ಕಲ್ಬುರ್ಗಿ:ಕರ್ನಾಟಕ ರಾಜ್ಯದ ಹಲವಾರು ಶಾಲೆ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳ ಸ್ವಯಂ ರಕ್ಷಣೆಯ ಆದ್ಯತೆಯ ಮೆರೆಗೆ ಮೊದಲಿನ ಸರ್ಕಾರವು ಅನುದಾನ ಬಿಡುಗಡೆ ಮಾಡಿತ್ತು ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಹಾಗೂ ವಸತಿ ನಿಲಯಗಳಲ್ಲಿ ಕರಾಟೆ, ಸ್ವಯಂ ರಕ್ಷಣೆ ಸಲುವಾಗಿ ತರಬೇತಿ ನೀಡಲಾಗುತ್ತಿತ್ತು ಆದರೆ ಇತ್ತೀಚಿನ ಕಾಂಗ್ರೆಸ್ ಸರ್ಕಾರವು ಕರಾಟೆ ಶಿಕ್ಷಕರ ಅನುದಾನ ಬಿಡುಗಡೆ ಮಾಡದೆ ಕರಾಟೆ ಶಿಕ್ಷಕರನ್ನು ಕಡೆಗಣಿಸಿದೆ ಆದ್ದರಿಂದ ಈ ಸರ್ಕಾರದ ನಡೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಕಲ್ಯಾಣ ಕರ್ನಾಟಕ ಶೋಟೋಕಾನ ಕರಾಟೆ ಅಸೋಸಿಯೇಷನ ಕಲ್ಬುರ್ಗಿ ನಗರದ ಜಿಲ್ಲಾಧ್ಯಕ್ಷರಾದ ಹುಸೇನ್ ಭಾಷಾ ಅವರು ಸರಕಾರದ ವಿರುದ್ಧ ಕಿಡಿಕಾರಿದ್ದಾರೆ ಅಲ್ಲದೆ ಕೂಡಲೇ ಸರ್ಕಾರ ಹೆಣ್ಣು ಮಕ್ಕಳ ಸ್ವಯಂ ರಕ್ಷಣೆಯ ದೃಷ್ಟಿಯಿಂದ ಕೂಡಲೆ ಸರ್ಕಾರವು ಅನುದಾನ ಬಿಡುಗಡೆ ಮಾಡಿ ಶಾಲೆ ಕಾಲೇಜುಗಳಲ್ಲಿ ಕರಾಟೆ ಸ್ವಯಂ ರಕ್ಷಣೆ ಕಡ್ಡಾಯಗೊಳಿಸುವಂತೆ ಆದೇಶ ಹೊರಡಿಸಲಿ ಎಂದು ಕಲ್ಯಾಣ ಕರ್ನಾಟಕ ಶೋಟೋಕಾನ ಕರಾಟೆ ಅಸೋಸಿಯೇಷನ ಕಲ್ಬುರ್ಗಿ ನಗರದ ಜಿಲ್ಲಾಧ್ಯಕ್ಷರು ಹುಸೇನ್ ಭಾಷಾ ಹಿರಿ ಮುದುವಾಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.