ಚಾಮರಾಜನಗರ :ನಮ್ಮ
ಜಿಲ್ಲೆಯನ್ನು ಬರಗಾಲ ಪ್ರದೇಶವೆಂದು ಘೋಷಿಸಬೇಕು ಹಾಗೂ ರೈತರಿಗೆ ವಿಶೇಷವಾದ ಪ್ಯಾಕೇಜ್ ಘೋಷ ಬೇಕು,ಎಲ್ಲಾ ಕೆರೆಕಟ್ಟೆಗಳಿಗೆ ತಕ್ಷಣ ನೀರು ತುಂಬಿಸಬೇಕು,
ತೆಂಗು ಮತ್ತು ಸೂರ್ಯಕಾಂತಿಗೆ ಎಂಎಸ್‌ಪಿ ಬೆಂಬಲ ಬೆಲೆ ಯೋಜನೆ ಅಡಿ ಖರೀದಿಸಬೇಕು,
ಕಬ್ಬಿನ ಬೆಲೆ ಮತ್ತು ಕಟಾವು ಸಂಬಂಧಿತ ವಿಷಯಗಳ ಬಗ್ಗೆ ತಕ್ಷಣ ಸಭೆ ಕರೆಯಬೇಕು,
ಚಂಗಡಿ ಪುನರ್ವಸ್ತೆ ಪುನರ್ ವ್ಯವಸ್ಥೆ ತಕ್ಷಣ ಜಾರಿಯಾಗಬೇಕು,
ಮಲೆ ಮಾದೇಶ್ವರ ಬೆಟ್ಟದ ಪುಡಿಗಳಿಗೆ ವಿದ್ಯುತ್ ರಸ್ತೆ ಇನ್ನು ಮುಂತಾದ ಕನಿಷ್ಠ ಸೌಲಭ್ಯ ಒದಗಿಸಬೇಕು,
ಬೆಟ್ಟದಲ್ಲಿ ದನಗಳನ್ನು ಮೇಯಿಸಲು ದೊಡ್ಡಿ ಹಾಕಲು ಅವಕಾಶ ನೀಡಬೇಕು,
ಕಾಡು ಪ್ರಾಣಿಗಳಿಂದ ಜನರಿಗೆ ಪ್ರಾಣ ಹಾನಿಯಾದರೆ ಹಾಗೂ ರೈತನ ಜಮೀನಿನಲ್ಲಿ ಕಾಡುಪ್ರಾಣಿಗಳು ಸತ್ತರೆ ಮೊದಲು ಡಿಸಿಎಫ್ ರವರ ಮೇಲೆ ಎಫ್ ಐ ಆರ್ ದಾಖಲಾಗಬೇಕು,
ಇದಕ್ಕೆ ಸ್ಪಂದಿಸಿದ ಸಚಿವರು ಸ್ವಲ್ಪ ಕಾಲಾವಕಾಶ ಕೊಡಿ ಸಂಬಂಧ ಪಟ್ಟ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸಾಲೂರು ಮಠದ ಶ್ರೀಗಳು ,ಶಾಸಕ ಮಂಜುನಾಥ್, ಹೊನ್ನೂರ್ ಪ್ರಕಾಶ್, ಚಂಗಡಿ ಕರಿಯಪ್ಪ, ಹಾಲಳ್ಳಿ ಮಹೇಶ್, ಹಿರಿಕಾಟಿ ಚಿಕ್ಕಣ್ಣ, ಬೆಟ್ಟದ ನಾಗ ಪ್ರಸಾದ್, ಮಾದೇಶ್, ಜಗದೀಶ್, ಇನ್ನು ಮುಂತಾದ ರೈತರ ಮುಖಂಡರು ಭಾಗವಹಿಸಿದ್ದರು.
ವರದಿ :ಉಸ್ಮಾನ್ ಖಾನ್.