ಯಾದಗಿರಿ:ವಡಗೇರ ತಾಲ್ಲೂಕಿನ ಹಾಲಗೇರಾ ಗ್ರಾಮದ ಪ್ರಗತಿ ಪರ ರೈತ ಸಿದ್ದಪ್ಪ ನಾಟೇಕರ ಅವರ ಹತ್ತಿ ಬೆಳೆಯಲ್ಲಿ ಹತ್ತಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಕುಮಾರ ಸ್ವಾಮಿ ಹಿರೇಮಠ ಬೇಸಾಯ ತಜ್ಞರು ಕೃಷಿ ಮಹಾ ವಿಶ್ವ ವಿದ್ಯಾಲಯ ಭೀಮರಾಯನ ಗುಡಿ ಇವರು ಹತ್ತಿ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ಹತ್ತಿ ಬೆಳೆಯ ರೈತರಿಗೆ ಸಂಪೂರ್ಣವಾಗಿ ಮಾಹಿತಿ ನೀಡಿದರು ಅದೇ ರೀತಿ ಕಲಿಕೆ ಸಂಸ್ಥೆಯ ಕಾರ್ಯಕ್ರಮ ಸಂಯೋಜಕರಾದ ಮಂಜುನಾಥ ವಿಶ್ವ ಕರ್ಮ ಅವರು ಕಲಿಕೆ ಜೀವನೋಪಾಯ ಕಾರ್ಯಕ್ರಮದ ಗುರಿ ಮತ್ತು ಉದೇಶಗಳನ್ನು ವಿವಿದ ಗ್ರಾಮಗಳಿಂದ ಆಗಮಿಸಿದ ರೈತರಿಗೆ ಮಾಹಿತಿ ನೀಡಿದರು.
ಹತ್ತಿಬೆಳೆಯ ಕ್ಷೇತ್ರೋತ್ಸವದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಕಾರ್ಯ ಕ್ರಮ ಸಂಯೋಜಕರಾದ ಶಾಂತುಗೌಡ ಬಿರಾದಾರ್ ರವರು ನೇರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಕಲಿಕೆ ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಅನುರಾಧಾ ಮತ್ತು
ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಕುಮಾರ್.ಎಸ್. ತುಮಕೂರು,ರಫಿಕೊಂಕಲ್,ಕೃಷ್ಣ ಕೊಂಕಲ್, ಹಣಮಂತ ಬಿಳ್ಹಾರ,ಭೀರಲಿಂಗ,ಸೈದು ವಡಗೇರ,ಮಾಂತೇಶ್ ಬಿಳ್ಹಾರ,ಭೀಮಶಂಕರ್, ಬಾಲಪ್ಪ ಮಾಚನೂರ ಭಾಗವಹಿಸಿದ್ದರು.
ಹಾಲಗೇರಾ ಗ್ರಾಮದ ಸುತ್ತಮುತ್ತಲಿನ ವಿವಿದ ಗ್ರಾಮದ ರೈತರು ಅಂದರೆ ತುಮಕೂರು, ಉಳ್ಳೆಸೂಗುರು,ಮಾಲಳ್ಳಿ,ಕುಮ್ನೂರು ಕುರುಕುಂದ ಹಳ್ಳಿಗಳಿಂದ ರೈತರು ಈ ಕಾರ್ಯಕ್ರಮಕ್ಕೆ 150 ಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.