ಮುಂಡಗೋಡ:ಪೊಲೀಸರು ಎಂದರೆ ಜನ ಸಾಮಾನ್ಯ ನಲ್ಲಿ ಇರುವ ಕಲ್ಪನೆಯೇ ಬೇರೆ ಆದರೆ ಇದಕ್ಕೆ ತದ್ವಿರುದ್ಧವಾಗಿ ಇಲ್ಲೊಬ್ಬ ಪೊಲೀಸ್ ಪೇದೆ ತನ್ನ ಹುಟ್ಟು ಹಬ್ಬದ ದಿನದಂದು ಮುಂಡಗೋಡ ನಗರದಲ್ಲಿರುವ ಜ್ಞಾನ ಪ್ರಜ್ಞಾ ಅಂಧ ಮಕ್ಕಳ ವಸತಿ ಶಾಲೆಯಲ್ಲಿ ತನ್ನ ಸಂಬಳದ ಕೆಲ ಭಾಗವನ್ನು ಮಕ್ಕಳಿಗೆ ಒಂದು ದಿನದ ಮಟ್ಟಿಗೆ ಊಟದ ಹಾಗೂ ಅಗತ್ಯ ವಸ್ತುಗಳ ವ್ಯವಸ್ಥೆ ಮಾಡಿ ಮಾದರಿ ಎನಿಸಿಕೊಂಡಿದ್ದಾರೆ.ಮೂಲತಃ ಬಿಜಾಪುರ ಮೂಲದ ಪೊಲೀಸ್ ಪೇದೆ ಕಾಶಿರಾಯ ಕಳೆದ 2 ವರ್ಷಗಳಿಂದ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು,ಕಳೆದ ಬಾರಿಯೂ ತನ್ನ ಹುಟ್ಟು ಹಬ್ಬ ನಿಮಿತ್ತ ಸುಮಾರು ವಿವಿಧ ಜಾತಿಯ ಸಸ್ಯಗಳನ್ನು ನೆಟ್ಟು ಹಾಗೂ ಇದೆ ಶಾಲೆಯ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿಸಿದ್ದರು,ಈ ಬಾರಿಯೂ ಇದೆ ರೀತಿ ಮಾದರಿ ಕಾರ್ಯ ಮಾಡಿರುವ ಪೇದೆ ಸಮಾಜದಲ್ಲಿ ಉಳ್ಳವರು ಇಲ್ಲದವರಿಗೆ ಅಗತ್ಯಗಳನ್ನು ಪೂರೈಸುವ ಆಸಕ್ತಿ ಬೆಳೆಸಿಕೊಂಡರೆ ಓದಲು ಪ್ರೇರೇಪಿಸಿದರೆ ಸಮಾಜ ಉನ್ನತಿ ಸಾಧಿಸುತ್ತದೆ ಎಂದು ತಮ್ಮ ಕೆಲಸದ ಕುರಿತು ತೃಪ್ತಿ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಈ ರೀತಿಯ ಮನೋಭಾವ ಇಟ್ಟುಕೊಂಡ ಪೊಲೀಸರಿಂದಲೇ ಸಮಾಜದಲ್ಲಿ ಪೊಲೀಸ್ ಇಲಾಖೆಯ ಕುರಿತು ಜನರಿಗೆ ಗೌರವಾದರಗಳು ಹೆಚ್ಚುತ್ತಿವೆ.
ವರದಿ- ಶಿವರಾಜ್ ಕುಮಾರ್