ತಿಪಟೂರು – ತಾಲೂಕಿನ ಕರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನೂತನವಾಗಿ ಸಹಕಾರ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಸಹಕಾರ ರತ್ನ ಶ್ರೀ ಕೆಎನ್ ರಾಜಣ್ಣನವರಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಕೆ ಆರ್ ದೇವರಾಜು ನಮ್ಮ ಸಹಕಾರ ಸಂಘಕ್ಕೆ ಇನ್ನೂ ಹೆಚ್ಚಿನ ಶೂನ್ಯ ಬಡ್ಡಿ ದರದ ಕೆಸಿಸಿ ಸಾಲವನ್ನು ಮಂಜೂರು ಮಾಡಿಕೊಡಲು ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಮನವಿಯನ್ನು ಪರಿಗಣಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಡಿ ಲಿಂಗರಾಜು, ನಿರ್ದೇಶಕರುಗಳಾದ ಕೆ ಎಸ್ ಶಿವಮೂರ್ತಿ, ಕೆ ಬಸವರಾಜು, ಎನ್ಎಸ್ ವೀರಣ್ಣ, ಜಯಣ್ಣ ,ಮಲ್ಲೇಶಯ್ಯ, ಭಾರತಿ ಅಮೃತ ಶ್ರೀ ಸೇರಿದಂತೆ ಇತರರು ಹಾಜರಿದ್ದರು.
