ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಚಿಕ್ಕಹೆಸರೂರು ಸ.ಹಿ.ಪ್ರಾ. ಶಾಲೆಯಲ್ಲಿಎಸ್ ಡಿ ಎಂ ಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ

ರಾಯಚೂರು ಜಿಲ್ಲೆಯ ಲಿಂಗಸೂಗೂರ ತಾಲೂಕಿನ ಚಿಕ್ಕೆಹೆಸರೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ ಡಿ ಎಂ ಸಿ ರಚನೆ ಹಾಗೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಎಸ್ ಡಿ ಎಂ ಸಿ ಅಧ್ಯಕ್ಷರಾಗಲು ನಿಯಮಗಳನ್ನು ಮತ್ತು ಯಾವ ರೀತಿಯಾಗಿ ಆಯ್ಕೆ ಮಾಡಬೇಕು ಹಾಗೂ ಎಷ್ಟು ಜನ ಸದಸ್ಯರು ಇರಬೇಕು ಅಂತ ಪೋಷಕರಿಗೆ ಮನವರಿಕೆ ಮಾಡಿ ಕೊಟ್ಟರು ಮೊದಲು 18 ಸದಸ್ಯರನ್ನು ಆಯ್ಕೆ ಮಾಡಬೇಕು,18 ಜನ ಸದಸ್ಯರಲ್ಲಿ ಒಂಬತ್ತು ಜನ ಮಹಿಳೆಯರು ಇರಬೇಕು ಅದರಲ್ಲಿ 13 ಜನ ಜನರಲ್ ಹಾಗೂ 3 ಪರಿಶಿಷ್ಟ ಪಂಗಡದವರು,2 ಪರಿಶಿಷ್ಟ ಜಾತಿ ಇರತಕ್ಕದ್ದು ಹಾಗೂ ಸದಸ್ಯರಾಗಲು ಕಡ್ಡಾಯವಾಗಿ ಅವರ ಮಕ್ಕಳು ಶಾಲೆಯಲ್ಲಿ ಓದುತ್ತಿರಬೇಕು ಅಂತ ಸಭೆಯಲ್ಲಿ ಶ್ರೀ ಶಂಕರ್ ಸರ್ ತಿಳಿಸಿಕೊಟ್ಟರು ಈಗಾಗಲೇ ಶಾಲೆ ಶಿಕ್ಷಕರು ಎರಡು ಬಾರಿ ಈ ಸಭೆಯನ್ನು ಕರೆದಿದ್ದರು ಕೂಡಾ ಪೋಷಕರು ಬರದೇ ಇರುವ ಕಾರಣ ಯಾವುದೇ ಪ್ರಯೋಜನ ಆಗದೆ ಸಭೆಯನ್ನು ಮುಂದೂಡಿದ್ದರು.ಶಾಲೆಯ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು ಶಕ್ತಿ ಮೀರಿ ಪ್ರಯತ್ನ ಪಟ್ಟು ಎಲ್ಲರನ್ನೂ ಒಗ್ಗೂಡಿಸಿ ಯಾವುದೇ ತೊಂದರೆ ಆಗದಂತೆ ಹಾಗೂ ವಲಯ ಸಂಪನ್ಮೂಲ ಅಧಿಕಾರಿ ಶ್ರೀ ಭೀಮಪ್ಪ ಹಾಗೂ ಶ್ರೀಮತಿ ವಿಜಯಲಕ್ಷ್ಮಿ ಮುಖ್ಯ ಗುರುಗಳು ಹಾಗೂ ಶ್ರೀ ಮಾನಪ್ಪ ಸರ್ ಮತ್ತು ಶ್ರೀ ಶಂಕರ್ ಸರ್ ರವರ ಮಾರ್ಗದರ್ಶನದ ಮೂಲಕ ಎಸ್ ಡಿ ಎಂ ಸಿ ರಚನೆ ಮಾಡುವಲ್ಲಿ ಯಶಸ್ವಿ ಆಯಿತು ಶಾಲೆ ನಿಯಮದ ಪ್ರಕಾರ ಗ್ರಾಮದಲ್ಲಿ ಡಂಗೂರ ಹೊಡಿಸಿ ಮತ್ತು ಸುತ್ತೋಲೆ ಪತ್ರಗಳನ್ನು ದೇವಸ್ಥಾನ,ಚರ್ಚ್ ಹಾಗೂ ಜನ ಸೇರುವ ಪ್ರದೇಶಗಳಲ್ಲಿ ಪತ್ರಗಳನ್ನು ಹಚ್ಚಿ ಸಭೆಯನ್ನು ಕರೆದು ಶಾಲೆಯಲ್ಲಿ 18 ಜನ ಸದಸ್ಯರನ್ನು ಮಾಡಿ ಅದರಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನವನ್ನು ಎಲ್ಲಾ ಸದಸ್ಯರ ಒಪ್ಪಿಗೆ ಮೇರೆಗೆ ಗುಪ್ತ ಮತದಾನದ ಮೂಲಕ ಅಧ್ಯಕ್ಷರು ಶ್ರೀ ಶರಣಬಸವ ಮೇಟಿ ಉಪಾಧ್ಯಕ್ಷರು ಶ್ರೀಮತಿ ಸವಿತಾ ಗಂಡ ಈರಣ್ಣ ಅವರನ್ನು ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಸ. ಹಿ.ಪ್ರಾ. ಶಾಲೆಯ ಮುಖ್ಯಗುರುಗಳು ಶ್ರೀ ವಿಜಯಲಕ್ಷ್ಮಿ,ವಲಯ ಸಂಪನ್ಮೂಲ ಅಧಿಕಾರಿಯಾದ ಶ್ರೀ ಭೀಮಪ್ಪ,ಸಹ ಶಿಕ್ಷಕರಾದ ಶ್ರೀ ಮಾನಪ್ಪ ಸರ್,ಶ್ರೀ ಶಂಕರ್ ಸರ ಹಾಗೂ ಪೋಷಕರು ಮತ್ತು ಸದಸ್ಯರಾದ ಶ್ರೀ ಸೋಮಯ್ಯ ಹಿರೇಮಠ,ಶ್ರೀ ಬಹದ್ದೂರ ಶ್ರೀ ರಮೇಶ ಭೋವಿ,ಶ್ರೀ ಶಾಂತಣ್ಣ ಪೊಲೀಸ್ ಪಾಟೀಲ್, ಶ್ರೀ ಶರಣಬಸವ ಮಡಿವಾಳ,ಶ್ರೀ ಮೌನೇಶ ಗುರಿಕಾರ, ಶ್ರೀ ಶರಣಬಸವ ಗುರಿಕಾರ,ಶ್ರೀ ಶರಣಬಸವ ಪಲ್ಕನ ಮರಡಿ,ಶ್ರೀ ಶರಣಬಸವ ಅಮರಾವತಿ ಶ್ರೀಮತಿ ಕವಿತಾ,ಶ್ರೀಮತಿ ಗಂಗಮ್ಮ,ಶ್ರೀಮತಿ ಗಿರಿಜಮ್ಮ, ಸಭೆಯಲ್ಲಿ ಉಪಸ್ಥಿತರಿದ್ದರು.
ವರದಿ:ಪುನೀತಕುಮಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ