ವಿಜಯಪುರ/ಇಂಡಿ:ಮಣ್ಣು ಪುನಶ್ಛೇತನ ಕಾನೂನು ಜಾರಿ ಮಾಡಿ ದೇಶದ ರೈತನಿಗೆ ಮೊದಲನೇ ಆದ್ಯತೆ ನೀಡಿದರೆ ಮಾತ್ರ ರೈತನ ಆದಾಯ ಹೆಚ್ಚಾಗಲಿದೆ ಎಂದು ಪ್ರಗತಿಪರ ರೈತ ಬಸವರಾಜ ಬಬಲಾದ ಹೇಳಿದರು.
ತಾಲೂಕಿನ ಮಿರಗಿ ಗ್ರಾಮದಲ್ಲಿ ಮಣ್ಣು ಉಳಿಸಿ ಅಭಿಯಾನದ ಅಂಗವಾಗಿ ಯಲ್ಲಾಲಿಂಗ ಮಹಾರಾಜರ ಭಾವಚಿತ್ರ ಮೆರವಣೆಗೆ ಮಾಡಿ ನಂತರ ನಡೆದ ಮಣ್ಣಿನ ಮಹತ್ವ ಕುರಿತು ಜಾಗೃತಿ ಮೂಡಿಸಿ ಮಾತನಾಡಿದರು.
ಮಿರಗಿ ಗ್ರಾಮದಲ್ಲಿ ಜನಿಸಿದ್ದ ಯಲ್ಲಾಲಿಂಗ ಮಹಾರಾಜರು ತಮ್ಮ ಜೀವಿತಾವಧಿಯಲ್ಲಿಯೇ ತಮ್ಮ ಭಕ್ತರಿಗೆ ಮಣ್ಣು ಉಳಿಸಿ ಅಭಿಯಾನ ಪ್ರಾರಂಭಿಸಿ ಅಂದೇ ಮಣ್ಣಿನ ಮಹತ್ವವನ್ನು ತಿಳಿಸಿಕೊಟ್ಟರು. ಇಂದಿನ ದಿನಗಳಲ್ಲಿ ರಾಸಾಯನಿಕ ಬಳಕೆಯಿಂದ ನಮ್ಮ ದೇಶದ ಪವಿತ್ರ ಮಣ್ಣು ಹಾಳಾಗುತ್ತಿದೆ ಮುಂದಿನ ಪೀಳಿಗೆಗೆ ಫಲವತ್ತಾದ ಮಣ್ಣು ಸಿಗದಂತಾಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಎತ್ತು ಆಧಾರಿತ ಕೃಷಿ ನಾಶವಾಗಿರುವದರಿಂದ ಗ್ರಾಮಗಳಲ್ಲಿ ಬೆರಳಣೆಕೆಯಷ್ಟು ಎತ್ತುಗಳನ್ನು ಕಾಣುತ್ತಿದ್ದೇವೆ ಎತ್ತುಗಳು ಮತ್ತು ಗೋವು ಆಧಾರಿತ ಕೃಷಿ ಪುನಶ್ಚೇತನಗೊಳ್ಳಬೇಕಾದರೆ ಮಣ್ಣು ಪುನಶ್ಛೆತನ ಕಾನೂನು ಅನುಷ್ಠಾನಗೊಳಿಸಲು ಮೊದಲ ಆಧ್ಯತೆ ನೀಡಬೇಕಾದ ಅವಶ್ಯಕತೆ ಇದೆ.ಇದೇ ಕಾರಣಕ್ಕಾಗಿ ಆಧ್ಯಾತ್ಮಿಕ ನಾಯಕರ ಜನ್ಮ ಸ್ಥಳಗಳನ್ನು ಮಣ್ಣು ಉಳಿಸಿ ಕಾರ್ಯಕ್ರಮಗಳನ್ನು ಆಯೋಜಿಸಿ ಅವರ ಭಕ್ತರ ಸಂದೇಶ ನೀಡುವ ಪ್ರಯತ್ನ ಮಣ್ಣು ಉಳಿಸಿ ಅಭಿಯಾನದ ಸ್ವಯಂ ಸೇವಕರಿಂದ ಬಿಡುಗಡೆ ಮಾಡಿಸಲಾಗಿದೆ ಎಂದರು.
ಮಣ್ಣು ಉಳಿಸಿ ಅಭಿಯಾನ ಒಂದು ಜಾಗತಿಕ ಪ್ರಯತ್ನವಾಗಿದ್ದು ಇದು ಮಣ್ಣಿನ ಆರೋಗ್ಯದ ಪರವಾಗಿ ನಿಲ್ಲಲು ಪ್ರಪಂಚದಾದ್ಯಂತ ಜನರನ್ನು ಒಟ್ಟು ಗೂಡಿಸುವ ಮೂಲಕ ಮಣ್ಣಿನಲ್ಲಿ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ಕೃಷಿ ಯೋಗ್ಯ ಮಣ್ಣಿನಲ್ಲಿ ಸಾವಯುವ ಅಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ನೀತಿ ಮತ್ತು ಕ್ರಮಗಳನ್ನು ಸ್ಥಾಪಿಸಲು ಎಲ್ಲಾ ರಾಷ್ಟ್ರೀಯ ನಾಯಕರನ್ನು ಬೆಂಬಲಿಸಲು ಉದ್ದೇಶಿಸಿದೆ ಎಂದರು.
ಗ್ರಾ.ಪಂ ಸದಸ್ಯ ಶ್ರೀಶೈಲ ಮದರಿ,ಶ್ರೀಕಾಂತ,ಬಸವರಾಜ ನೇತೃತ್ವ ವಹಿಸಿದ್ದರು.
ವರದಿ:ಅರವಿಂದ್ ಕಾಂಬಳೆ ಇಂಡಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.