ಮೈಸೂರು:ಮೈಸೂರಿನ ಹೃದಯ ಭಾಗದಲ್ಲಿರುವ ಅಗ್ರಹಾರ ವೃತ್ತದಲ್ಲಿ_
ಇಡೀ ಭರತ ಖಂಡ ಆಳಿದ ವೀರ ಕನ್ನಡಿಗ ದಕ್ಷಿಣ ಪಥೇಶ್ವರ “ಇಮ್ಮಡಿ ಪುಲಿಕೇಶಿಯ” ಬೃಹತ್ ಪುತ್ಥಳಿ ನಿರ್ಮಾಣ ಮಾಡಬೇಕೆಂದು ಕನ್ನಡಪರ ಹೋರಾಟಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅನೇಕ ದಶಕಗಳಿಂದ ಹೋರಾಟ, ಚಳವಳಿಗಳ ಮೂಲಕ ಇಡೀ ರಾಜ್ಯದ ಗಮನ ಸೆಳೆದಿರುವ ಅಗ್ರಹಾರ ವೃತ್ತದಲ್ಲೇ ಪುತ್ಥಳಿ ಪ್ರತಿಷ್ಠಾಪಿಸಲು ಶೀಘ್ರವೆ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಮೈಸೂರು ಅನೇಕ ಹೋರಾಟಗಾರರನ್ನು ರಾಜ್ಯಕ್ಕೆ ಕೊಡುಗೆಯಾಗಿ ಕೊಟ್ಟ ಜಿಲ್ಲೆಯಾಗಿದೆ.ಅಗ್ರಹಾರ ವೃತ್ತದಲ್ಲಿ ಸದ್ಯ ಯಾವುದೇ ಪ್ರತಿಮೆ ಇಲ್ಲ,ಈ ವೃತ್ತದಲ್ಲಿ ಪ್ರತಿಭಟನೆಗಳು,ಚಳವಳಿಗಳು ನಡೆಯುತ್ತಲೇ ಇರುತ್ತವೆ.ಸ್ವತಃ ಈಗಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಮೈಸೂರಿನವರೇ ಆಗಿದ್ದು ಅಗ್ರಹಾರ ವೃತ್ತ ಅವರಿಗೆ ಚಿರಪರಿಚಿತವಾಗಿದೆ.ಅವರು ಸಹ ಕನ್ನಡ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದವರು,ಆದ ಕಾರಣ ಕೂಡಲೇ ಇಮ್ಮಡಿ ಪುಲಿಕೇಶಿಯ ಬೃಹತ್ ಪುತ್ಥಳಿ ನಿರ್ಮಾಣ ಮಾಡಬೇಕೆಂದು ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.