ಕಲ್ಬುರ್ಗಿ:ಕರ್ನಾಟಕ ರಾಜ್ಯ ಕನ್ನಡ ಭಾಷಿಕರ ಕನ್ನಡ ನಾಡು ಭಾಷಾವಾರು ಪ್ರಾಂತಗಳನ್ನ ಒಳಗೊಂಡಿರುವ ರಾಜ್ಯವಾಗಿ ನಾಮಕರಣ ಗೊಂಡು ಇದೇ 2023 ಅಕ್ಟೋಬರ್ 20 ಕ್ಕೆ ಐವತ್ತು ವರ್ಷ ಪೂರೈಸುತ್ತಿದೆ ಇದಕ್ಕಿಂತಲೂ ಪೂರ್ವದಲ್ಲಿ ಮೈಸೂರು ರಾಜ್ಯದ ರಾಜ್ಯದಾನಿ ಆಗಿತ್ತು ಆ ಸಂದರ್ಭದಲ್ಲಿ ತಮಿಳುನಾಡಿನ ಗಡಿ ಭಾಗದ ಹತ್ತಿರ ಇರುವ ಬೆಂಗಳೂರು ಕರ್ನಾಟಕ ರಾಜ್ಯ ರಾಜಧಾನಿ ಆಯ್ತು ಯಾವ ಕಾರಣಕ್ಕಾಗಿ ಮಾಡಲಾಯಿತು ಎಂಬ ಚರ್ಚೆ ಈಗ ಅಪ್ರಸ್ತುತ ಇದರಿಂದ ನಮ್ಮ ರಾಜ್ಯದ ಜನತೆಗೆ ಉದ್ಯಮ ವ್ಯಾಪಾರ ಉದ್ಯೋಗದಲ್ಲಿ ನೌಕರಿಯಲ್ಲಿ ಎಷ್ಟು ಲಾಭವಾಗಿದೆ ಗೊತ್ತಿಲ್ಲ ಅದಕ್ಕಿಂತಲೂ ಹೆಚ್ಚು ಲಾಭ ನೇರೆ ರಾಜ್ಯದವರಿಗೆ ಆಗಿದೆ ಇದೊಂದು ದುರಂತ ಅಂತ ಹೇಳಿದರೆ ಅತಿಶಯೋಕ್ತಿ ಕಂಡಿತ ಆಗಲಾರದು ಒಂದು ಕ್ರಿಕೆಟ್ ಆಡಬೇಕಾದರೆ ಬ್ಯಾಟ್ಸ್ಮನ್ ಮತ್ತು ಬೌಲರ್ ಸುತ್ತಲೂ ಇರುವ ಬೌಂಡರಿಯ ಮಧ್ಯ ಭಾಗದಲ್ಲಿ ನಿಂತು ಎಲ್ಲರೂ ಆಟವಾಡುತ್ತಾರೆ ವಾಸ್ತವ್ಯ ಸ್ಥಿತಿ ಹೀಗಿರುವಾಗ ರಾಜ್ಯದ ಕೊನೆಯ ಭಾಗದ ಜಿಲ್ಲೆಯು ರಾಜ್ಯದ ರಾಜಧಾನಿ ಆಗಿರುವುದು ಅಷ್ಟು ಸೂಕ್ತವಲ್ಲ ಸರ್ಕಾರ ಎಲ್ಲಾ ವಿರೋಧ ಪಕ್ಷಗಳ ರಾಜಕೀಯ ಮುಖಂಡರು ಹೋರಾಟಗಾರರ ಸಂಘಟನೆಗಳ ಮುಖಂಡರು ಬುದ್ಧಿಜೀವಿಗಳು ಸಾಹಿತಿಗಳು ಚಿಂತಕರು ಉದ್ಯೋಗಿಗಳು ವಿದ್ಯಾವಂತರು ಉದ್ಯಮಿಗಳು ಎಲ್ಲಾ ರೀತಿಯ ಸಾರ್ವಜನಿಕರು ಅಭಿಪ್ರಾಯ ಪಡೆದು ರಾಜ್ಯದ ಜನರ ಹಿತದೃಷ್ಟಿ ಗಮನದಲ್ಲಿ ಇಟ್ಟುಕೊಂಡು ಎಲ್ರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲರ ಅಭಿಪ್ರಾಯ ಪಡೆದು ರಾಜ್ಯದ ಮಧ್ಯಭಾಗದಲ್ಲಿರುವ ದಾವಣಗೆರೆ ಜಿಲ್ಲೆಯನ್ನು ರಾಜ್ಯದ ನೂತನ ರಾಜಧಾನಿಯಾಗಿ ಮಾಡಬೇಕು ಇದರಿಂದ ರಾಜ್ಯದ ಎಲ್ಲಾ ಭಾಗದ ಜನರಿಗೆ ಅನುಕೂಲವಾಗುತ್ತದೆ ಹಾಗೂ ಕಲ್ಯಾಣ ಕರ್ನಾಟಕ ಮುಂಬೈ ಕರ್ನಾಟಕ ಸೇರಿ ಯಾರು ಕೂಡಾ ಪ್ರತ್ಯೇಕ ರಾಜ್ಯದ ಬೇಡಿಕೆ ಕೇಳುವ ಪ್ರಶ್ನೆ ಉದ್ಭವ ಆಗೋದಿಲ್ಲ ಇಲ್ಲದೆ ಹೋದರೆ ರಾಜ್ಯದ ಭಾಗಗಳು ಪ್ರತ್ಯೇಕ ರಾಜ್ಯ ಬೇಡಿಕೆಗಳು ತೀವ್ರಗೊಂಡು ಅಖಂಡ ಕರ್ನಾಟಕ ಚಿದ್ರ ಚಿದ್ರ ವಾಗಿ
ಹೊದರೆ ಯಾರು ಆಶ್ಚರ್ಯ ಪಡಬೇಕಾಗಿಲ್ಲ ರಾಜ್ಯ ಆಳುವ ಸರ್ಕಾರಕ್ಕೆ ವಿರೋಧ ಪಕ್ಷದ ಮುಖಂಡರು ಸೇರಿ ಸಂಘಟನೆಗಳು ಎಚ್ಚರಿಕೆ ನೀಡಿಬೇಕು ಆದರಿಂದ ಸರ್ಕಾರ ರಾಜ್ಯದ ಎಲ್ಲಾ ಬಗೆಯ ಜನರು ಅಭಿಪ್ರಾಯ ಪಡೆದು ರಾಜ್ಯದ ಮಧ್ಯ ಭಾಗದಲ್ಲಿರುವ ಜಿಲ್ಲೆ ದಾವಣಗೆರೆಯನ್ನು ಕರ್ನಾಟಕ ರಾಜ್ಯದ ನೂತನ ರಾಜಧಾನಿಯಾಗಿ ಮಾಡಲು ಅಗತ್ಯ ದಿಟ್ಟ ನಿರ್ಧಾರದ ಜೋತೆಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಲಬುರ್ಗಿ ಜಿಲ್ಲಾ ಯುವ ಆದಿ ಬಣಜಿಗ ಸಮಾಜದ ಗೌರವಾಧ್ಯಕ್ಷ ವಿಶ್ವನಾಥ ಜಿ ಪಾಟೀಲ ಗೌನಳ್ಳಿ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಆಗ್ರಹ ಪಡಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.