ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಪಾಯಕ್ಕೆ ಅಹ್ವಾನ ನೀಡುತ್ತಿರುವ ವಿದ್ಯುತ್ ದ್ವೀಪದ ತಂತಿ: ಕರುನಾಡ ಕಂದ ಸುದ್ದಿಗೆ ಸ್ಪಂದಿಸಿದ ಅಧಿಕಾರಿಗಳು

ಕೊಟ್ಟೂರು:
ಪಟ್ಟಣದ ಹರಪನಹಳ್ಳಿ ರಸ್ತೆ ಮರಿಕೊಟ್ಟೂರೇಶ್ವರ ದೇವಸ್ಥಾನದಿಂದ ಬಸ್ ನಿಲ್ದಾಣದವರೆಗೆ ಸರ್ಕಾರದ ಅನುದಾನದಡಿಯಲ್ಲಿ ನೂತನ ರಸ್ತೆ ಮತ್ತು ವಿದ್ಯುತ್ ದ್ವೀಪದ ಕಂಬಗಳ ನಿರ್ಮಾಣ ಮಾಡಿದ್ದು . ಈ ಕಂಬಗಳ ವಿದ್ಯುತ್ ತಂತಿಗಳನ್ನು ಕಂಬದ ಒಳಗೆ ಮುಚ್ಚುವುದು ಬಿಟ್ಟು.ಈ ವಿದ್ಯುತ್ ದ್ವೀಪದ ಕಂಬದ ತಂತಿಗಳಿಗೆ ಹಲವಾರು ಕಡೆ ಪ್ಯಾಚ್ ಹಾಕಿ ತಂತಿಗಳನ್ನು ಹಾಗೆ ಹೊರಗೆ ಬಿಟ್ಟಿದ್ದಾರೆ. ಈ ರಸ್ತೆ ಯಲ್ಲಿ ಒಡಾಡುವ ವಾಹನ ಸವಾರರಿಗೆ ಮತ್ತು ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಕೈಗೆ ಸಿಗುವ ಹಾಗೆ ಇರುವ ಅಕಸ್ಮಿಕವಾಗಿ ಜನರಿಗೆ ಈ ವಿದ್ಯುತ್ ತಂತಿಗಳಿಂದ ಕಣ್ಣಿಗೆ ಕಾಣದ ವಿದ್ಯುತ್ ನಿಂದ ಸಾರ್ವಜನಿಕರ ಜೀವಕ್ಕೆ ವಿದ್ಯುತ್ ಸ್ಪರ್ಷಿಸಿ ಅನಾಹುತಗಳು ಉಂಟಾಗುವ ಮೊದಲು ಈ ದೀಪದ ತಂತಿಗಳನ್ನು ಸಂಭಂದಪಟ್ಟ ಅಧಿಕಾರಿಗಳು ಕೂಡಲೇ ಎಚ್ಚತ್ತುಕೊಂಡು ಈ ತಂತಿಗಳನ್ನು ವಿದ್ಯುತ್ ಕಂಬದ ಒಳಗಡೆ ಸರಿಪಡಿಸಿ ಸಾರ್ವಜನಿಕರನ್ನು ಈ ವಿದ್ಯುತ್ ತಂತಿಗಳಿಂದ ಅನಾಹುತಗಳು ಉಂಟಾಗದಂತೆ ಅಧಿಕಾರಿಗಳು ಕಾಪಡಬೇಕು ಎಂದು ಕರುನಾಡಕಂದ ಈ ಸುದ್ದಿಯನ್ನು ಪ್ರಕಟಸಲಾಗಿತ್ತು ಈ ಸುಧ್ದಿಗೆ ಸ್ಪಂದಿಸಿ ಸಂಬಂಧ ಪಟ್ಟ ಅಧಿಕಾರಿಗಳು ಪಟ್ಟಣದ ಹರಪನಹಳ್ಳಿ ರಸ್ತೆ ಮರಿಕೊಟ್ಟೂರೇಶ್ವರ ದೇವಸ್ಥಾನದಿಂದ‌ ಬಸ್ ನಿಲ್ದಾಣದವರಗೆ ವಿದ್ಯುತ್ ದ್ವೀಪದ ಕಂಬಗಳಲ್ಲಿ ಹೊರಗೆ ಬಿದ್ದ ವಿದ್ಯುತ್ ತಂತಿಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಅದಿಕಾರಿಗಳು ಕಂಬಗಳಲ್ಲಿ ವಿದ್ಯುತ್ ತಂತಿಗಳನ್ನು ಮುಚ್ಚಿದರು. ಅಪಾಯದಲ್ಲಿರವ ಈ ಕೆಲಸಕ್ಕೆ ಮುಂದಾಗಿ ಬಂದು ಸಾರ್ವಜನಿಕರ ರಕ್ಷಣೆ ಕಾಪಡಿದ ಅದಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಕರ್ನಾಟಕ ಮಾನವಹಕ್ಕುಗಳ ಜನಾಸೇವಾ ಸಂಸ್ಥೆ (ನೋ.) ಕೊಟ್ಟೂರು ತಾಲೂಕು ಅದ್ಯಕ್ಷರಾದ ಬಿ.ಸತೀಶ್ ಮತ್ತು ಪಧಾದಿಕಾರಿಗಳಾದ ಎಚ್ .ವಿರುಪಾಕ್ಷಿ .ಕೂಡ್ಲಿಗಿ ಸುರೇಶ್ .ಜಬ್ಬೀರ್ ಸಾಹೇಬ್ ಧನ್ಯವಾದ ತಿಳಿಸಿದರು.
ವರದಿ- ಚಿಗಟೇರಿ ಜಯಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ