ಔರಾದ: ತಾಲೂಕಿನ ಮಾನೂರ(ಕೆ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ “ಸಾಹಿತ್ಯ ಸೊಬಗು” ಕಾರ್ಯಕ್ರಮದ ವಿಶೇಷ ಉಪನ್ಯಾದಲ್ಲಿ ಮಾತನಾಡಿದ ಸಾಹಿತಿಗಳಾದ ಜಗನ್ನಾಥ ಮೂಲಗೆಯವರು ಗಡಿ ಭಾಗದಲ್ಲಿನ ಮುದ್ದು ಮಕ್ಕಳ ಮನಸ್ಸಿನಲ್ಲಿ ಕನ್ನಡ ಪ್ರೇಮ ಬೆಳೆಸುವುದು ಅನಿವಾರ್ಯ, ಭಾಷೆ ಉಳಿದರೆ ನಮ್ಮ ನಾಡ ನುಡಿ ಸಂಸ್ಕೃತಿಗೆ ಉಳಿಗಾಲವಿದೆ, ಕನ್ನಡ ಎನ್ನುವುದು ಭಾಷೆವಲ್ಲ ಭಾವೈಕ್ಯದ ಸಂಕೇತ ಸಂಬಂಧಗಳು ಬೆಸೆಯುವುದು, ಬದುಕನ್ನು ಕಟ್ಟಿ ಕೊಡುವುದು, ಭಾಷೆ ಉಳಿಸಿ ಬೆಳೆಸುವುದು ಚಿಕ್ಕ ವಯಸ್ಸಿನಿಂದಲೇ ಶುರುವಾಗಬೇಕು ಎಂದು ಅಭಿಪ್ರಾಯಪಟ್ಟರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ ಶಾಲಿವಾನ ಉದಗಿರೆ ಕಾರ್ಯಕ್ರಮವು ಉದ್ಘಾಟಿಸಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ಗಡಿ ಭಾಗದ ಮಕ್ಕಳ ಮನಸ್ಸಿನಲ್ಲಿ ಕನ್ನಡ ಪ್ರೇಮವನ್ನು ಹುಟ್ಟಿಸುವ ಕಾರ್ಯಕ್ರಮವೇ ಸಾಹಿತ್ಯ ಸೊಬಗು ಮೂರು ರಾಜ್ಯಗಳ ಗಡಿ ಭಾಗದಲ್ಲಿ ಈ ಕಾರ್ಯಕ್ರಮ ಆಯೋಜಿಸಿದು ಅತಿ ಸಂತೋಷ ನೀಡಿವೆ ಎಂದು ಉದ್ಘಾಟನೆಯ ನುಡಿ ನುಡಿದರು.
ಈ ಸಂದರ್ಭದಲ್ಲಿ ದೇವಿದಾಸ ಮಡಿವಾಳ ಮುಖ್ಯ ಶಿಕ್ಷಕರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಎಂ ಡಿ ನೈಮೋದಿನ,ಝರೆಪ್ಪ ಬಿರಾದರ, ಜ್ಞಾನೇಶ್ವರ ವಾಡಿಕಾರ, ಮಧುಕರ ಸುವರ್ಣಕಾರ, ಉದಯಕುಮಾರ ಬಡಚ್ಚಿ , ಸಂಜೀವಕುಮಾರ, ಮತ್ತು ಶಾಲಾ ಮುದ್ದು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ:ಅಮರ ಮುಕ್ತೆದಾರ