ಯಾದಗಿರಿ ಕಲ್ಯಾಣ ಕರ್ನಾಟಕ ಭಾಗದ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಶಹಾಪುರ, ಸುರಪುರ,ಕೆಂಭಾವಿ ಪಟ್ಟಣಗಳಲ್ಲಿ ಕಳೆದ ಒಂದು ವಾರದಿಂದ ಬಿಸಿಲಿನ ತಾಪಮಾನ 40 ರಿಂದ 42 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.ಬೆಳಿಗ್ಗೆಯಿಂದಲೇ ಬಿಸಿಲಿನ ಝಳ ತಾಳಲಾರದೆ ಅನೇಕರು ಮರ ಗಿಡಗಳ ಆಸರೆಗೆ ಮೊರೆ ಹೋಗುತ್ತಿದ್ದಾರೆ.ಇನ್ನು ಕೆಲವರು ಕೃತಕ ಗಾಳಿ ಸಲುವಾಗಿ ಫ್ಯಾನ್,ಎಸಿ,ಕೂಲರ್ ಮೊರೆ ಹೋಗುತ್ತಿದ್ದಾರೆ.
ಇದರ ಮಧ್ಯೆ ಬಿಸಿಲಿನ ತಾಪಮಾನ ತೀರಿಸಿ ಕೊಳ್ಳಲು ಎಳೆನೀರು,ಕಬ್ಬಿನ ರಸ,ಮಜ್ಜಿಗೆ ಹಾಗೂ ತಂಪು ಪಾನೀಯಗಳಿಗೆ ಜನರು ಮೊರೆ ಹೋಗುತ್ತಿದ್ದಾರೆ ದೃಶ್ಯ ಸರ್ವೇ ಸಾಮಾನ್ಯವಾಗಿದೆ.ನಗರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಹೊರತಾಗಿಲ್ಲ ಗ್ರಾಮಗಳಲ್ಲಿ ಹೆಚ್ಚಾಗಿ ವಿದ್ಯುತ್ ಕೈ ಕೊಡುತ್ತಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಜನರು ಮರಿಗಳ ನೆರಳಲ್ಲಿ ಕುಳಿತು ಕಾಲ ಕಳೆಯುತ್ತಿದ್ದಾರೆ.ಬೀದಿ ಬೀದಿಗಳಲ್ಲಿ ತಿರುಗಾಡುವ ಪ್ರಾಣಿಗಳು ನಾಯಿ, ಕುದುರೆ,ದನಕರುಗಳು.ಬಿಸಿಲಿನ ತಾಪಕ್ಕೆ ನಲುಗಿದ್ದು ನೆರಳಿದ್ದೆಡೆ ಪ್ರಾಣಿಗಳು ಧಾವಿಸಿ ಬರುತಿರುವ ದೃರ್ಶಯ ಸಾಮಾನ್ಯವಾಗಿದೆ.ಮದ್ಯಾಹ್ನ ಡಾಂಬರ ರಸ್ತೆಯಲ್ಲಿ ಬೆಂಕಿ ಉಂಡೆ ಉಗುಳಿದ ಅನುಭವವಾಗುತ್ತದೆ.
ಮುಂಜಾನೆ ಬಿಸಿಗಾಳಿಗೆ ಮತ್ತಷ್ಟು ಹೈರಾಣ ಆಗುವಂತೆ ಮಾಡಿದೆ ಇದರಿಂದ ವೃದ್ದರ ಹಾಗೂ ಮಕ್ಕಳ ಪಾಡು ಹೇಳತೀರದಾಗಿದೆ.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ