ಬೀದರ ಜಿಲ್ಲೆಯ ಔರಾದ ತಾಲೂಕಿನ ಜೋಜನ ಗ್ರಾಮ ಪಂಚಾಯತ ವ್ಯಾಪ್ತಿಯ ಲಿಂಗದಳ್ಳಿ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಕೈಗೊಳ್ಳುತ್ತಿರುವ ಗ್ರಾಮ ಪಂಚಾಯತ ಆರೋಗ್ಯ ಅಮೃತ ಅಭಿಯಾನದಡಿಯಲ್ಲಿ ಸುಮಾರು 55
ನರೇಗಾ ಕೂಲಿಕಾರ್ಮಿಕರಿಗೆ ಅಧಿಕ ರಕ್ತದೊತ್ತಡ,ರಕ್ತಹೀನತೆ,ಮಧುಮೇಹಗಳಂತಹ ರೋಗಗಳ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಗಮೇಶ ಹಾಗೂ ಗ್ರಾಮ ಪಂಚಾಯತ ಸದಸ್ಯರು ಹಾಗೂ KHPT ತಾಲೂಕ ಸಂಯೋಜಕರಾದ ಅಮರ ಮುಕ್ತೆದಾರ,CHO ಖಾದರಖಾನ ತಾಲ್ಲೂಕು TAE,IEC,ಸಂಯೋಜಕರು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ:ಅಮರ ಮುಕ್ತೆದಾರ