ಹೊನ್ನಾಳಿ:ನಾಗರತ್ನ.ಟಿ.ರವರು ಆರೋಗ್ಯ ಕ್ಷೇತ್ರದಲ್ಲಿ ಸುಮಾರು 20 ವರ್ಷಗಳ ಕಾಲ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ 2023 ನೇ ಸಾಲಿನ ನ್ಯಾಷನಲ್ ಫ್ಲಾರೆನ್ಸ್ ಹೈಟಿಂಗೇಲ್ ಅವಾರ್ಡ್‌ಗೆ ಭಾಜನರಾಗಿದ್ದಾರೆ
ಅವರು ಭಾರತ ಸರ್ಕಾರದ ಆರೋಗ್ಯ ಇಲಾಖೆಯ ಇಂಡಿಯನ್ ನರ್ಸಿಂಗ್ ಕೌನ್ಸಿಲ್ ನಿಂದ ಪ್ರದಾನ ಮಾಡುವ ರಾಷ್ಟ್ರಮಟ್ಟದ 2023ನೇ ಸಾಲಿನ ನ್ಯಾಷನಲ್ ಫ್ಲಾರೆನ್ಸ್ ನೈಟಿಂಗೇಲ್ ಅವಾರ್ಡ್‌ಗೆ
ದೇಶಾದ್ಯಂತ ನೂರಾರು ಪ್ರಾಸ್ತಾವನೆಗಳು ಸಲ್ಲಿಕೆಯಾಗಿದ್ದು,ಅದರಲ್ಲಿ ಸಿಸ್ಟರ್ ನಾಗರತ್ನ.ಟಿ. ಆಯ್ಕೆಯಾಗಿದ್ದಾರೆ.
ಶಿವಮೊಗ್ಗ ಮೂಲದ ಸಿಸ್ಟರ್ ನಾಗರತ್ನರವರು ಸೀಗೆಹಟ್ಟಿ-ಬೊಮ್ಮನಕಟ್ಟೆಯಲ್ಲಿ ವಾಸವಾಗಿದ್ದು,ಈಗ ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಸುಮಾರು 20 ವರ್ಷಗಳ ಕಾಲ ಆರೋಗ್ಯ ಇಲಾಖೆಯಲ್ಲಿ ನಗು ಮುಖದೊಂದಿಗೆ ಪ್ರೀತಿ ವಿಶ್ವಾಸದಿಂದ ರೋಗಿಗಳನ್ನು ಸಾರ್ವಜನಿಕರನ್ನು ಮಾತನಾಡಿಸುತ್ತಾ ಎಲ್ಲರ ಪ್ರೀತಿಗೌರವಕ್ಕೆ ಪಾತ್ರರಾಗಿದ್ದಾರೆ.ಕೊರೋನಾ ಸಮಯದಲ್ಲಿ
ಜೀವದ ಹಂಗನ್ನು ತೊರೆದು ಮಾನವೀಯತೆಯಿಂದ ಸೇವೆ ಸಲ್ಲಿಸಿರುವುದನ್ನು ಸ್ಮರಿಸಬಹುದು ಹೊನ್ನಾಳಿ ತಾಲ್ಲೂಕಿನ ಕತ್ತಿಗೆಯ ಪ್ರಾಥಮಿಕ ಆರೋಗ್ಯಕೇಂದ್ರ, ಹೊಳೆ ಅರಳಹಳ್ಳಿ ಉಪ ಕೇಂದ್ರ,ಸೊರಟೂರು ಉಪ ಕೇಂದ್ರ ಸೇರಿದಂತೆ ಹತ್ತು ಹಲವು ಕಡೆ ಸೇವೆ ಸಲ್ಲಿಸಿದ್ದಾರೆ.ಮೊದಲು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ಈಗ ಮುಂಬಡ್ತಿ ಪಡೆದು ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ತಾಯಿ:ಜಯಲಕ್ಷ್ಮೀ,ತಂದೆ:ತಿಮ್ಮರೆಡ್ಡಿ ವರ ಮಗಳಾಗಿ,ಶಂಕರ್‌ರವರ ಪತ್ನಿಯಾಗಿ ತುಂಬು ಕುಟುಂಬದ ಸುಸಂಸ್ಕೃತ ಗೃಹಿಣಿಯಾಗಿರುವ ಇವರ ಮಗ ಮಾಸ್ಟರ್ ವಿಶ್ವಾಸ್ ರವರು ಸಹ 16 ಚಲನಚಿತ್ರದಲ್ಲಿ ನಟಿಸಿದ್ದಾರೆ.
ಮಗಳು ಪ್ರೀತಿ ಸೇರಿದಂತೆ ಸ್ನೇಹಮಯ ಕುಟುಂಬ ವಾಗಿದ್ದು,ಅವರ ಪತಿ ಶಂಕರ್ ಸಹ ನಗುಮುಖ ದೊಂದಿಗೆ ಸಮಾಜಸೇವೆಯನ್ನು ಸಲ್ಲಿಸುವ ಹೃದಯವಂತರಾಗಿದ್ದಾರೆ.
ನೆಹರು ಯುವ ಕೇಂದ್ರದಲ್ಲಿ ಸಮಾಜ ಸೇವಾ ಸಂಸ್ಥೆ ಕಾರ್ಯಕರ್ತೆಯಾಗಿ ಸೇವೆಸಲ್ಲಿಸಿದ್ದಾರೆ.ಇವರ ಸೇವೆಯನ್ನು ಗುರುತಿಸಿ ರಾಜ್ಯಮಟ್ಟದ ಪ್ಲಾರೆನ್ಸ್ ಡಾ: ನೈಟಿಂಗೇಲ್ ಅವಾರ್ಡ್,ಸುವರ್ಣರಾಜ್ಯ ಪ್ರಶಸ್ತಿ, ಕನಕಶ್ರೀ ಚೇತನ ಪತಂಜಲಿ ರತ್ನರಾಜ್ಯ ಜೆ.ನಾ.ಪ್ರಶಸ್ತಿ, ಅತ್ಯುತ್ತಮ ಕರೋನ ವಾರಿಯರ್ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿ ಗೌರವಗಳಿಗೆ ಭಾಜನರಾಗಿದ್ದಾರೆ.
ಇತ್ತೀಚೆಗೆ ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ
ಮುರ್ಮರವರು ಈ ಪ್ರತಿಷ್ಠಿತ ರಾಷ್ಟ್ರ ಮಟ್ಟದ ನ್ಯಾಷನಲ್ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ವರದಿ-ಪ್ರಭಾಕರ್ ಡಿಎಂ ಹೊನ್ನಾಳಿ
One Response
ನಿಮಗೆ ಹೃದಯಪೂರ್ವಕ ಧನ್ಯವಾದಗಳು ಸರ್