ಇಂಡಿ: ಕರ್ನಾಟಕ ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಲಿಂಬೆ ನಾಡು ಇಂಡಿ ಬ್ರಿಟೀಷರ ಕಾಲದಿಂದಲೂ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು ಈ ಭಾಗದಲ್ಲಿ ಹೇಳಿಕೊಳ್ಳುವಷ್ಟು ಅಭಿವೃದ್ಧಿಗಳಾಗಿಲ್ಲ ಶಾಸಕ ಯಶವಂತರಾಯಗೌಡ ಪಾಟೀಲ ಕಳೆದ ಎರಡು ಅವಧಿಗಳಲ್ಲಿ ಶಾಸಕರಾದ ನಂತರ ಅಭಿವೃದ್ಧಿಯ ದಶದಿಕ್ಕುಗಳನ್ನ ಬದಲಾವಣೆ ಮಾಡಿದ್ದಾರೆ. ಶಾಸಕ ಯಶವಂತರಾಯಗೌಡ ಪಾಟೀಲ ಹ್ಯಾಟ್ರಿಕ್ ವಿಜಯ ಸಾಧಿಸಿರುವುದರಿಂದ ದೂರದೃಷ್ಠಿಯ ನಾಯಕನಿಗೆ ಸಚಿವ ಸ್ಥಾನ ನೀಡಿ ಈ ಭಾಗದ ಸರ್ವೋತೋಮುಖ ಪ್ರಗತಿಗೆ ಕಾಂಗ್ರೆಸ್ ವರಿಷ್ಠರು ಸಹಕಾರ ನೀಡಬೇಕು ,
ಈ ಗಡಿ ಭಾಗದ ಇಂಡಿ ತಾಲೂಕ ನಂಜುಂಡಪ್ಪ ವರದಿಯ ಪ್ರಕಾರ ಅತಿ ಹಿಂದುಳಿದ ಪ್ರದೇಶವಾಗಿದೆ. ಆದ್ದರಿಂದ ಈ ಭಾಗ ಪ್ರಗತಿ ಕಾಣಬೇಕಾದರೆ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು. ಅಲ್ಲದೆ ನಮ್ಮ ದೇಶ ಸ್ವಾತಂತ್ರ ದೊರಕಿದ ನಂತರ ಇಲ್ಲಿಯವರೆಗೂ ಇಂಡಿ ಮತಕ್ಷೇತ್ರಕ್ಕೆ ಸಚಿವ ಸ್ಥಾನ ದೊರಕದ ಇರುವುದು ನಮ್ಮ ದೌರ್ಭಾಗ್ಯ, ಆದರೆ ಹ್ಯಾಟ್ರಿಕ್ ಗೆಲುವು ಸಾಧಿಸಿದ ನಮ್ಮ ಶಾಸಕರಾದ ಯಶವಂತರಾಯಗೌಡರಿಗೆ ಸಚಿವ ಸ್ಥಾನ ನೀಡುವುದು ಸೂಕ್ತವಾಗಿದೆ.
ಹಿಂದುಳಿದ ಇಂಡಿ ತಾಲೂಕಿನ ಅಭಿವೃದ್ಧಿ ಹಿತದೃಷ್ಠಿಯಿಂದ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ರಾಜ್ಯ ಅಸ್ಪಶ್ಯತೆ ಜಾತಿಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಸೋಮಶೇಖರ ಮ್ಯಾಕೇರಿ, ಕಾರ್ಯದರ್ಶಿ ರಾಜು ಪಡಗಾನೂರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಉಪವಿಭಾಗಾಧಿಕಾರಿ ಹಾಗೂ ಉಪ ವಿಭಾಗೀಯ ದಂಡಾಧಿಕಾರಿ ಆದ ರಾಮಚಂದ್ರ ಗಡ್ದೆ ಅವರಿಗೆ ಮನವಿ ಪತ್ರ ಕೊಡಲಾಯಿತು.
ಈ ಒಂದು ಸಂದರ್ಭದಲ್ಲಿ ಮಲ್ಲಿಕಾರ್ಜುನ ಮಡ್ಡಿಮನಿ, ಯಲ್ಲಪ್ಪ ಕೊಳೂರಗಿ, ಪರಶುರಾಮ ಗಾಯಕವಾಡ, ನಾಗೇಶ ತಳಕೇರಿ,ನಾಗೇಂದ್ರ ಮೇತ್ರಿ, ಮಹಾದೇವ ಹೊಸಮನಿ, ಶರಣಬಸು ಕಟ್ಟಿಮನಿ, ಹಣಮಂತ ಹೊಸಮನಿ, ಕಲ್ಲಪ್ಪ ಅಂಜುಟಗಿ, ಗಂಗೂ ಬೇಡರ , ಸಂಜೀವ ಅಹಿರಸಂಗ ಇತರರು ಉಪಸ್ಥಿತರಿದ್ದರು.
ವರದಿ. ಅರವಿಂದ್ ಕಾಂಬಳೆ ಇಂಡಿ