ವಿಜಯನಗರ ಜಿಲ್ಲೆ ಕೊಟ್ಟೂರು:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಸಿ ಎಸ್ ಷಡಕ್ಷರಿ ಅವರ ವಿರುದ್ಧ ಅನಾವಶ್ಯಕ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು ಈ ದೂರನ್ನು ಸುಳ್ಳು ದೂರು ಸಲ್ಲಿಸಿರುವ ಶಾಂತರಾಮ್, ಗುರುಸ್ವಾಮಿ,ಮೆಹಬೂಬ್ ಬಾಷಾ ಎಂ,ಶಿವರುದ್ರಯ್ಯ ವಿ ವಿ,ನಿಂಗೇಗೌಡರು,ಐದು ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಾನ್ಯ ತಹಶೀಲ್ದಾರರು ಕೊಟ್ಟೂರು ತಾಲೂಕು ಇವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ದಿಂದ ಸೋಮವಾರದಂದು ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕೆ ಜಗದೀಶ್ ಖಜಾಂಜಿಯಾದ ಎ ಬಸವರಾಜ್ ಸಹಕಾರ್ಯದರ್ಶಿಗಳಾದ ಈಶ್ವರಪ್ಪ ಸರ್ ಗ್ರಾಮ ಆಡಳಿತ ನೌಕರರ ಸಂಘದ ಕೊಟ್ರೇಶ್ ವಿ ಎ ಕೋಟೆಪ್ಪ ಸದಸ್ಯರು ವೃಂದ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು.
