ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿಯಿಂದ ಗುಂಜಳ್ಳಿ ಕ್ಯಾಂಪ್ ಮಾರ್ಗ ಮದ್ಯದ ಸಸಿಗಳು ಇಂದು ಗಾಳಿಗೆ ಬಾಗಿ ನೆಲಕ್ಕುರುಳಿ ಬಿದ್ದಿವೆ. ಬಿದ್ದ ಗಿಡಗಳನ್ನು ನೋಡಿದ ಕೆ.ಹೊಸಹಳ್ಳಿ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು ಗಿಡಗಳನ್ನು ನೆಟ್ಟಗೆ ನಿಲ್ಲಿಸಿ, ವನಸಿರಿ ಫೌಂಡೇಶನ್ ಕಾರ್ಯಗಳನ್ನು ನೋಡಿ ಗಿಡಗಳ ರಕ್ಷಣೆ ಮಾಡಿ ಮಾನವೀಯತೆ ಮೆರೆದರು.
ಸಿಂಧನೂರು ತುರವಿಹಾಳ ಮಾರ್ಗ ಮಧ್ಯದಲ್ಲಿ ಬರುವ ಗುಂಜಳ್ಳಿ ಕ್ಯಾಂಪ್ ನಿಂದ ಕೆ.ಹೊಸಹಳ್ಳಿ ಗ್ರಾಮದವರೆಗೆ ರಸ್ತೆಯ ಅಕ್ಕಪಕ್ಕದಲ್ಲಿ ಸರ್ಕಾರ ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿ ಅರಣ್ಯ ಇಲಾಖೆಯ ವತಿಯಿಂದ ಸುಮಾರು 500ಕ್ಕೂ ಹೆಚ್ಚು ಸಸಿಗಳನ್ನು ಹಚ್ಚಿ ಬೆಳಸುತ್ತಿದೆ ಆದರೆ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗುಂಜಳ್ಳಿ ಕ್ಯಾಂಪ್ ನಿಂದ ಕೆ.ಹೊಸಹಳ್ಳಿ ವೆಂಕಟೇಶ್ವರ ಮಾರ್ಗದ ಮದ್ಯದವರೆಗೂ ಗಿಡಗಳು ಗಾಳಿ ಮಳೆಗೆ ಬಾಗಿ ಮುರಿದು ಹೋಗಿವೆ ತಕ್ಷಣ ಸಾಮಾಜಿಕ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗಿಡಗಳ ರಕ್ಷಣೆ ಮಾಡಬೇಕು ಎಂದು ಹಳೆಯ ವಿದ್ಯಾರ್ಥಿಗಳು,ವನಸಿರಿ ಫೌಂಡೇಶನ್ ಸದಸ್ಯರು ಸಾರ್ವಜನಿಕರು ಒತ್ತಾಯಿಸಿದರು.