ಕಲಬುರಗಿ:ಬ್ರಹ್ಮಪುರ ಪೋಲೀಸ್ ಠಾಣೆ ಪೋಲೀಸರು ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳನನ್ನು ಬಂಧಿಸಿದ್ದು ಹನ್ನೊಂದು ಬೈಕ್ ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ಅಲಿಯಾಸ್ ಶಮ್ಮು ರಶೀದ 22 ವರ್ಷ ಈತನನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ವಿಶಾಲ ಎಂಬಾತ ತಲೆಮರಿಸಿಕೊಂಡಿದ್ದು ಆತನ ಬಂಧನಕ್ಕೆ ಜಾಲ ಬೀಸಲಾಗಿದೆ ಇಬ್ಬರು ಆರೋಪಿಗಳು ಸೇರಿ ಕಳೆದೆರಡು ವರ್ಷಗಳಿಂದ ನಗರದ ವಿವಿದೆಡೆ ಬೈಕ್ ಕಳ್ಳತನ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದರು ಆರೋಪಿಗಳಿಂದ ಬೈಕ್ ಖರೀದಿ ಮಾಡಿದವರ ವಿರುದ್ದ ಕೂಡಾ ಕ್ರಮ ಕೈಗೊಳ್ಳಲಾಗಿದೆ ಆರೋಪಿಗಳಿಂದ ಎಂಟು ಲಕ್ಷ ಮೌಲ್ಯದ ಹನ್ನೊಂದು ಬೈಕ್ ಗಳನ್ನ ಈಗಾಗಲೇ ವಶಪಡಿಸಿಕೊಳ್ಳಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
-ಅಪ್ಪಾರಾಯ ಬಡಿಗೇರ
