ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಇಂದು ಅಜೀಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ಸಿ.ಆರ್.ಪಿ ಗಳಿಗೆ ಒಂದು ದಿನದ ಶೈಕ್ಷಣಿಕ ಯೋಜನೆಗಳ ಕುರಿತು ಕಾರ್ಯಗಾರವನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರಸಮನ್ವಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ 2023/24 ನೇ ಸಾಲಿನಲ್ಲಿ ಹಮ್ಮಿಕೊಳ್ಳಬೇಕಾದ ಶೈಕ್ಷಣಿಕ ಯೋಜನೆಗಳ ಕ್ರಿಯಾಯೋಜನೆ ಕುರಿತು ಚರ್ಚಿಸಲಾಯಿತು ಇದೇ ಸಂದರ್ಭದಲ್ಲಿ ಶ್ರೀ ಎಸ್.ಗಿರಿಧರ್ ಇವರು ಬರೆದಿರುವ “ಸಾಧಾರಣ ಜನ,ಅಸಾಧಾರಣ ಶಿಕ್ಷಕರು,ಭಾರತದ ನಿಜವಾದ ಧೀರರು” ಎಂಬ ಗ್ರಂಥವನ್ನು ಶ್ರೀಮತಿ ರೇಣುಕಾ ಪಾಟೀಲ್ ಕ್ಷೇತ್ರ ಸಮನ್ವಯಧಿಕಾರಿಗಳು ಇವರಿಂದ ಎಲ್ಲಾ ಸಿ.ಆರ್.ಪಿ ಗಳಿಗೆ ವಿತರಿಸಲಾಯಿತು.
ಈ ಗ್ರಂಥವು ಶಹಾಪುರ ತಾಲೂಕಿನ ಉತ್ತಮ ಶಾಲೆಗಳನ್ನಾಗಿ ರೂಪಿಸಿರುವ ಮುಖ್ಯ ಗುರುಗಳ ಕುರಿತು ಮಾಹಿತಿಯನ್ನು ಒಳಗೊಂಡಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಅಜೀಮ್ ಪ್ರೇಮ್ ಜಿ ಫೌಂಡೇಶನ್ ತಾಲೂಕು ನೋಡಲ್ ಶ್ರೀ ಪ್ರಸಾದ್ ಹಾಗೂ ಶ್ರೀಮತಿ ಜಾನಕಿ ಹಾಗೂ ಅವರ ತಂಡವು ಶೈಕ್ಷಣಿಕ ಯೋಜನೆಯ ಕುರಿತು ಚರ್ಚೆ ಮಾಡಲಾಯಿತು ಇದೇ ಸಂದರ್ಭದಲ್ಲಿ ಕ್ಷೇತ್ರದ ಬಿ.ಆರ್.ಪಿ ಗಳಾದ ರಾಜಕುಮಾರ್,ರಾಜಶೇಖರ, ಆನಂದ ಸ್ವಾಮಿ ನಾಯಕ್,ಕರ್ಣಪ್ಪ,ವೀರಭದ್ರಯ್ಯ, ಮಲ್ಲಿಕಾರ್ಜುನ,ರಮೇಶ್,ರವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ