ಬಾಗಲಕೋಟೆ/ಬಾದಾಮಿ:ತಾಲೂಕಿನ ಕಬ್ಬಲಗೇರಿ ಗ್ರಾಮದ 17
ವರ್ಷದ ಬಾಲಕ ಚಿದಾನಂದ ಶಿವಪ ವಾಲಿಕಾರ
ಎಂಬಾತನು ಕಳೆದ ಒಂದು
ವಾರದ ಹಿಂದೆ ಮನೆಯಿಂದ ಹೊರ ಹೋದವನು
ಇದುವರೆಗೂ ಮನೆಗೆ ಬಂದಿರುವುದಿಲ್ಲ ಎಂದು
ಪೊಲೀಸ್ ಠಾಣೆಯಲ್ಲಿ ಬಾಲಕನ
ತಾಯಿ ಲಕ್ಷ್ಮವ್ವ ಶಿವಪ್ಪ ವಾಲಿಕಾರ ದೂರ
ದಾಖಲಿಸಿದ್ದಾರೆ.
ಬಾಲಕ ಬಾದಾಮಿಯ ಖಾಸಗಿ ಶಾಲೆಯಲ್ಲಿ 9
ನೇ ತರಗತಿ ಓದುತ್ತಿದ್ದು, ಆಸ್ಪತ್ರೆಗೆ ಹೋಗಿ
ಅಜ್ಜನನ್ನು ವಿಚಾರಿಸಿಕೊಂಡು ಬರುತ್ತೇನೆಂದು
ಹೋದವನು ಬಂದಿಲ್ಲ. ಯಾರಿಗಾದರು ಸುಳಿವು
ಸಿಕ್ಕಲ್ಲಿ ಪೊಲೀಸ್ ಠಾಣೆಗೆ ಇಲ್ಲವೆ ಈ ನಂಬರ್‌ಗಳಿಗೆ
ಸಂಪರ್ಕಿಸಲು ಕುಟುಂಬ ವರ್ಗದವರು ಮನವಿ
ಮಾಡಿದ್ದಾರೆ. 9482900774, 8217483015
ವರದಿ: ಶಿವದೇವಪ್ಪ.ಎಂ.ಹಟ್ಟಿ
