ಬೀದರ: ಸಾಮಾಜಿಕ ಕಾರ್ಯಕರ್ತ,ಸ್ನೇಹಜೀವಿ, ಸ್ವಾಮಿ ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಬೀದರ್ ತಾಲೂಕಿನ ಆಣದೂರ ಗ್ರಾಮದ ಬಸವಚೇತನ್ ಸೋರಳ್ಳಿಯನ್ನು ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಚನ್ನಶೆಟ್ಟಿ ಮತ್ತು ಬೀದರ್ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮನೋಹರ್ ಮಾಳಗೆ ಅವರ ಸೂಚನೆ ಸಲಹೆ ಮೇರೆಗೆ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಬರುವ ಆಣದೂರ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಬೀದರ್ ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಸವರಾಜ ಬಶೆಟ್ಟಿ ಅವರು ಘೋಷಣೆ ಮಾಡಿದ್ದಾರೆ.
ನೂತನವಾಗಿ ಆಣದೂರ ವಲಯ ಕ. ಸಾ.ಪ. ಅಧ್ಯಕ್ಷರಾಗಿ ನೇಮಕಗೊಂಡ ಬಸವ ಚೇತನ್ ಸೋರಳ್ಳಿ, ಅಪ್ಪಟ ಕನ್ನಡಾಭಿಮಾನಿಯಾಗಿದ್ದು, ಸ್ವಾಮಿ ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ಮೂಲಕ ಪರಿಸರ ಜಾಗೃತಿ, ಗೋ ಸೇವೆ, ಯುವ ಸಬಲೀಕರಣ, ಶಾಲಾ ಕಾಲೇಜುಗಳಲ್ಲಿ ದೇಶ ಭಕ್ತರ, ದಾರ್ಶನಿಕರ, ಸಾಹಿತಿಗಳ ಪರಿಚಯದ ಮೂಲಕ ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವ ಹೀಗೆ ಹತ್ತು ಹಲವು ಸಮಾಜ ಉಪಯೋಗಿ ಕಾರ್ಯ ಮಾಡುತ್ತಿರುವ ಉತ್ಸಾಹಿ ತರುಣ ಬಸವ ಚೇತನ್ಗೆ ಜಿಲ್ಲಾ ತಾಲೂಕಾ, ಬೀದರ್ ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಶುಭ ಹಾರೈಸಿದ್ದಾರೆ.
ವರದಿ: ಸಾಗರ ಪಡಸಲೆ