ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಜಿ ವಿ ಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಸೇವಾ ಯೋಜನೆ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದ ಉಧ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾನಾಡಿದ ಶಾಸಕರಾದ ಎಮ್ ಆರ್ ಮಂಜುನಾಥ್ ವಿದ್ಯಾರ್ಥಿಗಳಿಗೆ ನಮ್ಮ ಭಾಗದ ಗಣ್ಯ ವ್ಯಕ್ತಿಗಳೆ ನಿಮಗೆ ಆದರ್ಶವಾಗಿದ್ದಾರೆ ಅವರನ್ನು ನೀವೆಲ್ಲರೂ ಪಾಲಿಸಲು ಸಲಹೆ ನೀಡಿದರು.
ಸಮಾಜ ಕಟ್ಟಲು ಮುಂದಾದ ಮಹಾನುಭಾವರ ಆತ್ಮ ಕಥೆಗಳ ಬಗ್ಗೆ ತಿಳಿದುಕೊಳ್ಳುಲು ಪ್ರಯತ್ನಿಸಬೇಕು ನೀವು ಮುಟ್ಟುವ ಗುರಿಯನ್ನು ತಲುಪಲು ಓದಿನ ಸಾದನೆ ಮುಖ್ಯವಾಗಿರುತ್ತದೆ,ಹೆಚ್ಚು ಓದಿನ ಕಡೆ ಗಮನ ಹರಿಸುವಂತಾದದರೆ ಅಂತಹವರಿಗೆ ಬಹುಮಾನ ನೀಡಲು ಸಲಹೆ ನೀಡಿದರು ಪಟ್ಟಣ ಮಕ್ಕಳಿಗೆ ಹೋಲಿಕೆ ಮಾಡಿದರೆ ಗ್ರಾಮೀಣ ಮಕ್ಕಳಲ್ಲಿ ಚುರುಕತನ ಜಾಸ್ತಿಯಿದೆ ಆದರೆ ಜ್ಞಾನಾರ್ಜನೆ ಬಹಳ ಕಡಿಮೆಯಾಗಬಾರದು,ಸರ್ಕಾರಗಳು ಹೊರಗಡೆ ಮಾಡುವ ಸಂಶೋದನೆಯನ್ನು ನಮ್ಮಲ್ಲೆ ಮಾಡಿದರೆ ಉಪಯೋಗವೆ ಹೆಚ್ಚು ಕೃಷಿಯ ಬಗ್ಗೆ ಹೆಚ್ವು ಒತ್ತು ಕೊಟ್ಟು ಸಂಶೋಧನೆ ಮಾಡಲು ಇಲ್ಲಿಂದಲೆ ಪ್ರಾರಂಭ ಮಾಡೋಣವೆಂದರು ಪ್ರತಿಯೊಬ್ಬರಿಗೂ ಪ್ರಯತ್ನ ಮುಖ್ಯವಾಗಿದೆ ಯುವ ಶಕ್ತಿಯ ಮುಂದೆ ಯಾವ ಶಕ್ತಿಯು ನಶ್ವರ ಮುಂದಿನ ವರ್ಷಕ್ಕೆ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುವಂತಾಗಲಿ ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಅವಶ್ಯಕತೆ ಇದೆ ಎಂದು ತಿಳಿಸಿದರು.
ಐದು ಹೋಬಳಿಗಳಲ್ಲಿ ಅತಿ ಹೆಚ್ವು ಮತದಾರರಿದ್ದಾರೆ ನಮ್ಮದು ಕೃಷಿ ಪ್ರಧಾನ ಕ್ಷೇತ್ರವಾಗಿದ್ದು ಕೆಲವೆ ತಿಂಗಳು ಮಾತ್ರ ಕೆಲಸವಿದೆ ಉಳಿದ ಎಲ್ಲಾತಿಂಗಳು ಖಾಲಿಯಾಗಿರುತ್ತಾರೆ ಅಂತವರಿಗೆ ಉದ್ಯೋಗ ನೀಡಿದರೆ ಬಹಳ ಸಂತೋಷಕರವಾಗಿರುತ್ತದೆ ನಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಲು ಎನ್ ಎಸ್ ಎಸ್ ಮತ್ತು ಸಾಂಸ್ಕ್ರತಿಕ ಕ್ರೀಡೆಯು ಸಹಕಾರಿಯಾಗುತ್ತದೆ ಇದರಿಂದ ಒಬ್ಬ ವ್ಯಕ್ತಿ ಸದೃಡವಾಗಿ ಸಮಾಜದಲ್ಲಿ ಬಹಳ ಎತ್ತರಕ್ಕೆ ಬೆಳೆಯುತ್ತಾರೆ ಸಂಸ್ಕೃತಿ ತಿಳಿದು ಬದುಕುವುದನ್ನು ಕಲಿಸುತ್ತದೆ
ಇದೆ ಸಮಯದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿಜೇತರಾದ ಎಲ್ಲರಿಗೂ ಬಹುಮಾನ ವಿತರಣೆ ಮಾಡಲಾಗಿದೆ,ಓದಿಗೆ ಯಾವುದೆ ಬಹುಮಾನ ಮಾನದಂಡವಲ್ಲ ಜ್ಞಾನಾರ್ಜನೆ ಬಹು ಮುಖ್ಯ ಎಂದು ವಸತಿ ಸ ಪ್ರ ದ ಕಾಲೇಜು ಪ್ರಾಂಶುಪಾಲರಾದ ಡಾ ದೇವರಾಜು ತಿಳಿಸಿದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೋ.ಶೈಲೇಶ್ ಕುಮಾರ್, ಪ್ರಾಧ್ಯಾಪರುಗಳಾದ ಸುರೇಂದ್ರ ಸಿ ಎಸ್,ರವಿಶಂಕರ್ ಎಸ್,ಶಾಂತರಾಜು ಟಿ ಎನ್,ವಾಣಿ ಎನ್ ,ಕೃಪಾ ಎಸ್ ಹಾಗೂ ಪ.ಪಂ.ಸದಸ್ಯ ಮಹೇಶ್ ಕುಮಾರ್ ಮುಖಂಡರುಗಳಾದ ರಾಜೂಗೌಡ,ಮಹದೇವ್ ,ವಿಜಯಕುಮಾರ್, ಜಸ್ಸಿಮ್ ಪಾಷಾ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್