ಪತ್ರಿಕಾ ದಿನಾಚರಣೆಯ ಮತ್ತು ಸನ್ಮಾನ ಕಾರ್ಯಕ್ರಮ
ದಾವಣಗೆರೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಧ್ವನಿ ಇವರ ವತಿಯಿಂದ
ಗುರುಭವನದಲ್ಲಿ ನಿನ್ನೆ ದಿನಾಂಕ 15-7 -2023 ಶನಿವಾರ ಸಂಜೆ 3 ಘಂಟೆಗೆ ದಾವಣಗೆರೆಯ ಶಾಸಕರಾದ ಶ್ರೀ ಶಾಮನೂರು ಶಿವಶಂಕರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ ಪತ್ರಕರ್ತರು ಸಮಾಜದ ಅಂಕು ಡೊಂಕು ತಿದ್ದುವ ಕೆಲಸವನ್ನು ಮಾಡಿ ಯಾವುದೇ ಆಶೆ ಅಮಿಶ್ ಗಳಿಗೆ ಬಲಿಯಾಗಿ ಪತ್ರಿಕೋದ್ಯಮ ಘನತೆಯನ್ನು ಹಾಳು ಮಾಡಬೇಡಿ ಎಂದು ಹೇಳಿದರು.
ಮಾಯಕೊಂಡ ಶಾಸಕ ಬಸವಂತಪ್ಪ ಮಾತನಾಡಿ ನಕಲಿ ಪತ್ರಕರ್ತರ ಹಾವಳಿಯಿಂದ ನೈಜ ಪತ್ರಕರ್ತರಿಗೆ ತೊಂದರೆಯಾಗುತ್ತಿದೆ
ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯನಿರತ ಪತ್ರ ಸಂಘದ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅವರು ಮಾತನಾಡಿ ರಾಜ್ಯದ ಪತ್ರಕರ್ತರ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವರ ಸಮಸ್ಯೆಗಳಿಗೆ ಸರ್ಕಾರವು ಧ್ವನಿ ಆಗಬೇಕು,ಪತ್ರಕರ್ತರ ಮೇಲೆ ನಡೆಯುವ ದೌರ್ಜನ್ಯಗಳನ್ನು ಹತ್ತಿಕ್ಕುವ ಕಾಯ್ದೆಯನ್ನು ಜಾರಿ ತರಬೇಕು ರಾಜ್ಯಾದ್ಯಂತ ಉಚಿತ ಬಸ್ ಪಾಸ್ ವಿತರಣೆ ಮಾಡಬೇಕು ಆರೋಗ್ಯ ವಿಮೆ ಇನ್ನು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ರಾಜ್ಯ ಸರ್ಕಾರವು ಇದರ ಬಗ್ಗೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯ ಎಲ್ಲಾ ತಾಲೂಕಿನ ಪತ್ರಕರ್ತರ ಭಾಗವಹಿಸಿದರು
ಜಿಲ್ಲಾಧ್ಯಕ್ಷರಾದ ನಾಗರಾಜ್,ವಸುದೇವ್,ಕೊಟ್ಟರಯ್ಯ ಇದ್ದರು.ಈ ಸಂದರ್ಭದಲ್ಲಿ ಹಲವಾರು ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು.
ವರದಿ-ಪ್ರಭಾಕರ್ ಡಿಎಂ ಹೊನ್ನಾಳಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.