ಔರಾದ:ತಾಲೂಕಿನ ಖಾನಾಪೂರ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಚುನಾವಣೆ ಅರಿವು ಮೂಡಿಸುವ ಉದ್ದೇಶದಿಂದ ಖಾನಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇವಿಎಂ ಮಾದರಿ ಮತಯಂತ್ರದ ಮೂಲಕ ಮತ ಚಲಾಯಿಸಿ ಚುನಾವಣೆ ನಡೆಸಲಾಯಿತು.
ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಹಾಗೂ ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ನಡೆಯಲಿರುವ ಸಾರ್ವಜನಿಕ ಚುನಾವಣೆ ಮಾದರಿಯಲ್ಲಿ ಸಂಸತ ಚುನಾವಣೆ ನಡೆಸಲಾಯಿತು, ಶಾಲೆಯ ಎಲ್ಲಾ ಮಕ್ಕಳು ತಮ್ಮ ಆಧಾರ ಕಾರ್ಡ ತೆಗೆದುಕೊಂಡು ಸರತಿ-ಸಾಲಲ್ಲಿ ನಿಂತು ತಮ್ಮ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದರು.
ಶಾಲೆಯ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಯಾಗಿ ರಾಜಕುಮಾರ ಕರುಣಾಸಾಗರ, ಸಹಾಯಕ ಚುನಾವಣಾ ಅಧಿಕಾರಿಯಾಗಿ ಶ್ರೀಮತಿ ಶೋಭಾ ಪಾಟೀಲ,ಸೆಕ್ಟರ್ ಅಧಿಕಾರಿಯಾಗಿ ಏಕದಂತ ಕಾರ್ಯನಿರ್ವಹಿಸಿದರು.ಮತದಾನ ಪ್ರಕ್ರಿಯೆ ಅಂತಿಮವಾಗಿ ಮುಗಿದ ನಂತರ ಶಾಲಾ ಮುಖ್ಯಮಂತ್ರಿಯಾಗಿ ಕುಮಾರಿ ಸಲಾಮಿ ತಂದೆ ಧನರಾಜ ಹಾಗೂ ಉಪಮುಖ್ಯಮಂತ್ರಿಯಾಗಿ ಕುಮಾರಿ ಅರ್ಚನಾ ತಂದೆ ವಿರಶೆಟ್ಟಿ ಆಯ್ಕೆಯಾಗಿದ್ದಾರೆಂದು ಘೋಷಿಸಲಾಯಿತು.
ಈ ಸಂಧರ್ಭದಲ್ಲಿ ಸಮಾಜ ಕಾರ್ಯಕರ್ತ ಕಾಶಿನಾಥ ಬೆಳ್ಳೆ ಹಾಗೂ ಶಾಲೆಯ ಅಧ್ಯಕ್ಷರು,ಉಪಾಧ್ಯಕ್ಷರು ಭಾಗಿಯಾಗಿದ್ದರು.
ವರದಿ:ಅಮರ ಮುಕ್ತೆದಾರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.