ಬೆಳಗಾವಿ:ರೈತರ ಸಮಸ್ಯೆಗಳನ್ನು ಈಡೇರಿಸುವ ಕುರಿತು
ರೈತರ ಪಂಪ್ ಸೆಟ್ಟುಗಳ ಮೀಟರ್ ಅಳವಡಿಕೆ ಹಾಗೂ ಆಧಾರ್ ಲಿಂಕ್ ನೀತಿಯನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು K E R C ಇಲಾಖೆಯಿಂದ ಗ್ರಾಹಕರ ವಿದ್ಯುತ್ ಬಿಲ್ಲನ್ನು ದುಬಾರಿ ಮಾಡಿರುವುದನ್ನು ಹಿಂಪಡೆಯಬೇಕು ಸಕಾಲಕ್ಕೆ ಮುಂಗಾರು ಮಳೆ ಬಾರದ ಕಾರಣ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು ತಕ್ಷಣವೇ ತಾಲೂಕ ಆಡಳಿತ ಸಮಸ್ಯೆಯನ್ನು ಬಗೆಹರಿಸಬೇಕು,ಮಲಪ್ರಭಾ ಹಾಗೂ ಘಟಪ್ರಭಾ ಅಚ್ಚುಕಟ್ಟು ನೀರಾವರಿ ಪ್ರದೇಶದಲ್ಲಿ ರೈತರ ಪಹಣಿಯಲ್ಲಿ ಹೆಚ್ಚುವರಿ ಭೂ ಸ್ವಾದೀನ ಪಡಿಸಿಕೊಂಡಿದ್ದು ಅಂತಹ ರೈತರ ಪಹಣಿಯನ್ನು ಶೀಘ್ರವೇ ತಿದ್ದುಪಡಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿಸಿಕೊಂಡರು
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕ ಅಧ್ಯಕ್ಷರಾದ ಜಗದೀಶ್ ದೇವರೆಡ್ಡಿ ಹಾಗೂ ಹಸಿರು ಸೇನೆ ಅಧ್ಯಕ್ಷರಾದ ಶಿವಾನಂದ್ ದೊಡವಾಡ ಹಾಗೂ ಪದಾಧಿಕಾರಿಗಳಾದ
ಮಾರುತಿ ಕರೀಶಟ್ಟಿ ಮಾರುತಿ ಕಂಬಾರ್ ಕೃಷ್ಣೇಗೌಡ ಪಾಟೀಲ್ ರಾಜು ಅಣ್ಣಿಗೇರಿ ಶಿವನಗೌಡ ಪಾಟೀಲ್ ಮಹಾದೇವ್ ತ್ಯಾವಟಗಿ ಇನ್ನು ಅನೇಕ ಪದಾಧಿಕಾರಿಗಳು ಹಾಗೂ ರೈತ ಬಂಧುಗಳು ಪಾಲ್ಗೊಂಡಿದ್ದರು.
ವರದಿ:ವೀರೇಶ್ ಬಳಿಗೇರ್