ಹಾವೇರಿ:ಮಹತ್ವಾಕಾಂಕ್ಷೆಯ ಬಾಳಂಬೀಡ ಏತ ನೀರಾವರಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ಶಾಸಕರಾದ ಮಾನೆ ಶ್ರೀನಿವಾಸ ಅವರು ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲಿಸಿದರು.
ಮೋಟರ್ ಪಂಪ್,ಪೈಪಲೈನ್ ಅಳವಡಿಕೆ, ವಿದ್ಯುತ್ ಕೇಂದ್ರದ ಸ್ಥಾಪನೆ ಸೇರಿದಂತೆ ಇತರ ಕಾಮಗಾರಿ ವೀಕ್ಷಿಸಿ,ಅಧಿಕಾರಿಗಳಿಂದ ಮಾಹಿತಿ ಪಡೆದರು ಎದುರಾಗಿದ್ದ ಕೆಲ ಅಡೆತಡೆ ಹಾಗೂ ರೈತರ ಸಮಸ್ಯೆಗಳನ್ನು ಬಗೆಹರಿಸಲಾಗಿದ್ದು ಮಹತ್ವಾಕಾಂಕ್ಷೆಯ ನೀರಾವರಿ ಯೋಜನೆ ಶೀಘ್ರ ಲೋಕಾರ್ಪಣೆಗೊಳ್ಳಲಿದೆ ತಾಲೂಕಿನ ರೈತರ ಬಹಳ ವರ್ಷಗಳ ಕನಸು ನನಸಾಗಲಿದೆ ಎಂದು ಮಾನೆ ಶ್ರೀನಿವಾಸ ಈ ಸಂದರ್ಭದಲ್ಲಿ ಹೇಳಿದರು.
ವರದಿ ರವಿ ಓಲೇಕಾರ