ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಒಳಕೋಟಿ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ದೇವರಮನಿ ಕುಟುಂಬದ ಶಂಕ್ರಮ್ಮ ಶಿವ ರಾಯಪ್ಪ ಈ ದಂಪತಿಗಳ ಸುಪುತ್ರಿ ವಿಜಯಲಕ್ಷ್ಮಿ ಜೊತೆ ಹನುಮೇಶ ಇವರ ಮದುವೆ ಸಮಾರಂಭದಲ್ಲಿ ಸಿಂಧನೂರು ನಗರದ ವಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ಹಿರಿಯರಿಗೆ ಹೊಸ ವಸ್ತ್ರಗಳನ್ನು ವಿತರಣೆ ಮಾಡಿ ಆಶ್ರಮದ ಆಡಳಿತಾಧಿಕಾರಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ ಅವರನ್ನು ಸನ್ಮಾನಿಸಿ ಗೌರವಿಸಿ ವಧು ವರರು ಆಶೀರ್ವಾದ ಪಡೆದುಕೊಳ್ಳುವ ವಿಶೇಷ ಕಾರ್ಯಕ್ರಮ ನೆರವೇರಿತು.ಈ ಕಾರ್ಯಕ್ರಮದಲ್ಲಿ ಕಾರುಣ್ಯ ಆಶ್ರಮದ ಆಡಳಿತಾಧಿಕಾರಿಗಳಾದ ಡಾ.ಚನ್ನಬಸವ ಸ್ವಾಮಿ ಮಾತನಾಡಿ ಮದುವೆ ಸಮಾರಂಭದಲ್ಲಿ ಅನಾಥರನ್ನು ಗುರುತಿಸುವ ಕಾರ್ಯ ಅದ್ಭುತವಾದುದು ಸಿಂಧನೂರಿನ ದೇವರಮನಿ ಕುಟುಂಬದ ಹಿರಿಯರುಗಳಾದ ನಿಂಗಮ್ಮ ಧರ್ಮಣ್ಣ ಹಾಗೂ ರಾಯಮ್ಮ ಸೋಮಣ್ಣ ದಂಪತಿಗಳು ಕಾರುಣ್ಯ ಎನ್ನುವ ನೊಂದ ಮನಸ್ಸುಗಳಿಗೆ ನಾವು ಅನಾಥರು ಭಾವನೆ ಅವರಲ್ಲಿ ಬರಬಾರದು ಎನ್ನುವ ಉದ್ದೇಶವನ್ನಿಟ್ಟುಕೊಂಡು ನಮ್ಮನ್ನು ಕೂಡಾ ಮದುವೆ ಸಮಾರಂಭಗಳಿಗೆ ಕರೆಯುತ್ತಿದ್ದಾರೆ ಎಲ್ಲರೂ ನಮ್ಮವರು ಎನ್ನುವ ಭಾವನೆ ಬರಲಿ ಎನ್ನುವುದರೊಂದಿಗೆ ತೆಗೆದುಕೊಂಡ ಈ ನಿರ್ಧಾರ ಸಮಾಜಕ್ಕೆ ಮಾದರಿಯಾಗಿದೆ. ನಮ್ಮ ಕಾರುಣ್ಯ ಆಶ್ರಮ ನಾಡಿನಲ್ಲಿ ಅನಾಥ ಎನ್ನುವ ಪ್ರಜ್ಞೆಯನ್ನು ಹೋಗಲಾಡಿಸಿದೆ ಎಂದೆನಿಸುತ್ತದೆ.ತಮ್ಮ ಮದುವೆ ಸಮಾರಂಭಗಳಲ್ಲಿ ಬಂಧು-ಬಳಗ ಸ್ನೇಹಿತರನ್ನಷ್ಟೇ ಗುರುತಿಸುವ ಇಂತಹ ಸಮಾಜದಲ್ಲಿ ನಮ್ಮ ಆತ್ಮೀಯ ಸಹೋದರ ಸ್ನೇಹಿತನಾದ ಮುತ್ತಣ್ಣ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ನಮಗೆ ಇನ್ನಷ್ಟು ಅನಾಥಪರ ಸೇವೆ ಮಾಡಲು ಶಕ್ತಿ ತುಂಬಿದಂತಾಗಿದೆ.ಕಾರುಣ್ಯ ಕುಟುಂಬದ ಕೂಸುಗಳ ಆಶೀರ್ವಾದ ತೆಗೆದುಕೊಂಡ ಈ ದಂಪತಿಗಳ ಜೀವನ ನೂರಾರು ವರ್ಷಗಳ ಕಾಲ ಸುಖ ಶಾಂತಿ ನೆಮ್ಮದಿಯಿಂದ ಸಾಗಲೆಂದು ಕಾರುಣ್ಯ ಆಶ್ರಮದ ವತಿಯಿಂದ ಹೆಗ್ಗಾಪುರ ದೇವರಮನಿ ಕುಟುಂಬದವರಿಗೆ ಅಭಿನಂದನೆಗಳು ಎಂದು ಮಾತನಾಡಿ ನೂತನ ವಧು ವರರಿಗೆ ಆಶ್ರಮದ ವತಿಯಿಂದ ಸನ್ಮಾನಿಸಿ ಆಶೀರ್ವದಿಸಲಾಯಿತು.ಈ ಕಾರ್ಯಕ್ರಮದಲ್ಲಿ ಆಶ್ರಮದ ಆಶ್ರಯದಾತರುಗಳಾದ ಸರೋಜಮ್ಮ,ಜಿನೇಂದ್ರ,ಜಯಮ್ಮ, ದುರ್ಗಮ್ಮ,ನಾಗರಾಜಪ್ಪ,ಹರ್ಷವರ್ಧನ, ಸರ್ವೇಶ, ವಿಜಯಲಕ್ಷ್ಮಿ ,ಪಾರ್ವತಮ್ಮ ಸಿಬ್ಬಂದಿಗಳಾದ ಇಂದುಮತಿ,ಏಕನಾಥ,ಮರಿಯಪ್ಪ ಬಸವಸ್ವಾಮಿ ಹಾಗೂ ದೇವರಮನಿ ಕುಟುಂಬದ ಮುತ್ತಣ್ಣ, ದುರ್ಗಮ್ಮ, ಶಿವಣ್ಣ ಈರಮ್ಮ ,ಶಂಕ್ರಮ್ಮ ,ಶಿವರಾಯಪ್ಪ ,ಲಕ್ಷ್ಮಿ, ಶಿವಪ್ಪ ಮೂಲಿಮನಿ ಮತ್ತು ಅಪಾರ ಕುಟುಂಬ ವರ್ಗ ಸ್ನೇಹ ಬಳಗ ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.