ಇಲಕಲ್/ಕಂದಗಲ್ಲ:ರಾಸಾಯನಿಕ ಗೊಬ್ಬರ ದುಬಾರಿಯಾಗಿದೆ ಎಂದರೆ ಅದಕ್ಕಿಂತಲೂ ಈಗ ತಿಪ್ಪೆ ಗೊಬ್ಬರವು ಹೆಚ್ಚಿನ ದುಬಾರಿಯಾಗಿದೆ ಅಷ್ಟೇ ಅಲ್ಲ ಕೈಯಲ್ಲಿ ರೊಕ್ಕ ಹಿಡಿದುಕೊಂಡು ಊರೂರು ಅಲೆದರು ತಿಪ್ಪೆ ಗೊಬ್ಬರ ಸಿಗುತ್ತಿಲ್ಲ ಈಗ ತಿಪ್ಪೆ ಗೊಬ್ಬರಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಒಂದು ಟ್ಯಾಕ್ಟರ್ ಕೊಟ್ಟಗೆ ಗೊಬ್ಬರಕ್ಕೆ ರೂ 4000 ದಿಂದ 5,000 ರೂ.ಒಂದು ಚಕ್ಕಡಿ ಗೊಬ್ಬರಕ್ಕೆ 800 ರೂ 1000 ರೂ ಗಳವರೆಗೆ ಏರಿಕೆಯಾಗಿದೆ.ಗೊಬ್ಬರ ಖರೀದಿಸಿದವರೇ ಆಳು ಮಾಡಿಕೊಂಡು ಏರಿಸಿಕೊಂಡು ಹೋಗಬೇಕು.ಗೊಬ್ಬರದಲ್ಲಿ ಸಗಣಿಗಿಂತ ಹೆಚ್ಚು ಕಸವೇ ತುಂಬಿಕೊಂಡಿದೆ ಎಂದು ಏನಾದರೂ ಅಂದರೆ ಆ ಗೊಬ್ಬರವೂ ಸಿಗುವುದಿಲ್ಲ.
ಮುಂಗಾರು ಹಿಂಗಾರು ಹಂಗಾಮಿಗಾಗಿ ಮರಡಿ ಜಮೀನು ಹಾಗೂ ಎರೆ ಜಮೀನು ಮಿಶ್ರಿತ ಹೊಲಗಳನ್ನು ಸಿದ್ದಪಡಿಸುತ್ತಿರುವ ರೈತರಿಗೆ ತಿಪ್ಪೇ ಗೊಬ್ಬರ ಹಾಕಲು ಸಕಾಲವಾಗಿದೆ ಗೊಬ್ಬರ ಮಣ್ಣಿನಲ್ಲಿ ಮಿಶ್ರ ಮಾಡಿದ ನಂತರ ಉತ್ತಮ ಮಳೆಯಾದರೆ ಕೈಗೆ ಬೆಳೆ ಬಂದಂತೆ ಸರಿ ಎಂಬುದು ರೈತರ ಅನುಭವ ಅಲ್ಲದೆ ಮುಂದಿನ ಹಿಂಗಾರು ಮಳೆಗೆ ಗೊಬ್ಬರ ಹಾಕುವ ಪ್ರಮೇಯೇ ಬರುವುದಿಲ್ಲ.ಈ ಕಾರಣವಾಗಿ ರೈತರು ಕೈಯಲ್ಲಿ ಹಣ ಹಿಡಿದುಕೊಂಡು ತಿಪ್ಪೆಯ ಗೊಬ್ಬರಕ್ಕಾಗಿ ಸುತ್ತುತ್ತಿರುವುದು ಕಂಡು ಬರುತ್ತಿದೆ ವರ್ಷದಿಂದ ವರ್ಷಕ್ಕೆ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ತಿಪ್ಪೆ ಗೊಬ್ಬರದ ಅಭಾವಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಹತ್ತಿಪ್ಪತ್ತು ವರ್ಷಗಳ ಹಿಂದಿನ ಮಾತು ಆ ದಿನಗಳಲ್ಲಿ ಪ್ರತಿಯೊಬ್ಬ ರೈತನ ಮನೆಯಲ್ಲಿ ಎತ್ತು ಎಮ್ಮೆ ಆಕಳು ಹತ್ತಾರು ದನ ಕರುಗಳು ಇರುತ್ತಿದ್ದವು ಈಗ ಪ್ರತಿಯೊಂದು ಹಳ್ಳಿಗಳ ಬಹುತೇಕ ರೈತರ ಮನೆಗಳಲ್ಲಿ ಜಾನುವಾರುಗಳೇ ಕಾಣುತ್ತಿಲ್ಲ ಸಗಣಿ ದನಗಳ ಮೂತ್ರ ಮುಟ್ಟದೆ ಕೃಷಿ ಮಾಡುವ ರೈತರು ಹೆಚ್ಚಾಗಿರುವುದರಿಂದ ತಿಪ್ಪೇ ಗೊಬ್ಬರದ ಬರ ಆವರಿಸಿದೆ ಬಿತ್ತನೆಯ ಸೇರಿದಂತೆ ಭೂಮಿ ಉಳುಮೆ ಮಾಡಲು ಟ್ರ್ಯಾಕ್ಟರ್ ಬಳಕೆ ಹೆಚ್ಚಾಗಿರುವುದರಿಂದ ಎತ್ತುಗಳ ಸಂಖ್ಯೆ ಕಡಿಮೆಯಾಗಿದೆ ಎಂಬುದು ರೈತರ ಅನುಭವಕ್ಕೆ ಬಂದ ಮಾತಾಗಿದೆ ಈಗ ರಾಸಾಯನಿಕ ಗೊಬ್ಬರದ ಬೆಲೆಯು ದುಬಾರಿಯಾಗಿದೆ ರಾಸಾಯನಿಕ ಗೊಬ್ಬರ ಬಳಸಿ ಬಿತ್ತನೆ ಮಾಡಿದರೆ ಅದು ಒಂದೇ ಬೆಳಗಷ್ಟೇ ಸೀಮಿತವಾಗಿರುತ್ತದೆ.
ಸಾವಯವ ಸಂಯುಕ್ತಗಳನ್ನು ಹೊಂದಿರುವ ಕೊಟ್ಟಿಗೆ ಗೊಬ್ಬರವನ್ನು ರೈತರು ಒಂದು ಬಾರಿ ಜಮೀನುಗಳಿಗೆ ಹಾಕಿದರೆ ನಾಲ್ಕಾರು ವರ್ಷ ಮಣ್ಣು ಅತ್ಯಂತ ಶಕ್ತಿ ಹೊಂದಿರುತ್ತದೆ. ಜೊತೆಗೆ ಮಣ್ಣು ಹಗುರವಾಗಿ ಸಸ್ಯದ ಬೇರುಗಳಿಗೆ ಸರಳವಾಗಿ ಗಾಳಿ ಸಿಗುವಂತೆ ಹಾಗೂ ಹೆಚ್ಚು ತೇವಾಂಶವನ್ನು ಕಾಪಾಡುತ್ತದೆ.
ಗ್ರಾಮಗಳ ಸುತ್ತಮುತ್ತ ತಿಪ್ಪೆಗಳು ಕಾಣಿಸಿದರು ಅವುಗಳನ್ನು ಮಾರುವುದರ ಬದಲು ತಮ್ಮ ಹೊಲಗಳಿಗೆ ಬಳಕೆ ಮಾಡಿಕೊಳ್ಳುವ ರೈತರೇ ಹೆಚ್ಚು.ದನ ಕರುಗಳಿಲ್ಲದೆ ರೈತರು ಅನಿವಾರ್ಯವಾಗಿ ತಿಪ್ಪೆ ಖರೀದಿಗಾಗಿ ಹೋಗಬೇಕು.ಕೆಲ ತಿಪ್ಪೆಗಳಲ್ಲಿ ಸಗಣಿಗಿಂತ ಹೆಚ್ಚು ಪ್ಲಾಸ್ಟಿಕ್ ತುಂಬಿಕೊಂಡಿರುತ್ತದೆ ಆದರೂ ರೈತರು ಅಂತ ಗೊಬ್ಬರ ಕರಿದಿಸಲು ಅಲೆದಾಡಿದರೂ ತಿಪ್ಪೇ ಗೊಬ್ಬರ ಸಿಗದ ಪರಿಸ್ಥಿತಿ ಇದೆ ಎಂದು ಸ್ಥಳೀಯ ರೈತರು ಹೇಳುತ್ತಾರೆ.
ಲೇಖನ:ವಿರೇಶ.ಚ.ಶಿಂಪಿ