ಬಳ್ಳಾರಿ / ಕಂಪ್ಲಿ : ಪಟ್ಟಣವನ್ನು ವಿಜಯನಗರ ಸಾಮ್ರಾಜ್ಯದ ದ್ವಾರ ಎಂದು ಕರೆಯಲಾಗುತ್ತದೆ. ಪ್ರವಾಸಿ ಆಕರ್ಷಣೆಗಳಲ್ಲಿ ಸೋಮನಾಥ ದೇವಾಲಯ ಮತ್ತು ಗಂಡುಗಲಿ ಕುಮಾರರಾಮ ಕೋಟೆ ಸೇರಿವೆ.
ಕಂಪ್ಲಿ ಪಟ್ಟಣವು ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಅನೇಕ ಐತಿಹಾಸಿಕ ಮಹತ್ವದ ಸ್ಥಳಗಳನ್ನು ಹೊಂದಿದೆ. ಈ ಪಟ್ಟಣವನ್ನು ವಿಜಯನಗರ ಸಾಮ್ರಾಜ್ಯದ ದ್ವಾರ ಎಂದು ಕರೆಯಲಾಗುತ್ತದೆ. ಇದು ಸೋಮನಾಥ ದೇವಾಲಯ, ಗಂಡುಗಲಿ ಕುಮಾರರಾಮನ ಕೋಟೆ, ಬಡೇ ಸಾಹೇಬರ ದರ್ಗಾ ಸೇರಿದಂತೆ ಪ್ರವಾಸಿಗರನ್ನು ಆಕರ್ಷಿಸುವ ಅನೇಕ ಇತರ ಸ್ಥಳಗಳನ್ನು ಹೊಂದಿದೆ.
ಮಾನ್ಯ ಶಾಸಕರಾದ ಜೆ.ಎನ್. ಗಣೇಶ, ಅವರ ನೇತೃತ್ವದಲ್ಲಿ ಕಂಪ್ಲಿ ಉತ್ಸವ 2023 ರಲ್ಲಿ ಅದ್ದೂರಿಯಾಗಿ ನಡೆದಿತ್ತು. 2024ನೇ ಇಸ್ವಿಯಲ್ಲಿ ಕಾರಣಾಂತರಗಳಿಂದ ನಡೆಯಲಿಲ್ಲ, ಆದರೆ ಈ ವರ್ಷ ಮಾನ್ಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಕಂಪ್ಲಿ ಉತ್ಸವದ ಬಗ್ಗೆ ಗಮನಹರಿಸಬೇಕು. ಉತ್ಸವದ ಲಾಂಛನ ಕಂಪ್ಲಿ ಇತಿಹಾಸದ ಕುರುಹು ಆಗಬೇಕು. ಜೊತೆಗೆ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ಸಿಗಬೇಕು. ಆದರೆ ಈ ವರ್ಷ ಕಂಪ್ಲಿ ಉತ್ಸವ ಕಲಾರತಿ ನಡೆಯಬಹುದೇ ? ಎಂದು ಕಂಪ್ಲಿಯ ಸಾರ್ವಜನಿಕರ ಪ್ರಶ್ನೆಯಾಗಿದೆ.
ವರದಿ : ಜಿಲಾನ್ ಸಾಬ್ ಬಡಿಗೇರ




















