ಕಲ್ಬುರ್ಗಿ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಭಾಗದಲ್ಲಿ ಪಿಎಚ್ ಡಿ ವಿದ್ಯಾರ್ಥಿಯಾದ ಸುಭಾಷ್ ಚಂದ್ರ ಜೆ ಮಲ್ಲೇದ ಅವರು ಕಳೆದ ಜೂನ್ ತಿಂಗಳಲ್ಲಿ ಆಸ್ಟ್ರೇಲಿಯದ ಮೆಲ್ಬೋರ್ನ್ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ರೈತರ ಸಾಮಾಜಿಕ ಆರ್ಥಿಕ ಬೆಳವಣಿಗೆಯ ಬಗ್ಗೆ ಸಂಶೋಧನೆ ಮಂಡಿಸಿದರ ಪ್ರತಿಫಲವಾಗಿ ಚೆನ್ನೈ ನಗರದಲ್ಲಿ ನಡೆದ (ಜಿಇಪಿ ಆರ್ ಎ ಗ್ಲೋಬಲ್) ಎಕನಾಮಿಕ್ ಪ್ರೋಗ್ರೆಸ್ ರಿಸರ್ಚ್ ಅಸೋಸಿಯೇಷನ್ ವತಿಯಿಂದ ಭಾರತ ರತ್ನ ಡಾಕ್ಟರ್ ರಾಧಾಕೃಷ್ಣನ್ ಗೋಲ್ಡ್ ಮೆಡಲ್ ಪ್ರಶಸ್ತಿ ಪತ್ರ ವಿತರಿಸಿ ಸುಭಾಷ್ ಚಂದ್ರ ಜೆ ಮಲ್ಲೇದವರಿಗೆ ಗೌರವಿಸಲಾಯಿತು ಎಂದು ಯಡ್ರಾಮಿ ತಾಲೂಕು ಸಮಿತಿ ತಾಲೂಕ ಅಧ್ಯಕ್ಷರು ವಿಜಯಕುಮಾರ್ ಜೆ ಮಲ್ಲೇದ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
