ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕಾರುಣ್ಯಾಶ್ರಮದ ಆಡಳಿತಾಧಿಕಾರಿ ಡಾ.ಚನ್ನಬಸವ ಸ್ವಾಮಿಗೆ”ಕರುನಾಡ ಅನಾಥ ರಕ್ಷಕ”ಪ್ರಶಸ್ತಿಯ ಮೂಲಕ ಗೌರವ


ರಾಯಚೂರು:ಲಘು ಮೋಟಾರ ವಾಹನ ಚಾಲಕರ ಕ್ಷೇಮಾಭಿವೃದ್ಧಿ ಸಂಘ(ರಿ.),ಸಿಂಧನೂರು ಡಾ. ಬಿ.ಆರ್. ಅಂಬೇಡ್ಕರ್ ಮಹಾಸಭಾ (ರಿ.),ಅಂಬೇಡ್ಕರ್ ವಾದ ದಲಿತ ಸಂಘರ್ಷ ಸಮಿತಿ ಸೇವಾ ಸಿರಿ ಚಾರಿಟೇಬಲ್ ಟ್ರಸ್ಟ್ (ರಿ.), ಬಸನಗೌಡ ಬಾದರ್ಲಿ ಫೌಂಡೇಶನ್ ರಾಮಕೃಷ್ಣ ಚಾರಿಟೇಬಲ್ ಟ್ರಸ್ಟ್ (ರಿ.),ಲಿಂಗಸುಗೂರು ಗೆಳೆಯ ಚಿತ್ರತಂಡ ಇವರುಗಳ ಸಂಯುಕ್ತಾಶ್ರಯದಲ್ಲಿ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ (ರಿ.) ಸಿಂಧನೂರು ವತಿಯಿಂದ ಕಾರುಣ್ಯ ಆಶ್ರಮದ ಆಡಳಿತಾಧಿಕಾರಿಗಳು ಹಾಗೂ ಸಮಾಜಸೇವಕರಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ ಅವರ ಅನಾಥಪರ ಸೇವೆ ಹಾಗೂ ಇನ್ನಿತರ ಸಮಾಜ ಸೇವೆಯನ್ನು ಗುರುತಿಸಿ ಅವರ ಹುಟ್ಟು ಹಬ್ಬದ ಅಂಗವಾಗಿ ಗಣ್ಯಾತಿ ಗಣ್ಯರಿಂದ “ಕರುನಾಡ ಅನಾಥ ರಕ್ಷಕ” ಎನ್ನುವ ಶ್ರೇಷ್ಠ ಗೌರವಾನ್ವಿತ ಪ್ರಶಸ್ತಿಯನ್ನು ವಿತರಿಸಿ ಸನ್ಮಾನಿಸಿ ಗೌರವಿಸಲಾಯಿತು.ಈ ಕಾರ್ಯಕ್ರಮದಲ್ಲಿ ಪ್ರಶಾಂತ ಹಿರೇಮಠ ಕೊಪ್ಪಳ ಅವರ ಹುಟ್ಟು ಹಬ್ಬದ ಅಂಗವಾಗಿ ಸಹನಾ ಪ್ರಶಾಂತ ಹಿರೇಮಠ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ನ ಕಾರ್ಯದರ್ಶಿಗಳಾದ ಅಶೋಕ ನಲ್ಲ ಸುಮಾರು ವರ್ಷಗಳಿಂದ ಸಿಂಧನೂರು ನಗರದಲ್ಲಿ ಕಾರುಣ್ಯ ಎನ್ನುವ ಕರುಣಾಮಯಿ ಕುಟುಂಬವನ್ನು ಶರಣು ಪಾ.ಹಿರೇಮಠ ಹಾಗೂ ವೀರೇಶ ಯಡಿಯೂರು ಮಠ ಇವರುಗಳ ನೇತೃತ್ವದಲ್ಲಿ ಹುಟ್ಟು ಹಾಕಿ ನಮ್ಮ ರಾಜ್ಯದಲ್ಲಿ ಅಲ್ಲದೆ ಬೇರೆ ರಾಜ್ಯದ ಬುದ್ಧಿಮಾಂದ್ಯರು ಅನಾಥರನ್ನು ರಕ್ಷಣೆ ಮಾಡಿ ಅವರಿಗೆ ಬದುಕು ಕಟ್ಟಿ ಕೊಟ್ಟಿರುವ ಕಾರುಣ್ಯ ಆಶ್ರಮದ ಸೇವೆ ಶ್ಲಾಘನೀಯವಾದುದು.ಇಂತಹ ಆಶ್ರಮದ ಜೊತೆ ನಾವು ಗುರುತಿಸಿಕೊಂಡಿರುವುದು ನಮ್ಮ ಪೂರ್ವಜನ್ಮದ ಪುಣ್ಯ ಈ ಎಲ್ಲ ಅಂಶಗಳನ್ನು ಪರಿಗಣಿಸಿ ಅವರ ಹುಟ್ಟು ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ವಿತರಿಸಿರುವುದು ಪ್ರಶಸ್ತಿಗೆ ದೊಡ್ಡ ಮಟ್ಟದ ಅರ್ಥ ಸಿಕ್ಕಿದೆ ಎಂದು ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಆಶ್ರಮದ ಗೌರವಾಧ್ಯಕ್ಷರಾದ ಶರಣು.ಪಾ.ಹಿರೇಮಠ ನಾಡಿನ ಜನರ ನಿರಂತರ ಸಹಾಯ ಸಹಕಾರವೇ ಕಾರುಣ್ಯ ಕುಟುಂಬವಾಗಿದೆ ಅದೆಷ್ಟೋ ನೊಂದ ಜೀವಿಗಳ ಕಣ್ಣೀರನ್ನು ಒರೆಸಲು ಮೂಲ ಕಾರಣಿಕರ್ತರು ದಾನಿಗಳು ನಮ್ಮ ಭಾರತೀಯ ಕರುಣಾಮಯಿ ಸಂಸ್ಕೃತಿಯನ್ನು ಕಾರುಣ್ಯ ಕುಟುಂಬದ ಮೂಲಕ ಜಗತ್ತಿಗೆ ಬಿಂಬಿಸುತ್ತಿದ್ದಾರೆ. ಸ್ವಾರ್ಥದ ಈ ಜಗತ್ತಿನಲ್ಲಿ ನಿಸ್ವಾರ್ಥತೆಯ ಕೇಂದ್ರ ನಮ್ಮ ಕಾರುಣ್ಯ ಆಶ್ರಮ ಇಂದಿನ ಈ ಕರುನಾಡ ಅನಾಥ ರಕ್ಷಕ ಪ್ರಶಸ್ತಿ ಸೇವೆಗೆ ದೊರೆತ ಗೌರವವಾಗಿದೆ ಹಲವಾರು ಸಂಘ ಸಂಸ್ಥೆಗಳ ಸಹಕಾರ ಸಹಾಯ ನಮ್ಮ ಕಾರುಣ್ಯ ಆಶ್ರಮಕ್ಕಿರುವುದರಿಂದ ನಾಡಿನಲ್ಲಿ ಪ್ರಸಿದ್ಧ ಸಂಸ್ಥೆಯಾಗಿದೆ ದಾನಿಗಳೇ ನಮ್ಮ ದೇವರೆಂದು ನಾವು ಇಟ್ಟುಕೊಂಡಿರುವ ಭಾವನೆ ಸಾರ್ಥಕವಾಗಿದೆ ಎಂದು ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಶ್ರೀ ಮಲ್ಲಯ್ಯ ಪಟ್ಟದೊಡೆಯರು ಬೀರಲಿಂಗೇಶ್ವರ ಜಗಲಿ ಸಂಸ್ಥಾನ ಮಠ ಗೋನಾಳ ಇವರು ಆಶೀರ್ವಚನ ನೀಡಿದರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಶ್ರಮದ ಕಾರ್ಯಾಧ್ಯಕ್ಷರಾದ ವೀರೇಶ ಯಡಿಯೂರು ಮಠ, ವೀರೇಶ ಯಾದವ ಮಾಜಿ ಸೈನಿಕರು,ಪ್ರವೀಣ್ ಗಸ್ತಿ ಕಾಮಿಡಿ ಕಿಲಾಡಿಗಳು ಖ್ಯಾತಿ ನಟರು,ಗೆಳೆಯ ಚಿತ್ರದ
ನಿರ್ದೇಶಕರಾದ ಧನು,ಮಂಜುನಾಥ ಗಾಣಿಗೇರ ತಾಲೂಕ ಅಧ್ಯಕ್ಷರು ನಮ್ಮ ಕರ್ನಾಟಕ ರಕ್ಷಣಾ ಸೇನೆ,ಪ್ರದೀಪ್ ಪೂಜಾರಿ ಸಂಸ್ಥಾಪಕರು ಸೇವಾ ಸಿರಿ ಚಾರಿ ಟೇಬಲ್ ಟ್ರಸ್ಟ್, ಭೂದೇಶ ಮರಾಠ ನಾಗರಾಜ ಖಂಡಿಮಠ, ಶಿವರಾಜ ಉಪ್ಪಲದೊಡ್ಡಿ ಅಧ್ಯಕ್ಷರು ಲಘು ವಾಹನ ಚಾಲಕರ ಕ್ಷೇಮಾಭಿವೃದ್ಧಿ ಸಂಘ (ರಿ.),ನಾಗರಾಜ ಹಸಮಕಲ್ ಉಪಾಧ್ಯಕ್ಷರು ಲಘು ವಾಹನ ಚಾಲಕರ ಕ್ಷೇಮಾಭಿವೃದ್ಧಿ ಸಂಘ (ರಿ.),ಮೌನೇಶ ನಗರ ಸಭೆ,ನಾಗರಾಜ,ಗೋಪಾಲಕೃಷ್ಣ, ಹನೀಫ್,ವೀರೇಂದ್ರ ಶೆಟ್ಟಿ,ವೀರಭದ್ರಗೌಡ ಗಿಣಿವಾರ,ಗುರುರಾಜ ಮುಕ್ಕುಂದಾ ಕಾರ್ಯದರ್ಶಿಗಳು ಡಾ. ಬಿ ಆರ್ ಅಂಬೇಡ್ಕರ್ ಮಹಾಸಭಾ,ಬಸವರಾಜ ಬುಕ್ಕನಟ್ಟಿ ಅಧ್ಯಕ್ಷರು ಅಂಬೇಡ್ಕರ್ ವಾದ,ಮಹಾನಂದಮ್ಮ,ಹುಸೇನ್ ಬಿ,ನಾಗರಾಜ ಭಂಡಾರಿ ಸಾಲಗುಂದ,ಏಕನಾಥ ಹಾಗೂ ಆಶ್ರಮದ ಸಿಬ್ಬಂದಿಗಳಾದ ಸುಜಾತ ಹಿರೇಮಠ,ಇಂದುಮತಿ ಏಕನಾಥ,ಮರಿಯಪ್ಪ,ಶರಣಮ್ಮ,ಕರಿಯಪ್ಪ,ಹರ್ಷವರ್ಧನ ಅನೇಕರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ