ಕೊಟ್ಟೂರು:
ಈ ಹಿಂದೆ ಪುರಸಭೆಯಾಗಿ,ವಿಧಾನಸಭಾ ಕ್ಷೇತ್ರವಾಗಿಯೂ ಇತ್ತು ಆದರೆ ನಂತರದ ದಿನಗಳಲ್ಲಿ ಪುರಸಭೆ ಸ್ಥಾನ,ವಿಧಾನಸಭಾ ಕ್ಷೇತ್ರ ಎರಡೂ ಕೈತಪ್ಪಿದವು ಪುರಸಭೆಯಿಂದ ಪಟ್ಟಣ ಪಂಚಾಯಿತಿಗೆ ಹಿಮ್ಮುಖ ಚಲನೆಗೆ ಕೊಟ್ಟೂರು ಒಳಗಾಯಿತು ಪ್ರಸ್ತುತ ವಿಜಯನಗರ ಜಿಲ್ಲೆಯಲ್ಲಿಯೇ ಪರಿಣಾಮಾತ್ಮಕ ರಾಜಸ್ವ ಸಂಗ್ರಹವಾಗುವುದರ ಜೊತೆಗೆ ಐತಿಹಾಸಿಕ ಹಿನ್ನೆಲೆ,ಪೌರಾಣಿಕ ಹಿನ್ನೆಲೆಯಿದ್ದರೂ ಸಹ ಪಟ್ಟಣ ಪಂಚಾಯಿತಿಯಾಗಿಯೇ ಉಳಿದಿದೆ ಪುರಸಭೆಗೆ ಇರುವ ಎಲ್ಲಾ ಅರ್ಹತೆಗಳಾದ ಜನಸಂಖ್ಯೆ ಮೂಲಭೂತ ಸೌಲಭ್ಯ,ಪಟ್ಟಣ ಬೆಳೆಯುತ್ತಿರುವ ವೇಗ ಇವೆಲ್ಲವೂ ಗಣನೀಯವಾಗಿ ಏರುಮುಖವಿದ್ದರೂ ಸಹ ಕೊಟ್ಟೂರನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರದ ಇಚ್ಛಾಶಕ್ತಿಯ ಕೊರತೆ ಎದ್ದುಕಾಣುತ್ತಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು ಈ ಹಿಂದೆಯೇ ಕೊಟ್ಟೂರನ್ನು ಪುರಸಭೆಯನ್ನಾಗಿ ಮಾಡಲು ಶ್ರಮಿಸಿದರೂ ಅದು ಕೈಗೂಡದೇ ಅರ್ಧಕ್ಕೆ ನಿಂತುಬಿಟ್ಟಿತು.
ಸಾಮಾಜಿಕ ಬದ್ಧತೆಯನ್ನು ಒಳಗೊಂಡಂತೆ ಗ್ಯಾರಂಟಿಗಳನ್ನು ಈಡೇರಿಸುವುದರ ಮೂಲಕ ಜನರ ಭರವಸೆಯನ್ನು ಹೆಚ್ಚಿಸಿರುವ ಸಿದ್ಧರಾಮಯ್ಯನವರ ಕಾಂಗ್ರೆಸ್ ಸರ್ಕಾರ ಜನರ ಆಶೋತ್ತರಗಳಿಗೆ ತಕ್ಕಂತೆ ಕೆಲಸ ಮಾಡುವಂತೆ ಕಾಣಿಸುತ್ತಿರುವ ಪ್ರಯುಕ್ತ ಈ ಭಾಗದ ಜನರ ಆಸೆ ಈಗ ಚಿಗುರೊಡೆದಿದೆ. ವಿಶೇಷವಾಗಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹಮದ್ ಖಾನ್ ಕೂಡಲೇ ಈ ಬಗ್ಗೆ ಕಾರ್ಯಪ್ರವೃತ್ತರಾಗಿ ಕೊಟ್ಟೂರಿಗೆ ಆಡಳಿತಾತ್ಮಕವಾಗಿ ಸಿಗಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸಬೇಕೆಂದು ಕೊಟ್ರೇಶ್,ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಪಿ.ಚಂದ್ರಶೇಖರ್ ಒತ್ತಾಯಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.