ಸರಸ ಕಾಶ್ಮೀರ ದೇಶದರಸ | ಆರುಸಾವಿರ ಜಂಗಮರನು | ಪೂಜಿಸುತ್ತ- ಲಿರಲವರೊಳು | ಈಶ್ವರತನ ಪಡೆದಿಹ ಶರಭ॥
ಬಸವ ಬಂಧುರ |
ಕಲ್ಯಾಣದೊಳೆಸೆವ |
ಅಸಮ ಗಣಂಗಳ |
ವರಿಸಲು ಬಂದಿಹ ಬಸವ ॥
ಮೊಸರುಬಾನ ಪರುಷ ಪ್ರಭಾವದಿ| ಪ್ರಸಾದ ಕಾಯ ಲಿಂಗ ರೂಪಾಗಿ ಪರಿವರ್ತಿಸಿ| ಹಸುಬೆಯೊಳು ಮರೆಮಾಡಿ| ಕಳುಹಿದ ಶರಭ ॥
ರುದ್ರ ವೀರಭದ್ರಾವತಾರ ಕಾಶ್ಮೀರ | ರಾಜನ ಮುದ್ರೆಯು ಮನೆಯೊಳಗಿರುವ ಪ್ರಮಥಗಣ ಆರುಸಾವಿರ | ಕದ್ದವನಾದತಿ ಶುದ್ಧ ಮೂರ್ತಿ ಚನ್ನವೀರ | ಬಸವನು ಕದ್ದು ತರಲು ಬಂದಾಧ್ಯರು
ಕೂಡಿದ ಧೀರ ॥
ಮುದ್ದು ಬಾಚಯ್ಯನು ಉದ್ಧರಿಸುತಲಿ| ವಿರುದ್ಧ ವಾದಿಗಳ ಸಾಧ್ಯದಿ ಜೈಸಿದ| ಬುದ್ಧಿವಂತರಿಗೆ ಸಾಧ್ಯನಾದ |
ಕನಕಾದ್ರಿ ಛಾಪ ಸಚ್ಛಿದ್ರ ಸಂಹರ॥
ಮೇಲಿನ ಜಾನಪದ ಮತ್ತು ಆಶುಕವಿಗಳ ಅನುಭವದ
ನುಡಿಯ ಹಿನ್ನೆಲೆಯಾಗಿ,
ಶ್ರೀ ಚನ್ನವೀರ ಶಿವಾಚಾರ್ಯ ಗುರುವರರು, ಕಾಶ್ಮೀರ ದೇಶದ ಮಹದೇವ ಭೂಪಾಲ ಅರಸರ ಗುರುವರರಾಗಿದ್ದು,ಆಸ್ಥಾನದಲ್ಲಿರುವ 6000 ಜಂಗಮರಿಗೆ ಕ್ರಿಯಾ ಮೂರ್ತಿಯಾಗಿದ್ದರು.
ಕಲ್ಯಾಣದಣ್ಣ ಭಕ್ತಿ ಭಂಡಾರಿ ಬಸವಣ್ಣರವರ ಬಿನ್ನಹದ ಮೇರೆಗೆ,ಅವರು ತಂದ ಮೊಸರುಬಾನ ಬುತ್ತಿಯನ್ನ 6000 ಜಂಗಮರಿಗೆ ಪ್ರಸಾದೀಕರಿಸಿ, ಪ್ರಸಾದಕಾಯ ಲಿಂಗ ರೂಪಾಗಿ ಪರಿವರ್ತಿಸಿ,ಹಸುಬೆಯೊಳು ಮರೆಮಾಡಿ ಕಲ್ಯಾಣಕ್ಕೆ ಕಳುಹಿಸಿ,
ಅವರಿಗೆ ಸಿದ್ಧವಾದ ಮಹಾ ಪ್ರಸಾದವನ್ನ ಶ್ರೀ ಗುರುವರರೊಬ್ಬರೇ ಸ್ವೀಕರಿಸಿ,ಅರಸು ದಂಪತಿಗಳ ಮನ ಪರಿವರ್ತಿಸಿ, ಕಲ್ಯಾಣಕ್ಕೆ ಕರೆತಂದ ಅರುಹಿನ ಕುರುಹಾಗಿ,
ಪರಮ ಪೂಜ್ಯರಾದ
ಶ್ರೀಶ್ರೀಶ್ರೀ ಆನಂದ ರಾಚಯ್ಯ ಮತ್ತು ಕೆಂಚ ವೀರಯ್ಯ ಜಂಗಮ ಸಹೋದರರ ಮಾರ್ಗದರ್ಶನದಂತೆ ಸಾಂಪ್ರದಾಯಕವಾಗಿ
ಪ್ರತಿ ವರುಷದ ಪದ್ಧತಿಯಂತೆ,
ಶ್ರೀ ಸೂಗೂರೇಶ್ವರ ಸ್ವಾಮಿಗೆ ಸಮರ್ಪಿಸುವ ಮೊಸರನ್ನ ಬಾನ ಬುತ್ತಿ ನೈವೇದ್ಯ ಪ್ರಸಾದವು ಧಾರ್ಮಿಕ, ಆಧ್ಯಾತ್ಮಿಕ, ವೈಜ್ಞಾನಿಕ, ನೈಸರ್ಗಿಕ, ಆರೋಗ್ಯದಾಯಕ ಅನುಭವದ ಪ್ರತೀಕವಾಗಿದ್ದು,
ಗ್ರಾಮದ ಹಾಗು ಸುತ್ತಮುತ್ತಲಿನ ಸದ್ಭಕ್ತರ ಸಾಮೂಹಿಕ ಭಕ್ತಿ-ಭಾವದ ಸೇವೆಯೊಂದಿಗೆ ಹಾಗೂ ದೇವಸ್ಥಾನದ ಆಡಳಿತಾಧಿಕಾರಿಗಳ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಭಕ್ತ-ಮಹೇಶ್ವರ ರೆಲ್ಲರೂ ಆಗಮಿಸಿ,ತನು-ಮನ-ಧನ-ಧಾನ್ಯ ಸಮರ್ಪಿಸಿ,ಸಹಾಯ ಸಹಕಾರ ದೊಂದಿಗೆ ಪ್ರಸಾದ ಸ್ವೀಕರಿಸಿ,ಸ್ವಾಮಿಯ ಕೃಪೆಗೆ ಪಾತ್ರರಾಗಲು, ಕೋರಲಾಗಿದೆ.
-ಮರಿಕಾಂತಪ್ಪ ಸಜ್ಜನ್
9916467011