ಕರ್ನಾಟಕ ಗೃಹ ರಕ್ಷಕ ದಳ ಸಿರಗುಪ್ಪ ಘಟಕದ ವತಿಯಿಂದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ಸಿರಗುಪ್ಪ ಗೃಹ ರಕ್ಷಕ ದಳದ ಘಟಕ ಅಧಿಕಾರಿಯಾದ ಬಿ.ಆರ್.ತಿಮ್ಮನಗೌಡ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ.ಮಾನವನಿಗೆ ಪರಿಸರದ ಕೊಡುಗೆ ಅಪಾರ. ಪರಿಸರ ನಮಗಾಗಿ ಶುದ್ಧವಾದ ಗಾಳಿ,ಆಹಾರ ನೀಡುತ್ತದೆ ಆದರೆ ಪರಿಸರಕ್ಕಾಗಿ ನಾವು ಏನೂ ಕೊಡುಗೆ ನೀಡಲಾರೆವು ಯಾಕೆಂದರೆ ಇಂದಿನ ಅಧುನಿಕತೆಯೇ ಕಾರಣ ಅಧುನಿಕತೆಯಿಂದ ಗಿಡಮರಗಳನ್ನು ಕಡಿಯುತ್ತಿದ್ದೇವೆ,ಮಣ್ಣಿನ ಸವಕಳಿ ಹೆಚ್ಚಾಗುತ್ತಿದೆ,ಆಹಾರ ಪದಾರ್ಥಗಳ ಉದ್ಪಾದನೆ ಕಡಿಮೆಯಾಗಿ ದಿನೇ ದಿನೇ ಪದಾರ್ಥಗಳ ಬೆಲೆ ಹೆಚ್ಚಾಗುತ್ತಿದೆ ಅದಕ್ಕೆ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು ಗಿಡಮರಗಳನ್ನು ಹೆಚ್ಚು ಹೆಚ್ಚು ನೆಟ್ಟು ಪೋಷಿಸಬೇಕು ನಮ್ಮ ದಿನನಿತ್ಯದ ಅವಧಿಯಲ್ಲಿ ಕೂಡಾ ಸ್ವಲ್ಪ ಕಾಲಾವಧಿಯನ್ನು ಪರಿಸರ ಸೇವೆಗಾಗಿ ಮೀಸಲಿಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿರಗುಪ್ಪ ಗೃಹ ರಕ್ಷಕ ದಳದ ಅಧಿಕಾರಿಗಳು,ಸಿಬ್ಬಂದಿಗಳು ಉಪಸ್ಥಿತರಿದ್ದರು.