ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಹೋಬಳಿಯ ಹುಣಸಘಟ್ಟ ಗ್ರಾಮದ ಬೂತ್ ನಂಬರ್ 243 ಮತ್ತು 244 ರ ಸಮೀಪ ವಿಜಯ ಕರ್ನಾಟಕ ವರದಿಗಾರ ಸುದ್ದಿ ಮಾಡಲೆಂದು ಬುಧವಾರ ಬೆಳಗ್ಗೆ ಬೂತ್ ಹೊರಬಾಗದಲ್ಲಿ ವಿಡಿಯೋ ಮತ್ತು ಫೋಟೋ ತೆಗೆಯಲು ಹೋದಾಗ ಇಲ್ಲಿನ ಸಿಆರ್ ಪಿ ಎಫ಼್ ಕಮಾಂಡೋ ಏಕಾಏಕಿ ವರದಿಗಾರನ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದು,ವರದಿಗಾರನು ವಿಡಿಯೋ ಮತ್ತು ಫೋಟೋ ತೆಗೆಯಲು ಬಳಸಿದಂತಹ ಮೊಬೈಲ್ ಅನ್ನು ಸಹ ಕಸೆದುಕೊಂಡು ಅದರಲ್ಲಿದ್ದ ಫೋಟೋ ಮತ್ತು ವಿಡಿಯೋವನ್ನು ಸಹ ಡಿಲೀಟ್ ಮಾಡಿರುತ್ತಾರೆ.
ಈ ಘಟನೆ ನಡೆಯಲು ಕಾರಣ ತಾಲೂಕು ಚುನಾವಣಾ ಅಧಿಕಾರಿಗಳು ಯಾವುದೇ ಮಾಧ್ಯಮ ಪ್ರತಿನಿಧಿಗಳಿಗೆ ಚುನಾವಣಾ ಆಯೋಗದಿಂದ ಗುರುತಿನ ಚೀಟಿ ನೀಡದೆ ಇರುವುದು ಈ ಘಟನೆಗೆ ಮುಖ್ಯ ಕಾರಣವಾಗಿದ್ದು.
ಇದನ್ನು ಖಂಡಿಸಿ ಹೊನ್ನಾಳಿ ಕಾರ್ಯನಿರತ ಪತ್ರಕರ್ತರ ಸಂಘ ಗ್ರಾಮದ ಮುಂದೆ ಅರಬೆತ್ತಲೆಯಾಗಿ ಈ ಘಟನೆಯನ್ನು ಪ್ರತಿಭಟಿಸಿತು.ಈ ಸಂದರ್ಭದಲ್ಲಿ
ಹೊನ್ನಾಳಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೋರಿ ಯೋಗೇಶ್ ಕುಳಗಟ್ಟೆ
ಉಪಾಧ್ಯಕ್ಷರಾದ ಹರೀಶ್ ಆರ್ ಸಾಗೋನಿ,
ಮಾಜಿ ಅಧ್ಯಕ್ಷರಾದ ಮೃತ್ಯುಂಜಯ ಪಾಟೀಲ್,
ಪತ್ರಕರ್ತರಾದ ರಮೇಶ್ ಮಡಿವಾಳ್,
ಹಾಲೇಶ್ ಉಪಸ್ಥಿತರಿದ್ದರು.
-ಪ್ರಭಾಕರ್ ಡಿ.ಎಮ್