ಕಲಬುರಗಿ/ಯಡ್ರಾಮಿ:ಕರ್ನಾಟಕ ರಾಜ್ಯದಲ್ಲಿ ಹಲವಾರು ವಸತಿ ಶಾಲೆಗಳಲ್ಲಿ ಹಾಗೂ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣೆಯ ಸಲುವಾಗಿ ಅಂದಿನ ಸರ್ಕಾರ ಕರಾಟೆ ಶಿಕ್ಷಕರಿಗೆ ವಿಶೇಷವಾದ ಅನುದಾನ ಬಿಡುಗಡೆ ಮಾಡಿತ್ತು ಆದರೆ ಇತ್ತೀಚಿನ ಕಾಂಗ್ರೆಸ್ ಸರ್ಕಾರ ಕರಾಟೆ ಶಿಕ್ಷಕರನ್ನು ಕಡೆಗಣಿಸಿ ಅವರ ಅನುದಾನವನ್ನು ಮಂಗಮಾಯ ಮಾಡಿದೆ ಎಂದು ಜೇವರ್ಗಿ ತಾಲೂಕಿನ ಅಲ್ಪಸಂಖ್ಯಾತ ಸಂಘಟನೆಯ ಹೋರಾಟಗಾರ ಮೈಹಿಬೂಬ್ ಪಟೇಲ್ ನಡುನಿಮನಿ ಗೌಡ್ರು ಬಿಳವಾರ ಅವರು ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರ ಹಾಕಿದ್ದಾರೆ ಅಲ್ಲದೆ ಕೂಡಲೇ ಕರಾಟೆ ಶಿಕ್ಷಕರ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಒಂದು ವೇಳೆ ನಿರ್ಲಕ್ಷ ವಹಿಸಿದ್ದಲ್ಲಿ ಸರಕಾರದ ವಿರುದ್ಧ ರಾಜ್ಯಮಟ್ಟದಲ್ಲಿ ದೊಡ್ಡ ಪ್ರಮಾಣದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಜೇವರ್ಗಿ ತಾಲೂಕ ಅಲ್ಪಸಂಖ್ಯಾತ ಸಂಘಟನೆ ಹೋರಾಟಗಾರರಾದ ಮೈಹಿಬೂಬ್ ಪಟೇಲ್ ನಡುವಿನಮನಿ ಗೌಡ್ರು ಬಿಳವಾರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.