ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಬಳಿಯ ಸಿದ್ದೇಶ್ವರ ಬೆಟ್ಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆಯೊಂದು ಬಿದ್ದಿದೆ.
ಹನೂರು ತಾಲ್ಲೂಕಿನ ಕಗ್ಗಲಗುಂದಿ ಹಾಗೂ ಕಂಚಗಳ್ಳಿ ಗ್ರಾಮದಲ್ಲಿ ಮನುಷ್ಯರ ಮೇಲೆ ದಾಳಿ ಮಾಡಿ ಆತಂಕ ಮೂಡಿಸಿದ್ದ ಚಿರತೆ ಕಳೆದ ವಾರ ಸಿದ್ದೇಶ್ವರ ಬೆಟ್ಟದಲ್ಲಿ ಓಡಾಡುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ವೀಕ್ಷಣೆ ಮಾಡಿದ್ದ ಅರಣ್ಯ ಇಲಾಖೆಯು ಕಾರ್ಯಾಚರಣೆ ಕೈಗೊಂಡಿದ್ದು ಆಯಕಟ್ಟಿನ ಆರು ಕಡೆಗಳಲ್ಲಿ ಬೋನುಗಳನ್ನು ಇರಿಸಿದರು ಇದರೊಟ್ಟಿಗೆ 30 ಕ್ಯಾಮೆರಾ ಗಳನ್ನು ಅಳವಡಿಸಿದ್ದರು.
ಭಾನುವಾರ ಮುಂಜಾನೆ ಚಿರತೆ ಬೋನಿಗೆ ಬಿದ್ದಿರುವ ಬಗ್ಗೆ ಗಸ್ತಿನಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಯು ನೋಡಿದ ತಕ್ಷಣ ಮಾಹಿತಿ ಕೊಟ್ಟಿದ್ದಾರೆ ಈ ಮಾಹಿತಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಬೋನು ಇರಿಸಿದ್ದಂತ ಸ್ಥಳಕ್ಕೆ ದೌಡಾಯಿಸಿ,ಚಿರತೆಯನ್ನು ವೀಕ್ಷಣೆ ಮಾಡಿದರು.ಈ ಚಿರತೆಯು ಮನುಷ್ಯರ ಮೇಲೆ ದಾಳಿ ಮಾಡುತ್ತಿದ್ದ ಚಿರತೆಯೆ ಅಥವಾ ಇಲ್ಲವೇ ಎಂಬುದನ್ನು ತಿಳಿಯಬೇಕಾಗಿದೆ.
ಇನ್ನು ಮುಂದೆಯಾದರೂ ಅರಣ್ಯ ಇಲಾಖೆಯವರು ಮನುಷ್ಯ ಪ್ರಾಣಗಳ ಕಾಪಾಡುವ ಹಿತ ದೃಷ್ಟಿಯಿಂದ ಚಿರತೆಗಳು ದಾಳಿ ಮಾಡುವ ಮೊದಲು ಬೋನುಗಳನ್ನು ಇರಿಸಿ ಪ್ರಾಣಗಳನ್ನು ಉಳಿಸಬೇಕೆಂದು ಗ್ರಾಮಸ್ಥರ ಮನವಿ.
ವರದಿ-ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.