ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಅಣಬೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ವರುಣನ ಆರ್ಭಟಕ್ಕೆ ಇಬ್ಬರು ಬಲಿಯಾಗಿದ್ದಾರೆ.
ಜಗಳೂರು ತಾಲೂಕಿನ ಅಣಬೂರು ಗೊಲ್ಲರಹಟ್ಟಿ ಗ್ರಾಮದ ಕಾಟಪ್ಪ 35 ವರ್ಷ 43 ವರ್ಷದ ರಾಜಪ್ಪ ಎಂಬುವವರಿಗೆ ನಿನ್ನೆ ಸಿಡಿಲು ಬಡಿದು ಸಾವನಪ್ಪಿದ ಘಟನೆ ಜರುಗಿದೆ.
ತಾಲೂಕಿನ ಅಣಬೂರು ಬಳಿ ಇರುವ ಜಮೀನಿನಲ್ಲಿ ಹತ್ತಿ ಬೀಜ ಬಿತ್ತನೆ ಮಾಡಲು ಸಂಬಂಧಿಕರೊಂದಿಗೆ ತೆರಳಿದ ರಾಜಪ್ಪ ಮತ್ತು ಕಾಟಪ್ಪ ಎಂಬುವವರ ಹೊಲಕ್ಕೆ ತೆರಳಿದ ಹಿನ್ನೆಲೆಯಲ್ಲಿ ಇಂದು ಸಾಯಂಕಾಲ 5:30ರ ಸಮಯದಲ್ಲಿ ಮಳೆ ಬಂದ ಸಮಯದಲ್ಲಿ ರಾಜಪ್ಪ ಮತ್ತು ಕಾಟಪ್ಪ ಮರದ ಬಳಿ ಕುಳಿತುಕೊಂಡಾಗ ಗುಡುಗು ಮಳೆ ಬರುವ ಸಂದರ್ಭದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗ್ಗೆ ಜಮೀನಿಗೆ ಒಟ್ಟು ಐದು ಮಂದಿ ತೆರಳಿದ್ದು ಇಡೀ ದಿನ ಒಟ್ಟಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು ಸಾಯಂಕಾಲ ಮಳೆ ಬಂದ ಹಿನ್ನೆಲೆಯಲ್ಲಿ ಗುಡುಗು ಮಿಂಚು ಹೆಚ್ಚಾಗಿ ಇಬ್ಬರಿಗೆ ಸಿಡಿಲು ಬಡೆದು ಸ್ಥಳದಲ್ಲಿಯೇ ಸಾವನ್ನಪ್ಪಿರುತ್ತಾರೆ ಎಂದು ತಿಳಿದು ಬಂದಿದೆ ಜಮೀನಿನಲ್ಲಿರುವ ಸಂಬಂಧಿಕರು ಮಳೆ ಬರುವ ಸಂದರ್ಭದಲ್ಲಿ ಇನ್ನು ಮೂರು ಜನ ಒಂದು ಕಡೆ ಕುಳಿತುಕೊಂಡಿದ್ದರು ಅವರಿಗೆ ಯಾವುದೇ ಹಾನಿಯಾಗಿಲ್ಲ,
ಸಂಬಂಧಿಕರ ಗೋಳಿನ ಆಕ್ರಂದನ ಮುಗಿಲು ಮುಟ್ಟುವಂತಿತ್ತು ಸ್ಥಳಕ್ಕೆ ಜಗಳೂರಿನ ಶಾಸಕರಾದ ಚಿಕ್ಕಮ್ಮನಟಿ,ಬಿ.ದೇವೇಂದ್ರಪ್ಪ ಮತ್ತು ತಾಲೂಕಿನ ತಹಶೀಲ್ದಾರ್ ಜಿ ಸಂತೋಷ್ ಕುಮಾರ್ ಭೇಟಿ ನೀಡಿ ಸೂಕ್ತ ಪರಿಹಾರ ನೀಡಲು ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಸಾಂತ್ವಾನ ಹೇಳಿದರು.