ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಒಂದು ದಿನದ ಉಚಿತ ಕಾರ್ಯಗಾರ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ಕಲ್ಯಾಣ ಕರ್ನಾಟಕದ ಕನಸನ್ನು ಹೊತ್ತು ಸ್ಪರ್ಧಾರ್ಥಿಗಳ ಭವ್ಯ ಭವಿಷ್ಯವನ್ನು ರೂಪಿಸುವಲ್ಲಿ ನೂತನವಾಗಿ ಆರಂಭವಾಗಿರುವಂತ ಅಪ್ಪಾಜಿ ಕರಿಯರ್ ಅಕಾಡೆಮಿ ವತಿಯಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ಹುದ್ದೆಗೆ ಸಂಬಂಧಿಸಿದಂತೆ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಧಾರವಾಡದಿಂದ ಸಂಪನ್ಮೂಲ ವ್ಯಕ್ತಿಗಳಾದಂತಹ ಬಸವರಾಜ್ ಅವರು ಶರಣರ ನಾಡು ಶಹಾಪುರ ನಗರಕ್ಕೆ ಆಗಮಿಸಿ ಅಪ್ಪಾಜಿ ಕರಿಯರ್ ಅಕಾಡೆಮಿಯ ವತಿಯಿಂದ ಹಮ್ಮಿಕೊಂಡಿದ್ದ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದ ನೇತೃತ್ವವನ್ನು ವಹಿಸಿ ಶೀಘ್ರದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ಹುದ್ದೆಗೆ ಸಂಬಂಧಪಟ್ಟಂತೆ ಸ್ಪರ್ಧಾರ್ಥಿಗಳನ್ನು ಉದ್ದೇಶಿಸಿ ಪಂಚಾಯತ್ ವ್ಯವಸ್ಥೆಯನ್ನು ಕುರಿತು ಸರ್ಕಾರದ ಪಂಚಾಯತ್ ಅಭಿವೃದ್ಧಿಯ ಯೋಜನೆಗಳ ಕುರಿತು ಸಂಪೂರ್ಣವಾದಂತಹ ಸರ್ವಾನುಸರವಾದಂತ ಸುದೀರ್ಘವಾದಂತಹ ವಿಷಯ ವಸ್ತುವನ್ನು ಸ್ಪರ್ಧಾರ್ಥಿಗಳ ಮನಸ್ಸನ್ನು ಗೆಲ್ಲುವ ಮುಖಾಂತರ ಭವ್ಯ ಭವಿಷ್ಯದ ಪಂಚಾಯತ್ ಅಧಿಕಾರಿಗಳನ್ನು ಉದ್ದೇಶಿಸಿ ಉಪನ್ಯಾಸವನ್ನು ನೀಡಿದರು ತದನಂತರ ಅಪ್ಪಾಜಿ ಕರಿಯರ್ ಅಕಾಡೆಮಿಯ ನಿರ್ದೇಶಕರಾಗಿರುವ ಕಟ್ಟಯ್ಯ ಬ ಹಿರೇಮಠ ಅವರು ಸ್ಪರ್ಧಾರ್ಥಿಗಳನ್ನ ಉದ್ದೇಶಿಸಿ ಸ್ಪರ್ಧಾರ್ಥಿಗಳ ಗುರಿ ತಾಳ್ಮೆ,ಸಹನೆ,ಶ್ರದ್ಧೆ,ವಿಶ್ವಾಸ,ಸಂಕಲ್ಪ,ನಿರ್ದಿಷ್ಟ ಗುರಿ ಇವುಗಳ ಬಗ್ಗೆ ಸ್ಪಷ್ಟತೆ ಇರುವವರು ತಡವಾದರೂ ಪರವಾಗಿಲ್ಲ ತಮ್ಮ ಗುರಿಯನ್ನು ಮುಟ್ಟುವಲ್ಲಿ ಯಶಸ್ವಿಯಾಗುತ್ತಾರೆ ಪ್ರಯತ್ನ ಮಾತ್ರ ನಿರಂತರವಾಗಿರಲಿ ಎಂದು ಸ್ಪರ್ಧಾರ್ಥಿಗಳನ್ನು ಉದ್ದೇಶಿಸಿ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಆಗಬೇಕಾದರೆ ಈ ಭಾಗದ ಸ್ಪರ್ಧಾರ್ಥಿಗಳು ಹೆಚ್ಚು ಹೆಚ್ಚು ಅಧಿಕಾರಿಗಳಾಗಿ ಆಯ್ಕೆಯಾದ ಮಾತ್ರ ಕಲ್ಯಾಣ ಕರ್ನಾಟಕ ಕಲ್ಪನೆ ಯಶಸ್ವಿಯಾಗುತ್ತದೆ ಅದಕ್ಕೆ ಅನುಕೂಲಕರವಾಗುವಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಭವಿಷ್ಯವನ್ನು ರೂಪಿಸುವಲ್ಲಿ ಅಪ್ಪಾಜಿ ಕರಿಯರ್ ಅಕಾಡೆಮಿ ನಿಮ್ಮೊಂದಿಗೆ ಸದಾ ಕಾಲ ಸದಾಪೂರ್ಣ ನಿಮ್ಮ ಶ್ರೇಯಸ್ಗೋಸ್ಕರ ಶ್ರಮಿಸುವ ಸಂಸ್ಥೆಯಾಗಿ ನಿಮ್ಮೊಂದಿಗೆ ನಿಮ್ಮ ಭವ್ಯ ಭವಿಷ್ಯವನ್ನು ರೂಪಿಸುವಲ್ಲಿ ಸೇವೆಯನ್ನು ಸಲ್ಲಿಸಲು ಸದಾ ಸಿದ್ಧವಾಗಿದೆ ಎಂಬ ಸಂಕಲ್ಪವನ್ನು ಮಾಡುವುದರ ಮುಖಾಂತರ ಆದಷ್ಟು ಶೀಘ್ರದಲ್ಲಿ ಮುಂದೆ ಬರುವ ನೇಮಕಾತಿಯಲ್ಲಿ ತಾವು ಅಧಿಕಾರಿಗಳಾಗಿ ನಮ್ಮ ಸಂಸ್ಥೆಗೆ ನಮ್ಮ ಕಲ್ಯಾಣ ಕರ್ನಾಟಕಕ್ಕೆ ಕೀರ್ತಿಯನ್ನು ತರುವ ಪ್ರತಿಭೆಗಳು ನೀವಾಗಿ ನಮ್ಮ ಭಾಗದ ಕೀರ್ತಿ ಪತಾಕೆಯನ್ನು ಭಾನೆತ್ತರಕ್ಕೆ ಗೌರವವನ್ನು ಮೂಡಿಸುವ ಜವಾಬ್ದಾರಿ ನಿಮ್ಮ ಮೇಲಿದೆ
ನಿಮ್ಮ ಸಂಸ್ಥೆಯನ್ನು ನೀವು ಬೆಳೆಸುವ ಮುಂಖಾತರ ಕಲ್ಯಾಣ ಕರ್ನಾಟಕದಲ್ಲಿ ಅತ್ಯುನ್ನತ ಸಂಸ್ಥೆಯಾಗಿ ಅಭಿವೃದ್ಧಿಯನ್ನು ಸಾಧಿಸುವುದರಲ್ಲಿ ನಾವೆಲ್ಲರೂ ಸೇರಿ ಸಂಸ್ಥೆಯನ್ನು ಬೆಳೆಸೋಣ ಎಂಬ ಮಾತನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಕೇಂದ್ರಬಿಂದು ವಿಶೇಷ ಉಪನ್ಯಾಸಕರಾಗಿರುವಂತ ಬಸವರಾಜ್ ಸರ್ ಅವರು ಹಾಗೂ ಅಪ್ಪಾಜಿ ಕರಿಯರ್ ಅಕಾಡೆಮಿಯ ನಿರ್ದೇಶಕರಾದಂತ ಕಟ್ಟಯ್ಯ.ಬ.ಹಿರೇಮಠ ಹಾಗೂ ನೀಲಪ್ಪ ಪೊಲೀಸ್ ಇಲಾಖೆ ಶಿವು ಕುಮಾರ್, ಅಗ್ನಿಶಾಮಕ ಇಲಾಖೆ ತಾಯರಾಜ ಉಪನ್ಯಾಸಕರು ಭೀಮರಾಯ ಉಪನ್ಯಾಸಕರು ಶಿವರೆಡ್ಡಿ ಉಪನ್ಯಾಸಕರು ಹಾಗೂ 100 ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮುಖಾಂತರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ