ಗದಗ:ಗ್ರಾಮ ಒನ್ ಸೇವಾಪ್ರತಿನಿಧಿಗಳಿಂದ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮೀ ಯೋಜನೆಗೆ ಯಾವುದೇ ಸೇವಾಶುಲ್ಕ ಪಡೆಯಬಾರದು ಎಂದು ಸರ್ಕಾರವು ಹೇಳಿರುವದರಿಂದ ಜನರಿಗೆ ಗ್ರಾಮ ಒನ್ ಕೇಂದ್ರದವರು ಉಚಿತವಾಗಿ ಸೇವೆ ನೀಡಿದರೆ ಪೇಪರ್, ಇಂಕ್,ವಿದ್ಯುತ್ ದರ,ಕಟ್ಟಡದ ಬಾಡಿಗೆ ಇತ್ಯಾದಿ ಖರ್ಚಿಗೆ ಯಾರು ಹೊಣೆ ಹಾಗೂ ನಮ್ಮ ಜೀವನಕ್ಕೆ ಬೇಕಾದ ಕನಿಷ್ಠ ಸಂಪಾದನೆ ಮಾಡಲು ಕಷ್ಟವಾಗುತ್ತೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಅಧಿಕಾರಿಗಳು ಗಮನ ನೀಡಿ ನಾವು ಸ್ವಾವಲಂಬನೆ,ಸದೃಢ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಪತ್ರ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಶ್ರೀ ಈರಣ್ಣ ಬಡಿಗೇರ,ಪ್ರಶಾಂತಯ್ಯ ಹಿರೇಮಠ, ಬಸವರಾಜ್ ಮೇಟಿ,ಆಕಾಶಗೌಡ,ನಿಂಗರಾಜ್,ರವಿ ಗುಗ್ಗರಿ,ಹೈದರಲಿ ಕವಾಸ,ವಿರೇಶ್,ಪ್ರವೀಣಕುಮಾರ್,80ಕ್ಕೂ ಹೆಚ್ಚು ಗ್ರಾಮ ಒನ್ ಪ್ರತಿನಿದಿಗಳು ಹಾಜರಿದ್ದರು.
ವರದಿ-ಸದಾಶಿವ.ಭೀ.ಮುಡೆಮ್ಮನವರ
