು, ನಿಮ್ಮೊಂದಿಗೆ ನಕ್ಕು ನಲಿದಾಡಲು ಹಾಗಾಗಿ ಕಂಡ ಕನಸುಗಳು ನನಸಾಗದೆ ಬೇಸರವಾದರೂ ಸರಿ ಚಿಂತಿಸಬೇಡಿ ಕೊನೆಗಾದರೂ ವಯಸ್ಸಾದ ತಂದೆ ತಾಯಿಯರ ಬದುಕಿಗೆ ಆಸರೆಯಾಗಿ ಅದೇ ಪ್ರತಿಯೊಬ್ಬ ಮಕ್ಕಳ ಕರ್ತವ್ಯಗಬೇಕಿದೆ.
- ಹನುಮಂತ ದಾಸರ ಹೊಗರನಾಳ
ಯುವ ಬರಹಗಾರರು