ಸಿಂಧನೂರು ನಗರದ ನ್ಯಾಯಾಲಯ ಆವರಣದಲ್ಲಿ ಇಂದು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ರಾಯಚೂರು ಪೀಠ ಸ್ಥಳ ಸಿಂಧನೂರು ಉದ್ಘಾಟನಾ ಸಮಾರಂಭವನ್ನು ವನಸಿರಿ ಫೌಂಡೇಶನ್ (ರಿ).ರಾಜ್ಯ ಘಟಕ ರಾಯಚೂರು ಹಾಗೂ ಜಿಲ್ಲಾ ನ್ಯಾಯಾಂಗ,ರಾಯಚೂರು ಲೋಕೋಪಯೋಗಿ ಇಲಾಖೆ ರಾಯಚೂರು ಮತ್ತು ನ್ಯಾಯವಾದಿಗಳ ಸಂಘ ಸಿಂಧನೂರು ಸಂಯುಕ್ತಾಶ್ರಯದಲ್ಲಿ ಶ್ರೀ ಮಾರುತಿ ಎಸ್ ಬಾಗಡೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ರಾಯಚೂರು ಅಧ್ಯಕ್ಷತೆಯಲ್ಲಿ ಮತ್ತು ವನಸಿರಿ ಫೌಂಡೇಶನ್ (ರಿ) ರಾಜ್ಯ ಘಟಕ ರಾಯಚೂರು ಸಂಸ್ಥಾಪಕ ರಾಜ್ಯಾದ್ಯಕ್ಷರಾದ ಶ್ರೀ ಅಮರೇಗೌಡ ಮಲ್ಲಾಪೂರ ನೇತೃತ್ವದಲ್ಲಿ ಸಸಿ ನೆಟ್ಟು ನೀರುಣಿಸುವ ಮೂಲಕ ಉದ್ಘಾಟನೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಗೌರವಾನ್ವಿತ ಶ್ರೀ ಎಂ ಐ ಅರುಣ್ ನ್ಯಾಯ ಮೂರ್ತಿಗಳು ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿಗಳು ರಾಯಚೂರು,ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ವೆಂಕಟೇಶ ನಾಯಕ ಹಾಗೂ ಸಿಂಧನೂರು ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಶ್ರೀ ಭೀಮನಗೌಡ,ಮುನಿಸ್ವಾಮಿ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವನಸಿರಿ ಫೌಂಡೇಶನ್ ಸದಸ್ಯರು ಮತ್ತು ಹಲವಾರು ಜನರು ಉಪಸ್ಥಿತರಿದ್ದರು.