ಪ್ರಕೃತಿಮಾತೆಯ ಸೇವೆಯಲ್ಲಿ ತೊಡಗಿ,ಪ್ರಕೃತಿಯ ಉಳಿವಿಗಾಗಿ ಹೋರಾಡುತ್ತಿರುವ ಸಿಂಧನೂರಿನ ವನಸಿರಿ ಫೌಂಡೇಶನ್ ಅಮರೇಗೌಡ ಮಲ್ಲಾಪೂರ ಅವರಿಗೆ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಲಭಿಸಿರುವುದು ತುಂಬಾ ಹೆಮ್ಮೆಯ ವಿಷಯ ಎಂದು ರಾಯಚೂರು ವಲಯ ಅರಣ್ಯ ಅಧಿಕಾರಿ ರಾಜಶೇಖರ ಅವರು ರಾಯಚೂರಿನ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಪರಿಸರ ಪ್ರಶಸ್ತಿ ವಿಜೇತ ಅಮರೇಗೌಡ ಮಲ್ಲಾಪೂರ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಸಂತಸ ವ್ಯಕ್ತಪಡಿಸಿದರು.
ರಾಯಚೂರಿನ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ರಾಯಚೂರು ವಲಯ ಅರಣ್ಯ ಅಧಿಕಾರಿಗಳಾದ ರಾಜಶೇಖರ ಸರ್ ಅವರು ನೇತೃತ್ವದಲ್ಲಿ ಅರಣ್ಯ ಅಧಿಕಾರಿಗಳ ತಂಡ ದ ವತಿಯಿಂದ ಕರ್ನಾಟಕ ಸರ್ಕಾರದ ವತಿಯಿಂದ 2023ರ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿಯನ್ನು ಪಡೆದ ವನಸಿರಿ ಫೌಂಡೇಶನ್ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರನ್ನು ಇಂದು ಸನ್ಮಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಯಚೂರು ವಲಯ ಅರಣ್ಯ ಅಧಿಕಾರಿಗಳಾದ ರಾಜಶೇಖರ್ ಮಾತನಾಡಿ ಪ್ರಕೃತಿಮಾತೆಯ ಸೇವೆಯಲ್ಲಿ ತೊಡಗಿ,ಪ್ರಕೃತಿಯ ಉಳಿವಿಗಾಗಿ ಹೋರಾಡುತ್ತಿರುವ ಸಿಂಧನೂರಿನ ವನಸಿರಿ ಫೌಂಡೇಶನ್ ಅಮರೇಗೌಡ ಮಲ್ಲಾಪೂರ ಅವರಿಗೆ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಲಭಿಸಿರುವುದು ತುಂಬಾ ಹೆಮ್ಮೆಯ ವಿಷಯ.ಪ್ರತಿ ವರ್ಷದಂತೆ ಈ ವರ್ಷವೂ ಕರ್ನಾಟಕ ಸರ್ಕಾರ ಪರಿಸರ ಸೇವೆಯಲ್ಲಿ ಎಲೆಮರೆಯ ಕಾಯಿಗಳಂತೆ ಕಾರ್ಯನಿರ್ವಹಿಸಿದ ಮಹನೀಯರುಗಳನ್ನು ಗುರುತಿಸಿ ಕರ್ನಾಟಕ ಪರಿಸರ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾ ಬಂದಿದೆ.ಆದರೆ ಈ ವರ್ಷದ ಪ್ರಶಸ್ತಿ ನಮ್ಮ ರಾಯಚೂರು ಜಿಲ್ಲೆಯ ಸಿಂಧನೂರಿನ ವನಸಿರಿ ಫೌಂಡೇಶನ್ ಗೆ ಲಭಿಸಿದೆ.ಇದು ನಮಗೆಲ್ಲ ಸಂತೋಷ ತಂದಿದೆ.ಅರಣ್ಯ ಇಲಾಖೆಯು ಮಾಡಬೇಕಾದ ಕೆಲಸ ಕಾರ್ಯಗಳನ್ನು ಅಮರೇಗೌಡ ಮಲ್ಲಾಪೂರ ಅವರು ತಮ್ಮ ತಂಡದ ಜೊತೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.ಅವರ ಶ್ರಮ,ಆಸೆಗಳು ಈಡೇರಲಿ ಎಂದು ದೇವರಲ್ಲಿ ಕೇಳಿಕೊಂಡು ಅವರ ಸೇವೆಗೆ ನಮ್ಮ ಅರಣ್ಯ ಇಲಾಖೆಯು ಸದಾಕಾಲ ಬೆಂಬಲವಾಗಿ ಇರುತ್ತೇವೆ ನಿಮ್ಮ ಗಮನಕ್ಕೆ ಬಂದಂತಹ ಎಲ್ಲ ಪರಿಸರ ರಕ್ಷಣೆಯ ಕಾರ್ಯಗಳಿಗೆ ನಾವು ಸದಾ ಬೆಂಬಲವಾಗಿ ಇರುತ್ತವೆ ಯಾರಾದರೂ ಗಿಡಮರಗಳನ್ನು ಕಡಿಯುವಂತೆ ಕಂಡುಬಂದರೆ ತಕ್ಷಣ ತಿಳಿಸಿ ನಾವು ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯೋನ್ಮುಖವಾಗಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಯಚೂರು ವಲಯ ಅರಣ್ಯ ಅಧಿಕಾರಿಗಳು ರಾಜಶೇಖರ್ ಸರ್,ವನಸಿರಿ ಫೌಂಡೇಶನ್ ಅದ್ಯಕ್ಷ ಅಮರೇಗೌಡ ಮಲ್ಲಾಪೂರ,ಸದಸ್ಯರಾದ ಅಮರಯ್ಯ ಶಾಸ್ತ್ರೀ,ಮುದಿಯಪ್ಪ ಹೊಸಳ್ಳಿ ಕ್ಯಾಂಪ್ ಹಾಗೂ ಅರಣ್ಯ ಸಿಬ್ಬಂದಿ ವರ್ಗದವರು,ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ