ನಿಡಗುಂದಿ:ಕರ್ನಾಟಕ ರಾಜ್ಯ ನದಾಫ/ ಪಿಂಜಾರ ಸಂಘದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಗೌರವ ಪುರಸ್ಕಾರ ನೀಡಲಿದ್ದಾರೆ.ಪ್ರತಿವರ್ಷದಂತೆ ಈ ವರ್ಷವೂ ಕೂಡ 2022-23ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ 95% ರಷ್ಟು ಹಾಗೂ ಅದಕ್ಕೂ ಮೇಲ್ಪಟ್ಟ ಅಂಕ ಮತ್ತು ದ್ವಿತೀಯ ಪಿಯುಸಿಯಲ್ಲಿ 90% ರಷ್ಟು ಹಾಗೂ ಅದಕ್ಕೂ ಮೇಲ್ಪಟ್ಟ ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ನದಾಫ/ ಪಿಂಜಾರ ಸಮಾಜದ ಬಾಂಧವರು ವಿವಿಧ ಕ್ಷೇತ್ರಗಳಲ್ಲಿ ಅತ್ಯಂತ ಗಣನೀಯ ಸಾಧನೆ ಮಾಡಿದವರನ್ನು ಗುರುತಿಸಿ ಗೌರವ ಪುರಸ್ಕಾರ ನೀಡಲು ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿದೆ.20-06-2023 ರ ಒಳಗಾಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ನಡುಗುಂದಿ ತಾಲೂಕು ಘಟಕಕ್ಕೆ ನೀಡಲು ಅವಕಾಶವಿದೆ.ಶಾಲೆ ಮತ್ತು ಕಾಲೇಜಿನ ಶಿಕ್ಷಕರು ಪಾಲಕರು,ವಿದ್ಯಾರ್ಥಿಗಳು ತಮ್ಮ ಗ್ರಾಮಗಳಲ್ಲಿ ಈ ಕುರಿತು ಮಾಹಿತಿಯನ್ನು ನೀಡಿ ಮೇಲೆ ತಿಳಿಸಿದ ದಿನಾಂಕದೊಳಗೆ ತಾಲೂಕು ಘಟಕಕ್ಕೆ ಮಾಹಿತಿ ನೀಡಲು ಸೂಚಿಸಲಾಗಿದೆ.ಅರ್ಜಿ ನಮೂನೆ ಪಡೆಯಲು ಮತ್ತು ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬೇಕೆಂದು ಕರಾನಪಿ ಸಂಘದ ನಿಡಗುಂದಿ ತಾಲೂಕಾ ಘಟಕದ ಅಧ್ಯಕ್ಷ ದಾವಲಮಲಿಕ ನದಾಫ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮೊಬೈಲ್ ನಂಬರ್ 8748932667,9986247304 9481700168,9886476839
