ವಿಜಯಪುರ/ಇಂಡಿ:ಮಹಾತ್ಮಾ ಗಾಂಧಿ ನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರವೆಸಗಿ ಸರಕಾರದ ಹಣ ಲೂಟಿ ಮಾಡಿದ ಆರೋಪದ ಮೇಲೆ ಇಂಡಿ ತಾಲೂಕಿನ ಚಿಕ್ಕಬೇವನೂರ ಗ್ರಾಮ ಪಂಚಾಯತ ಪಿಡಿಓ ಸಂಜಯ ಪವಾರ ಅವರನ್ನು ಜಿಲ್ಲಾ ಪಂಚಾಯತ್ ಸಿಇಒ ರಾಹುಲ ಸಿಂದೆ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ವಸತಿ ಯೋಜನೆಯಡಿ ಫಲಾನುಭವಿಗಳು ಮನೆಯನ್ನು ನಿರ್ಮಿಸಿಕೊಂಡ 3 ವರ್ಷಗಳ ನಂತರ ಬೋಗಸ್ ಎನ್.ಎಮ್.ಆರ್ ಸೃಜನೆ ಮಾಡಿ 18012/- ಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಮತ್ತು 14,15 ನೇ ಹಣಕಾಸು ಆಯೋಗದ ಅನುದಾನದಡಿ ಚರಂಡಿ ನಿರ್ಮಾಣದಲ್ಲಿ ಅಕ್ರಮ ಸೇರಿದಂತೆ ಇತರೆ ಕಾಮಗಾರಿಗಳಲ್ಲಿ ಬೋಗಸ್ ಬಿಲ್ ಸೃಜನೆ ಮಾಡಿ ಹಣ ಸೆಳೆದು ಪಿಡಿಓ ಅವರು ಅಕ್ರಮ ಎಸಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ ಕಟ್ಟಿಮನಿ ತಾಲೂಕ ಪಂಚಾಯತಿಗೆ ದೂರು ಸಲ್ಲಿಸಿದ್ದರು ದೂರಿನ ಮೇರೆಗೆ ವಿಚಾರಣೆಯನ್ನು ಕಾಯ್ದಿರಿಸಿ ಪಿಡಿಓ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತ ಸಿಇಓ ಆದೇಶ ಮಾಡಿದ್ದಾರೆ ಎಂದು ಇಂಡಿ ತಾಲೂಕಾ ಪಂಚಾಯತ ಇಓ ಸುನೀಲ್ ಮದ್ದಿನ ತಿಳಿಸಿದ್ದಾರೆ.
ವರದಿ:ವಿಜಯಕುಮಾರ ಜಂಬಗಿ