ರಾಯಚೂರು/ಸಿಂಧನೂರು:ನೋಬಲ್ ಟೇಕ್ನೋ ಶಾಲೆಯ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಇಂದು ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಅಮರ ಶ್ರೀ ಆಲದ ಮರಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿ ಆಲದ ಮರದ ವಿಶೇಷತೆ ಮತ್ತು ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸಿದರು.
ಸಿಂಧನೂರಿನ ಅಮರ ಶ್ರೀ ಆಲದ ಮರಕ್ಕೆ ನೋಬಲ್ ಟೇಕ್ನೋ ಶಾಲೆಯ ಶಿಕ್ಷಕರಾದ ಶ್ರೀ ಸೋಯೋಬ್ ಅವರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ವಿದ್ಯಾರ್ಥಿಗಳನ್ನೆಲ್ಲ ಕರೆದುಕೊಂಡು ಬಂದು ಆಲದ ಮರದ ವಿಶೇಷತೆ ಬಗ್ಗೆ ಮಕ್ಕಳಿಗೆ ತಿಳಿಹೇಳಿದರು.ಈ ಮರಕ್ಕೆ ಸುಮಾರು 30ವರ್ಷಗಳಾಗಿವೆ, ಇದನ್ನು ರತನೋರ್ವ ತನ್ನ ಹೊಲದಲ್ಲಿ ಕಡಿದು ಹಾಕಿದ್ದ ಅದನ್ನು ವನಸಿರಿ ಫೌಂಡೇಶನ್ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರು ಸುಮಾರು 5ಕಿಲೋಮೀಟರ್ ಗಟ್ಟಲೆ ಟ್ಯ್ರಾಕ್ಟರ್ ಮೂಲಕ ತೆಗೆದುಕೊಂಡು ಬಂದು ಇಲ್ಲಿ ನೆಡಲಾಗಿದೆ.ಇದಕ್ಕೆ ಸುಮಾರು 30 ಸಾವಿರ ರೂಪಾಯಿಗಳವರೆಗೆ ಸ್ವಂತ ಖರ್ಚು ಮಾಡಿದ್ದಾರೆ ಇವರು ರಾಜ್ಯದ ಕಲಬುರ್ಗಿ,ಕೊಪ್ಪಳ, ರಾಯಚೂರು,ಯಾದಗಿರಿ, ದಾವಣಗೆರೆ,ಬಳ್ಳಾರಿ ಹೀಗೆ ಹಲವಾರು ಜಿಲ್ಲೆಗಳಲ್ಲಿ ವನಸಿರಿ ಫೌಂಡೇಶನ್ ಸದಸ್ಯರ ಜೊತೆಗೂಡಿ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ನಿರ್ಮಿಸುವುದು,ಸಸಿಗಳನ್ನು ನೆಡುವುದು,ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಜಾಥಾ ಮೂಲಕ ಪರಿಸರ ಜಾಗೃತಿ ಮೂಡಿಸಿರುತ್ತಾರೆ ಅಲ್ಲದೇ ಶಾಲೆ,ಕಾಲೇಜ್,ದೇವಸ್ಥಾನ,ಮಸೀದಿ,ಚರ್ಚುಗಳಲ್ಲಿ ಸಸಿಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ ಇಂತಹ ಒಬ್ಬ ಶ್ರೇಷ್ಠ ಪರಿಸರ ಕಾಯಕಯೋಗಿ ನಮ್ಮ ಸಿಂಧನೂರು ತಾಲೂಕಿನಲ್ಲಿ ಜನಸಿರುವುದು ನಮಗೆ ಹೆಮ್ಮೆಯ ವಿಷಯ ಇದರ ಜೊತೆಗೆ ಈ ವರ್ಷ ಸರ್ಕಾರ ಕೂಡಾ ಇವರ ಸೇವಾ ಕಾರ್ಯಗಳನ್ನು ಗುರುತಿಸಿ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ನೀಡಿ ಗೌರವಿಸಿರುವುದು ಇಡೀ ರಾಜ್ಯಕ್ಕೆ ಸಿಂಧನೂರ ತಾಲೂಕು ಮಾದರಿಯಾಗಿದೆ ಇಂತಹ ಒಬ್ಬ ಶ್ರೇಷ್ಠ ಪರಿಸರ ಯೋಗಿಯನ್ನು ಪಡೆದಿರುವುದು ನಾವೇ ಧನ್ಯರು ಎಲ್ಲರೂ ಇವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಶಾಲೆಯ ಶಿಕ್ಷಕರಾದ ಸೋಯೋಬ್ ಅವರು ಮಕ್ಕಳಿಗೆ ಸಲಹೆ ನೀಡಿದರು.
ಈ ಶಾಲೆಯ ಆಡಳಿತ ಮಂಡಳಿ,ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.