ಕಲಬುರಗಿ: ಇನ್ನೇನು ಶಾಲಾ,ಕಾಲೇಜುಗಳು ಆರಂಭವಾದವು ಬೆಳಿಗ್ಗೆ ಬೇಗ ಎದ್ದು ಫ್ರೆಶ್ ಮೂಡ್ ಅಲ್ಲಿ ಶಾಲೆಗೆ ಕಾಲೇಜಿಗೆ ಹೋಗುವವರು,ಸಂತೆಗಾಗಿ ಸಿಟಿ ಕಡೆ ಹೋಗುವವರು ಇನ್ನೇನು ಪ್ರಯಾಣ ಬೆಳೆಸಬೇಕು ಅಂತ ಬಸ್ ಸ್ಟಾಪ್ ಅಲ್ಲಿ ಬಂದು ನಿಂತು ಬಸ್’ಗಾಗಿ ಕಾಯ್ತಿರಬೇಕಾದರೆ ಒಂದೂ ಬಸ್ ನಿಲ್ಲಿಸ್ಲಿಲ್ಲ ಅಂದ್ರೆ ಯಾರಿಗೆ ತಾನೆ ಸಿಟ್ಟು ಬರೋದಿಲ್ಲ ನೀವೆ ಹೇಳಿ.
ಹೌದು ಇದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬುರ ಗ್ರಾಮದಲ್ಲಿ ದಿನನಿತ್ಯ ನಡೀತಿರೋ ಘಟನೆ, ಪ್ರತಿದಿನ ಗೊಬ್ಬೂರ ಗ್ರಾಮದಿಂದ ನೂರಾರು ಜನರು ಹಾಗೂ ವಿದ್ಯಾರ್ಥಿಗಳು ಕಲಬುರಗಿಯ ಕಡೆ ಪ್ರಯಾಣ ಬೆಳೆಸುತ್ತಾರೆ ಆದರೆ ಗೊಬ್ಬರದಿಂದ ಕಲಬುರಗಿ ಕಡೆ ಬರೋದಕ್ಕೆ ಒಂದೇ ಮಾರ್ಗ ಇರೋದ್ರಿಂದ ದಿನನಿತ್ಯ ಬೆಳಿಗ್ಗೆ ಅಫಜಲಪುರದಿಂದ ಬರುವ ಬಸ್ಸುಗಳು ಅತನೂರ,ಚೌಡಾಪುರದಲ್ಲಿಯೇ ತುಂಬಿಕೊಂಡು ಬರುತ್ತಿರುವುದರಿಂದ ಗೊಬ್ಬುರ ಗ್ರಾಮದಲ್ಲಿ ನಿಲ್ಲಿಸುತ್ತಿಲ್ಲ. ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗೊಬ್ಬೂರ ಮಾರ್ಗವಾಗಿ ಬರುವ ಬಸ್ಸುಗಳನ್ನು ಹೆಚ್ಚುವರಿಯಾಗಿ ನೀಡಬೇಕೆಂದು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಜೊತೆಗೆ ಈ ಮಾರ್ಗದಲ್ಲಿ ಸೂಕ್ತವಾದ ಬಸ್ ತಂಗುದಾಣ ಇಲ್ಲದೆ ಇರುವ ಕಾರಣ ರಣ ಬಿಸಿಲಿನ ಈ ಅವಧಿಯಲ್ಲಿ ಜನರು ಬಸ್ಸಿಗಾಗಿ ಕಾಯುವುದಾದರೂ ಹೇಗೆ ಇದು ಜನರ ಅರೋಗ್ಯದ ದೃಷ್ಟಿಯಿಂದಲೂ ಪರಿಣಾಮ ಬೀರುವಂತಹದಾಗಿದೆ.
ಹೀಗಾಗಿ ಕೂಡಲೆ ಬಸ್ ಸಂಚಾರಿ ವಿಭಾಗ ಅಧಿಕಾರಿಗಳು ಎಚ್ಚೆತ್ತುಕೊಂಡು ಜನರ ಸಮಸ್ಯೇಯನ್ನು ಗುರಿತಿಸಿ ಬಸ್ಸುಗಳ ಸಂಚಾರ ಅಧಿಕಗೊಳಿಸಿ ಆ ಮೂಲಕ ಜನರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಈ ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರ ಮನದ ಇಂಗಿತವಾಗಿದೆ.
ವರದಿ:ಅಪ್ಪಾರಾಯ ಬಡಿಗೇರ
