ಹನೂರು:ಪಟ್ಟಣದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ರವರಿಂದ ಹನೂರು ಉಪ ವಿಭಾಗದ ಕಚೇರಿ ಆವರಣದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಶಾಹಿದ್ ಸಿದ್ದಿಕ್ ರವರ ಅಧ್ಯಕ್ಷತೆಯಲ್ಲಿ ಜನ ಸಂಪರ್ಕ ಸಭೆಯನ್ನು ನಡೆಸಲಾಯಿತು.
ಜನಸಂಪರ್ಕ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆ:
ರೈತ ಸಂಘದ ಉಪಾಧ್ಯಕ್ಷರಾದ ಬಸವರಾಜು ಮಾತನಾಡಿ ಕಾಂಚಳ್ಳಿ,ಬಸಪ್ಪನ ದೊಡ್ಡಿ,ಅಜ್ಜಿಪುರ ಇನ್ನಿತರ ಗ್ರಾಮಗಳಲ್ಲಿ ಮೀಟರ್ ಅಳವಡಿಸಲು ಫಲಾನುಭವಿಗಳಿಂದ ಲೈನ್ ಮ್ಯಾನ್ ಗಳು ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು ಹಾಗೂ ಹೊಸ ಟಿಸಿಗೆ ಅರ್ಜಿ ನೀಡಿದರೆ ತುಂಬಾ ವಿಳಂಬವಾಗುತ್ತಿದೆ. ಹಾಗೂ ಪಂಪ್ ಸೆಟ್ ಗಳಿಗೆ ರಾತ್ರಿ ಹೊತ್ತು ನೀಡುವುದರಿಂದ ನೀರನ್ನು ಹಾಯಿಸಲು ಹೋದಾಗ ಆನೆ ಹಾಗೂ ಇನ್ನಿತರ ಪ್ರಾಣಿಗಳಿಂದ ತೊಂದರೆಯಾಗುತ್ತಿದ್ದು ದಯಮಾಡಿ ರಾತ್ರಿ ಹೊತ್ತು ನೀಡುವ ವಿದ್ಯುತ್ತನ್ನು ತಪ್ಪಿಸಿ ಹಗಲಿನ ಹೊತ್ತು ನೀಡಬೇಕೆಂದು ಮನವಿ ನೀಡಿದರು.
ರೈತ ಸಂಘದ ಅಧ್ಯಕ್ಷರಾದ ಚಂಗಡಿ ಕರಿಯಪ್ಪ ರವರು ಮಾತನಾಡಿ ತೋಕೆರೆ ತುಳಸಿಕೆರೆ ಇನ್ನಿತರೆ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಸೋಲಾರನ್ನು ಅಳವಡಿಸಿದ್ದು ಸೋಲಾರ್ ಗಳು ಯಾವುದೇ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಅಜ್ಜೀಪುರ ಗ್ರಾಮದಲ್ಲಿ ಗಾಳಿ ಮಳೆಗೆ 25 ದಿನಗಳ ಹಿಂದೆ ವಿದ್ಯುತ್ ಕಂಬ ಮುರಿದುಬಿದ್ದಿದ್ದು ಲೈನ್ ಮ್ಯಾನ್ ಗಳಿಗೆ ಹಲವು ಬಾರಿ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ ಅವರ ನಿರ್ಲಕ್ಷದಿಂದ ಜೋಳದ ಬೆಳೆ ನಾಶವಾಗಿದ್ದು ದಯಮಾಡಿ ಬೆಳೆಗೆ ಪರಿಹಾರ ದೊರೆಕಿಸಿ ಕೊಡುವಂತೆ ಹಾಗೂ ವಿದ್ಯುತ್ ಕಂಬವನ್ನು ಸರಿಪಡಿಸುವಂತೆ ಒತ್ತಾಯಿಸಿದರು.
ಸಂದರ್ಭದಲ್ಲಿ ಚೆಸ್ಕಾಂ ಸಹಾಯಕ ಕಾರ್ಯ ಪಾಲಕ ಅಭಿಯಂತರ ಶಂಕರ್,ರೈತ ಸಂಘದ ಮುಖಂಡರುಗಳು,ಸಾರ್ವಜನಿಕರು ಹಾಗೂ ಚೆಸ್ಕಾಂ ಅಧಿಕಾರಿಗಳು ಇನ್ನಿತರರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್