ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪ್ರತೀ ಸಾಧನೆಗೆ ಅನುಭವವೇ ಕಾರಣ

ವಿಶಾಲ ಮತ್ತು ವಿಭಿನ್ನ ವೈವಿಧ್ಯತೆಯ ಜಗತ್ತು ವಿಶೇಷ ಹಾಗೂ ವಿವಿಧ ಜೀವರಾಶಿಗಳ ತಾಣವಾಗಿದೆ ಇಂತಹ ವೈವಿಧ್ಯವನ್ನು ಹೊಂದಿದ ಜಗದೊಳಗೆ ಹಲವಾರು ಜೀವರಾಶಿಗಳು ಜೀವಿಸುತ್ತಿದ್ದಂತೆ ಮಾನವನೂ ಕೂಡ ಒಂದು ಜೀವರಾಶಿಯ ಒಂದು ವಿಶೇಷ ತಳಿಯಾಗಿದ್ದಾನೆ ಮತ್ತು ಆ ಜೀವಿಗೆ ಒಂದು ಜೀವವೂ ತುಂಬಿದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದ ವಿಚಾರ. ಆದರೇ ಮಾನವ ಜೀವಿಗೆ ಪ್ರತಿಯೊಂದು ಜೀವಿಗೆ ಇರುವಂತಹ ಭಾವ ಆಲೋಚನೆ ವಿಚಾರ ಮತ್ತು ಅಭಿವ್ಯಕ್ತಿಯೂ ಕೂಡ ಅವರದೇ ಆದ ಬದುಕಿನ ರೀತಿಯೊಳಗೆ ಹಾಗೂ ಅವರದೇ ಆದ ಸ್ಥಾನಗಳಲ್ಲಿ ತುಂಬಿಕೊಂಡಿದೆ ಹಾಗೂ ಕಂಡುಬರುತ್ತದೆ ಹಾಗೆಯೇ ಮನುಷ್ಯನಿಗೂ ಕೂಡ ತನ್ನದೇ ಆದ ಸ್ವಂತ ವಿಚಾರಗಳು, ತನ್ನದೇ ಆದ ನಿರ್ಧಾರಗಳು ತನ್ನದೇ ಆದ ಕಟ್ಟುಪಾಡುಗಳು ತನ್ನದೇ ಆದ ನೀತಿ ನಿಯಮಗಳು ತನ್ನದೇ ಆದ ಹಕ್ಕು ಕರ್ತವ್ಯಗಳು ನಿರ್ಬಂಧಗಳು ಹಾಗೂ ಭಾವಗಳು ಅವನಲ್ಲಿ ತುಂಬಿರುತ್ತವೆ ಹೀಗೆ ಪ್ರತಿಯೊಬ್ಬ ಮನುಷ್ಯನ ಬದುಕು ಈ ಎಲ್ಲಾ ಅಂಶಗಳನ್ನು ತುಂಬಿಕೊಂಡಂತಹ ಒಂದು ಮೂರುತಿ ಮಾನವನು ಆಗಿರುತ್ತಾನೆ.

ಮನುಷ್ಯ ಯಾವಾಗ ಜಗನ್ಮಾತೆ ತಾಯಿಯ ಗರ್ಭದಿಂದ ಭೂಮಿಗೆ ಬರುತ್ತಾನೋ ಆ ಕ್ಷಣದಿಂದಲೇ ಮನುಷ್ಯನ ಅನುಭವಗಳು ಒಂದೊಂದಾಗಿ ಅವನ ಬದುಕಿನ ಪಟ್ಟಿಗೆ ಸೇರಿಕೊಳ್ಳುತ್ತವೆ. ಮಹಾತಾಯಿಯ ಗರ್ಭದಿಂದ ಜನಿಸುವ ಹೊತ್ತಿನಿಂದ ಶುರುವಾದ ಅನುಭವ ಮತ್ತೇ ಭೂತಾಯಿಯ ಮಡಿಲಿಗೆ ಸೇರುವ ತನಕ ಅನುಭವಗಳು ಸಿಗುತ್ತವೆ ಅದು ಒಳ್ಳೆಯ ಅನುಭವಗಳು ಇರಬಹುದು ಅಥವಾ ಕೆಟ್ಟ ಅನುಭವಗಳೂ ಇರಬಹುದು ನಮಗೆ ನಮ್ಮ ಮೊದಲ ಅನುಭವ ಅರಿವಾಗುವುದು ತಾಯಿಯಿಂದಲೇ ಹೊರತು ಮತ್ತಾರಿಂದಲ್ಲ ಹೇಗೆಂದರೇ ನಾವು ಚಿಕ್ಕವರಿದ್ದಾಗ ತಂದೆ ತಾಯಿಯ ಮಾತು ಕೇಳದಿರುವಾಗ ತುಂಬಾ ಹಠ ಮಾಡುವಾಗ ತಾಯಿ ಹೇಳುತ್ತಾಳೆ ಅಯ್ಯೋ ಇದು ” ನಿನ್ನ ಹಠ ಇವತ್ತಿಂದಲ್ಲ ನೀನು ಹುಟ್ಟುವಾಗಲೇ ನಿನ್ನಿಂದ ಬಹಳಷ್ಟು ಕಷ್ಟ ಅನುಭವಿಸಿದ್ದೇನೆ ” ಅಂತ ತಂದೆಯ ಮುಂದೆ ಅಥವಾ ಸಂಬಂಧಿಕರ ಮುಂದೆ ಅಷ್ಟೇ ಮುದ್ದಾಡುತ್ತಾ ಹೇಳುತ್ತಾಳೆ ಯಾಕೆಂದರೇ “ಹೆತ್ತವರಿಗೆ ಹೆಗ್ಗಣವೂ ಮುದ್ದು” ಅಲ್ವಾ ಅದಕ್ಕೆ ಹಾಗೇ ಮುಂದೆ ಮಕ್ಕಳು ಅಂಬೇಗಾಲು, ಒಂದೊಂದು ಪುಟ್ಟ ಪುಟ್ಟ ಹೆಜ್ಜೆ ಹಾಕಿ ಹಾಗೇ ಯಾರ ಸಹಾಯವಿಲ್ಲದೆ ಸ್ವತಂತ್ರವಾಗಿ ನಡೆಯುತ್ತಾ ಒಂದೊಂದು ಸ್ವ ವಿಚಾರಗಳು ತಲೆಯಲ್ಲಿ ಹೊಳೆಯುವ ಸಮಯಕ್ಕೆ ಶಾಲೆಗೆ ಸೇರುತ್ತಾರೆ ಮತ್ತು ಆ ಶಾಲೆಯಲ್ಲಿಯೂ ಕೂಡ ಹಲವಾರು ಅನುಭವಗಳನ್ನು ಅನುಭವಿಸಿ ಅದೇ ಅನುಭವಗಳಿಂದ ಮುಂದೆ ಹೆಚ್ಚಿನ ಶಿಕ್ಷಣಕ್ಕೆ ತೇರ್ಗಡೆಯಾಗಿ ಅಂದರೇ ಪ್ರಾಥಮಿಕ ಅನುಭವಗಳನ್ನು ಪ್ರೌಢ ಶಿಕ್ಷಣದಲ್ಲಿ ಪ್ರೌಢ ಶಿಕ್ಷಣದ ಅನುಭವಗಳನ್ನು ಕಾಲೇಜು ಶಿಕ್ಷಣದಲ್ಲಿ ಕಾಲೇಜು ಶಿಕ್ಷಣದ ಅನುಭವಗಳನ್ನು ಮದುವೆಯಾದ ಹೆಂಡತಿಯೊಂದಿಗೆ ಮಕ್ಕಳೊಂದಿಗೆ ಕೊನೆಗೆ ವಯಸ್ಸಾದಾಗ ತಮ್ಮ ಗೆಳೆತನದವರೊಂದಿಗೆ ಹಾಗೂ ಮೊಮ್ಮಕ್ಕಳೊಂದಿಗೆ ತಾವು ಕಳೆದ ಬದುಕಿನ ದಿನಗಳನ್ನು ಮತ್ತು ಆ ದಿನಗಳಲ್ಲಿ ಎದುರಾದ ಕಷ್ಟ ಸುಖಗಳ ಕ್ಷಣಗಳನ್ನು ಮತ್ತು ಅನುಭವಗಳನ್ನು ಮತ್ತೊಮ್ಮೆ ಮೆಲಕು ಹಾಕುತ್ತಾ ಕಳೆದ ಹಿಂದಿನ ಜೀವನಕ್ಕೆ ಒಂದಿಷ್ಟು ಹೆಜ್ಜೆಗಳನ್ನು ಇಡುತ್ತಾರೆ.
ಈ ಎಲ್ಲಾ ಅನುಭವಗಳು ಸಾಧನೆಯ ಅನುಭವಗಳು ಆಗಿರುತ್ತವೆ ಹೇಗೆಂದರೇ ಕಷ್ಟದ ಅನುಭವಗಳಿಂದ ಅಂದರೇ ಬಹಳ ಬಡತನದ ಪರಿಸ್ಥಿತಿಯಲ್ಲಿ ತಂದೆ ತಾಯಿ ಹೇಗೋ ಕೂಲಿ ನಾಲಿ ಮಾಡಿ ಮಕ್ಕಳನ್ನು ಸಾಕಿ ಸಲುಹಿ ಅವರಿಗೆ ಶಿಕ್ಷಣವನ್ನು ಕೊಡಿಸಿ ಒಬ್ಬ ಅಧಿಕಾರಿಯನ್ನೋ ರಾಜಕಾರಣಿಯನ್ನೋ ಶಿಕ್ಷಕನನ್ನೋ ತಾಯಾರು ಮಾಡುವಲ್ಲಿ ತಂದೆ ತಾಯಿಗಳ ಪಾತ್ರ ಬಹು ಮುಖ್ಯವಾಗಿರುತ್ತದೆ ಮತ್ತು ಆ ಅನುಭವಗಳು ಬಹಳ ಕಠೋರವಾದ ಅನುಭವಗಳಾಗಿರುತ್ತವೆ. ಇಂತಹ ಕಠೋರ ಅನುಭವಗಳೇ ಮನುಷ್ಯನ ಪ್ರತೀ ಸಾಧನೆಗೆ ಮೂಲ ಕಾರಣವಾಗಿರುತ್ತವೆ ಹಾಗೂ ಆ ಎಲ್ಲಾ ಸಾಧನೆಗಳ ಮೆಟ್ಟಿಲನ್ನು ಏರಲು ಕಾರಣವಾದ ಅನುಭವಗಳಿಗೆ ತಂದೆ ತಾಯಿಯರ ಬೆವರಿನ ಹನಿಯೂ ಕೂಡ ಅರ್ಪಣೆಯಾಗಿರುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕಿದೆ.

ಪ್ರತಿಯೊಂದು ಕ್ಷೇತ್ರದಲ್ಲಿ ಅಂದರೇ ಸಾಮಾಜಿಕ, ಶೈಕ್ಷಣಿಕ, ರಾಜಕೀಯ,ಚಲನಚಿತ್ರ, ಸಾಹಿತ್ಯ, ಸಂಗೀತ, ಕ್ರೀಡೆ, ವ್ಯಾಪಾರ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅದೆಷ್ಟೋ ಮಹಾನ್ ಸಾಧಕರ ಜೀವನದ ಕಥೆ ಬಹಳ ಕಠೋರವಾದ ಮೆಟ್ಟಿಲುಗಳನ್ನು ಹತ್ತಿ ಅನುಭವಿಸಿ ಬಂದಿರುವಂತಹ ಕ್ಷಣಗಳಾಗಿರುತ್ತವೆ. ಉಪವಾಸ ವನವಾಸ ಬಿದ್ದು ತಂದೆ ತಾಯಿಗಳು ತಮ್ಮ ಮಕ್ಕಳನ್ನು ಓದಿಸಿ ವಿದ್ಯೆ ಕೊಡಿಸಿ ಮುಂದೆ ಯಾವುದೋ ಒಂದು ಸರ್ಕಾರಿ ಅಥವಾ ಖಾಸಗಿ ಹುದ್ದೆಯಲ್ಲಿ ನೋಡಬೇಕು ಅವನು ನಾಲ್ಕು ಜನರಿಗೆ ಒಳ್ಳೆಯ ನಾಯಕನಾಗಿರಬೇಕು ಅಧಿಕಾರಿಯಾಗಿರಬೇಕು ಮನೆಯಿಂದ ಹೊಸ್ತಿಲು ದಾಟಿ ಹೊರಗೆ ಹೊರಟರೆ ಸಾಕು ಊರು ತುಂಬಾ ನೂರಾರು ಜನರ ಬಾಯಲ್ಲಿ ಬರೀ ಮಗನ ಮಗಳ ಹೆಸರು ಕೇಳುವಂತಿರಬೇಕು ಅದನ್ನು ಕೇಳಿದ ನಮಗೆ ಎಲ್ಲಿಲ್ಲದ ಸಂತೋಷ ಅಂದರೇ ಗರ್ಭದಿಂದ ಮಗು ಹುಟ್ಟುವಾಗ ತಾಯಿ ಅನುಭವಿಸುವ ಹೆರಿಗೆ ನೋವು ಎಷ್ಟು ಕಠೋರವಾಗಿರುತ್ತದೆಯೋ ಅಷ್ಟೇ ಸುಖ ಶಾಂತಿ ನೆಮ್ಮದಿ ಸಿಗುವಂತಹ ಅನುಭವವಾಗಬೇಕು ಅನ್ನೋ ಒಂದು ಉದ್ದೇಶ ಪ್ರತೀ ಹೆತ್ತವರ ಕನಸಾಗಿರುತ್ತದೆ. ಇಂತಹ ಕನಸುಗಳು ನನಸಾಗುವಲ್ಲಿ ಅಥವಾ ನನಸಾಗಿಸುವಲ್ಲಿ ಸಾವಿರಾರು ಅನುಭವಗಳು ಸಿಗುತ್ತವೆ ಮತ್ತು ಆ ಸಾವಿರಾರು ಅನುಭವಗಳೇ ಪ್ರತಿಯೊಂದು ಸಾಧನೆಗಳಿಗೆ ಮೂಲ ಕಾರಣಗಳಾಗಿರುತ್ತವೆ. ಪ್ರತಿಯೊಂದು ಅನುಭವಗಳೂ ಸಾಧನೆಯ ಪ್ರತಿಯೊಂದು ಮೆಟ್ಟಿಲುಗಳಾಗಿತ್ತವೆ ಮತ್ತು ಆ ಅನುಭವಗಳೇ ನಮ್ಮನ್ನು ಗಟ್ಟಿತನಗೊಳಿಸುತ್ತವೆ ಮತ್ತು ಬದುಕಿನಲ್ಲಿ ಜಾಗೃತರನ್ನಾಗಿ ಮಾಡುವಲ್ಲಿ ಸಹಕರಿಸುತ್ತವೆ. ಹೀಗೆ ಹಲವಾರು ಕನಸುಗಳನ್ನು ಹೊತ್ತ ಹೆತ್ತವರೊಂದಿಗೆ ಮಕ್ಕಳೂ ಕೂಡ ಹೆತ್ತವರ ಕನಸನ್ನು ನನಸು ಮಾಡಬೇಕು ಎನ್ನುವ ಆಸೆಯನ್ನು ಹೊತ್ತು ಪ್ರತೀ ಕ್ಷಣದ ಕಷ್ಟಗಳನ್ನು ಅನುಭವಿಸುತ್ತಾರೆ ಸರಿಯಾದ ಸಮಯಕ್ಕೆ ಊಟ ನಿದ್ರೆ ನೆಮ್ಮದಿ ಶಾಂತಿ ಸಿಗದೇ ಬರೀ ಕನಸಿನ ಕುದುರೆಯನ್ನು ಬೆನ್ನತ್ತಿ ಹೋಗುವ ಆತುರದಲ್ಲಿ ಮತ್ತು ಕರ್ತವ್ಯದಲ್ಲಿ ತಮ್ಮ ಬದುಕಿನ ಮುಖ್ಯ ಜವಾಬ್ದಾರಿ ಹಾಗೂ ಜೀವನದ ಮೂಲ ಉದ್ದೇಶವನ್ನೇ ಮರೆತು ಸಾಧಿಸಬೇಕು ಇಲ್ಲದಿದ್ದರೆ ಬದುಕೇ ಇಲ್ಲ ಎನ್ನೋ ಒಂದೇ ಉದ್ದೇಶದಿಂದ ಸಾವಿನ ಕುದುರೆಯನ್ನು ಹತ್ತಿದಂತಹ ಅದೆಷ್ಟೋ ಉದಾಹರಣೆಗಳು ಸಿಗುತ್ತವೆ ಯಾಕೆಂದರೇ ಕುಟುಂಬದ ಬಡತನದ ಪರಿಸ್ಥಿತಿ ಹಾಗೂ ಹೆತ್ತವರ ಕನಸನ್ನು ನನಸಾಗಿಸುವಲ್ಲಿ ವಿಫಲ ಮತ್ತು ಕನಸಿನ ಕುದುರೆಯ ಹಿಂದೆ ಬಿದ್ದು ತಮ್ಮ ಆರೋಗ್ಯದ ಕಡೆ ಗಮನ ಹರಿಸದೇ ಅನಾರೋಗ್ಯದಿಂದ ಯಾವುದೋ ಖಾಯಿಲೆಗೆ ತುತ್ತಾಗಿ ಸಾವನ್ನಪಿದ ಉದಾಹರಣೆಗಳು ಹಾಗೂ ಕುಟುಂಬದ ಕೆಟ್ಟ ಸ್ಥಿತಿಯ ಅನುಭವಗಳನ್ನು ಆಗಾಗ ಮೆಲಕು ಹಾಕುತ್ತಾ ಸಾಧನೆಯನ್ನು ಮಾಡದೇ ಇದ್ದಾಗ ಸ್ವ ಇಚ್ಛೆಯಿಂದ ಆತ್ಮ ಹತ್ಯೆಗೆ ಶರಣಾಗುವುದು ಹೀಗೆ ಹಲವಾರು ಉದಾಹರಣೆಗಳು ಸಿಗುತ್ತವೆ ಈ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಉದಾಹರಣೆಗಳ ಸಾಧನೆಗಳಿಗೆ ಅನುಭವಗಳೇ ಕಾರಣವಾಗಿರುತ್ತವೆ.

ಏಕೆಂದರೆ ಸರಿಯಾದ ಸಮಯಕ್ಕೆ ಅಂದರೇ ಅವರ ವಿದ್ಯೆಗೆ ಅನುಗುಣವಾಗಿ ಸರ್ಕಾರಿ ನೌಕರಿ ಸಿಗದೇ ಇರುವುದು, ಕಾಲ ಕಾಲಕ್ಕೆ ಅಧಿಸೂಚನೆ ಬರದೇ ಇರುವುದು ಉದ್ಯೋಗದಲ್ಲಿ ಮೋಸ ವಂಚನೆ ಬಡತನ ಪರಿಸ್ಥಿತಿಯ ಸಲುವಾಗಿ ತಮ್ಮ ಓದು ಮತ್ತು ಮನೆಯ ಜವಾಬ್ದಾರಿಯನ್ನು ನಿಭಾಯಿಸಿ ಓದಿದಾಗ ಹೀಗೆ ಹಲವಾರು ವಿಚಾರಗಳಿಂದ ಕಂಡ ಕನಸುಗಳು ನನಸಾಗುವಲ್ಲಿ ತಡವಾಗಬಹುದು ಅಥವಾ ಒಂದೊಮ್ಮೆ ಕನಸಿನ ಮಾರ್ಗವೂ ಬದಲಾಗಬಹುದು ಹಾಗಾಗಿ ಹೆತ್ತವರು ದಯವಿಟ್ಟು ನಿಮ್ಮ ಮಕ್ಕಳಲ್ಲಿ ಕನಸನ್ನು ಇಡುವುದು ತಪ್ಪಲ್ಲ ಒಬ್ಬ ಅಧಿಕಾರಿಯನ್ನು ಕಾಣುವುದು ತಪ್ಪಲ್ಲ ಆದರೇ ಓದಿಸಿದ್ದಕ್ಕೆ ಅಧಿಕಾರಿಯೇ ಆಗಬೇಕು ಸರ್ಕಾರಿ ನೌಕರನೇ ಆಗಬೇಕು ಎಂಬಂತಹ ಕನಸನ್ನು ಅವರ ಹೆಗಲ ಮೇಲೆ ಇಡಬೇಡಿ ಒಬ್ಬ ಒಳ್ಳೆಯ ಪ್ರಜೆಯನ್ನಾಗಿ ಕಾಣಿ ಮಾನವೀಯ ಗುಣಗಳನ್ನು ಹೊಂದಿದ ಒಬ್ಬ ಒಳ್ಳೆಯ ವ್ಯಕ್ತಿಯನ್ನಾಗಿ ಕಾಣಿ ಯಾಕಂದರೆ ಅಕ್ಷರ ಜ್ಞಾನಕ್ಕಾಗಿ ಇರಲಿ ಯಾವುದೇ ಕೆಲಸಕ್ಕಾಗಿ ಅಲ್ಲ ಯಾವುದೇ ಘನತೆ ಗೌರವಕ್ಕಾಗಿ ಅಲ್ಲ ಅಕ್ಷರ ಜ್ಞಾನವೊಂದಿದ್ದರೆ ಸಾಕು ಎಲ್ಲವನ್ನೂ ಗೆಲ್ಲಬಲ್ಲ ಎಲ್ಲವನ್ನೂ ಪಡೆಯಬಲ್ಲ ತನ್ನಿಷ್ಟದಂತೆ ಬದುಕಬಲ್ಲ ಜಗತ್ತನ್ನೇ ಆಳಬಲ್ಲ ಅಕ್ಷರದಿಂದ ಜಗತ್ತಿನ ಸರ್ವಾಧಿಕಾರಿಯೂ ಆಗಬಲ್ಲ ಅಷ್ಟು ಶಕ್ತಿ ಅಕ್ಷರದಿಂದ ಪಡೆದ ಜ್ಞಾನಕ್ಕಿದೆ ಜ್ಞಾನ ತನ್ನನ್ನೇ ಅಷ್ಟೇ ಅಲ್ಲದೇ ತನ್ನ ಕುಟುಂಬವನ್ನಷ್ಟೇ ಅಲ್ಲದೇ ಇಡೀ ಜಗತ್ತನ್ನೇ ಆಳುತ್ತದೆ ಇಡೀ ಜಗತ್ತಿನ ಪ್ರತೀ ಮನೆ ಮನವನ್ನು ಬೆಳಗಿಸುತ್ತದೆ, ಪ್ರತಿಯೊಬ್ಬರಿಗೂ ದಾರಿ ದೀಪವಾಗುತ್ತದೆ. ಅಂಧರಿಗೂ, ವೃದ್ಧರಿಗೂ, ಮಹಿಳೆಯರಿಗೂ, ಅನಾಥರಿಗೂ, ನಿರ್ಗತಿಕರಿಗೂ ಅಕ್ಷರ ಮತ್ತು ಜ್ಞಾನ ಅನ್ನ ನೀಡುವುದಷ್ಟೇ ಅಲ್ಲದೇ ಬದುಕನ್ನೇ ಕಟ್ಟಿಕೊಡುತ್ತದೆ ಅಷ್ಟು ಶಕ್ತಿ ಪ್ರತೀ ಅಕ್ಷರಕ್ಕಿದೆ ಅಷ್ಟು ಶಕ್ತಿ ಪ್ರತೀ ಜ್ಞಾನಕ್ಕಿದೆ ಎನ್ನುವುದಕ್ಕೆ ಡಾ. ಬಿ. ಆರ್. ಅಂಬೇಡ್ಕರ್ ಅವರ ಬದುಕೇ ಜ್ಞಾನದ ಉದಾಹರಣೆಯಾಗಿದೆ. ಅಕ್ಷರದಿಂದ ಅವರ ಜ್ಞಾನ ಇಡೀ ಜಗತ್ತಿನ ತುಂಬೆಲ್ಲಾ ಪ್ರಜ್ವಲಿಸಿತು ಅವರು ಕಲಿತ ಅಕ್ಷರ ಜ್ಞಾನದಿಂದ ಯಾವ ಹುದ್ದೆಯನ್ನು ಬೇಡದೇ ಯಾವ ಹುದ್ದೆಯ ಹಿಂದೆ ಬೀಳದೇ ಒಲಿದ ಹುದ್ದೆ ಅಧಿಕಾರವನ್ನು ಮಹಿಳೆಯರ ಹಿತಕ್ಕಾಗಿ ಮಹಿಳೆಯರ ಸಬಲೀಕರಣಕ್ಕಾಗಿ ಹಾಗೂ ಸಮಾಜದ ಶೋಷಿತ ಮತ್ತು ತುಳಿತಕ್ಕೊಳಗಾದ ನಿರ್ಗತಿಕ ಎಲ್ಲಾ ಸಮುದಾಯಗಳ ರಕ್ಷಣೆಗಾಗಿ ಇರುವ ಅಧಿಕಾರವನ್ನೇ ತ್ಯಜಿಸಿ ಮುಂದೇ ಪಡೆದ ಜ್ಞಾನದ ಬಲದಿಂದ ಎಲ್ಲಾ ಸಮುದಾಗಳ ಬದುಕಿನ ಹಿತದೃಷ್ಟಿಗಾಗಿ ಇಡೀ ದೇಶಕ್ಕೆ ಪ್ರತಿಷ್ಟಿತವಾದ ಸಂವಿಧಾನವನ್ನು ಬರೆದು ಪ್ರತಿಯೊಬ್ಬರಿಗೂ ನ್ಯಾಯ ದೊರೆಯುವಂತೆ ಮಾಡಿದ ಏಕೈಕ ಮಾನವ ಬೆಳಕು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ತಮ್ಮ ಅಕ್ಷರ ಜ್ಞಾನದ ಬಲದಿಂದ ಇಂದು ಇಡೀ ವಿಶ್ವಕ್ಕೆ ವಿಶ್ವಜ್ಞಾನಿಯಾಗಿದ್ದಾರೆ ಮತ್ತು ಅವರ ಕುಟುಂಬದ ಪರಿಸ್ಥಿತಿ, ತಾವು ಅನುಭವಿಸಿದ ಸಾಮಾಜಿಕ ಸ್ಥಿತಿಗತಿ ಹಾಗೂ ಅವರ ಛಲ ಮತ್ತು ಅವರು ನಡೆದ ದಾರಿ ಎಂತಹ ಕಠಿಣವಾಗಿತ್ತು ಮತ್ತು ಕೊನೆಗೂ ಅಂದುಕೊಂಡದ್ದನ್ನೇ ಸಾಧಿಸಿಯೇ ಬಿಟ್ಟರು ಎಂಬುದು ನಮಗೆಲ್ಲರಿಗೂ ತಿಳಿದ ವಿಷಯವಾಗಿದೆ ಮತ್ತು ಸಾಧನೆ ಹೀಗೂ ಇದೆ ಎನ್ನುವುದಕ್ಕೆ ಇದೊಂದು ಪ್ರಮುಖ ನಿದರ್ಶನವಾಗಿದೆ.

ಹೀಗೆ ಪ್ರತಿಯೊಬ್ಬರ ಜೀವನ ಪಯಣ ವಿಭಿನ್ನವಾಗಿರುತ್ತದೆ ಏರಿಳಿತಗಳು ತೆಗ್ಗು ದಿಣ್ಣೆಗಳು ಕಂಡ ಕನಸಿಗೆ ಅಡ್ಡಗಾಲು ಹಾಕುವಂತೆ ಆಗಾಗ ಎದುರಾಗುತ್ತವೆ ಅಂತಹ ಸಮಯದಲ್ಲಿ ನಮ್ಮ ನಿಲುವನ್ನು ಬದಲಾಯಿಸದೇ ಸಾಧಿಸಿದರೇ ಒಳಿತು ಇಲ್ಲದೇ ಹೋದರೇ ಜೀವನದ ಕಥೆಯೇ ಮುಗೀತು ಎನ್ನುವಂತಾಗುತ್ತದೆ.
ಹಾಗಾಗಿ ಸಿಕ್ಕ ಸಮಯದಲ್ಲಿ ಸಿಕ್ಕ ಅವಕಾಶವನ್ನು ಸಿಕ್ಕ ಮಾರ್ಗದಲ್ಲೇ ಪಡೆದು ಜೀವನದ ದಡ ಸೇರುವುದು ಒಳಿತು ಎಂಬುದನ್ನು ಹೆತ್ತವರು ಮಕ್ಕಳಿಗೆ ತಿಳಿಸಿ ಅವರ ತಲೆಯಲ್ಲಿ ಸಕಾರಾತ್ಮಕ ಭಾವನೆಗಳನ್ನು ವಿಚಾರಗಳನ್ನು ತುಂಬಬೇಕು ಹಾಗೂ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತನ್ನ ಮತ್ತು ಕುಟುಂಬದ ಪರಿಸ್ಥಿತಿಯನ್ನು ನೀಗಿಸಲು ಸರ್ಕಾರಿ ನೌಕರಿಯೇ ಮುಖ್ಯ ಅನ್ನುವ ನಂಬಿಕೆಯನ್ನು ಬಿಟ್ಟು ನೂರಾರು ಉದ್ಯೋಗದ ಅವಕಾಶಗಳಲ್ಲಿ ನಮ್ಮ ಬದುಕನ್ನು ಕಟ್ಟಿಕೊಳ್ಳಬಹುದು ಕುಟುಂಬವನ್ನು ನೋಡಿಕೊಳ್ಳಬಹುದು ಏನೂ ಇಲ್ಲವೆಂದರೂ ಕಲಿತ ಅಕ್ಷರದ ಜ್ಞಾನವನ್ನು ಕೃಷಿಯಲ್ಲಿ ಬಿತ್ತನೆ ಮಾಡಿ ಇಡೀ ಜಗತ್ತಿಗೆ ಅನ್ನವನ್ನು ನೀಡಿ ಜಗತ್ತಿನ ಜನತೆಯ ಹಸಿವನ್ನು ನೀಗಿಸಿ ಒಳ್ಳೆಯ ಮತ್ತು ಅತ್ಯುನ್ನತ ಪ್ರತಿಷ್ಠೆಯ ರೈತನಾಗಿ ನನ್ನ ಕುಟುಂಬದೊಂದಿಗೆ ನಗುನಗುತ್ತಾ ನಲಿದು ಹೆತ್ತವರೊಂದಿಗೆ ಕಾಲಕಳೆದು ಬದುಕುತ್ತೇನೆ ಎಂಬ ವಿಚಾರಗಳು ವಿಚಾರವಾದಿ ವಿದ್ಯಾವಂತರ ಮನದಲ್ಲಿ ಮೂಡಬೇಕಾಗಿದೆ ಇದಕ್ಕಿಂತ ಒಳ್ಳೆಯ ಉದ್ಯೋಗ ಬೇಕಾ? ಎಷ್ಟೇ ಕಲಿತು ಸರ್ಕಾರಿ ನೌಕರಿ, ಖಾಸಗಿ ನೌಕರಿ ಸಿಕ್ಕರೂ ಕೊನೆಗೆ ಒಂದಿಲ್ಲ ಒಂದು ದಿನ ತುಳಿಯಲೇ ಬೇಕಾದ ಮಾರ್ಗ ಕೃಷಿಯೊಂದೆ ಆ ಮಾರ್ಗ ಯಾರಿಗೂ ದೂರುವುದಿಲ್ಲ ಎಲ್ಲರನ್ನೂ ಎಲ್ಲರಿಗೂ ಬದುಕುವ ಅವಕಾಶ ನೀಡುವಂತಹ ಮಾರ್ಗ ಇದೊಂದೇ ಎಂಬುದನ್ನು ನಾವೆಲ್ಲರೂ ಅರಿಯಬೇಕಿದೆ.

  • ಹನುಮಂತ ದಾಸರ ಹೊಗರನಾಳ
    ಯುವ ಬರಹಗಾರರು.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ