ಯಾದಗಿರಿ:ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ ಆರ್ಭಟಕ್ಕೆ ಜನರು ಅಸ್ತವ್ಯಸ್ತವಾಗಿದೆ.ಎಡೆ ಬಿಡದೆ 6 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಶಹಾಪುರ,ವಡಗೇರಾ,ಸುರಪುರ,ಹುಣಸಗಿ, ಕೊಡೇಕಲ್,ನಾರಾಯಣಪುರ ಸೇರಿದಂತೆ ಸತತವಾಗಿ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಧಾರಾಕಾರ ಮಳೆಯಿಂದ ನಾರಾಯಣಪುರ ಜಲಾಶಯ ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು.! ನದಿಯ ಸುತ್ತ ಮುತ್ತ ಯಾರೂ ಹೋಗದಂತೆ ಕ್ರಮ ಕೈಗೊಳ್ಳಬೇಕು ಮತ್ತು ಜನರಿಗೆ ತೊಂದರೆ ಆಗದಂತೆ ಹಾಗೂ ಅಧಿಕಾರಿಗಳು ಮುಂಜಾಗ್ರತೆ ವಹಿಸಿಬೇಕು.
ಸಾರ್ವಜನಿಕರಿಗೆ ಭೀಮಾ ನದಿ ದಡದ ಹತ್ತಿರ ಹೋಗದಂತೆ ಯಾದಗಿರಿ ಜಿಲ್ಲಾ ಪೋಲಿಸ್ ವರಿಷ್ಠ ಅಧಿಕಾರಿ ಡಾ||ವೇದಮೂರ್ತಿ ಆದೇಶ ಹೊರಡಿಸಿದ್ದಾರೆ. ಜುಲೈ 27 ರ ವರೆಗೆ ಮಳೆ ಮುನ್ಸೂಚನೆ ನೀಡಿದ ಹವಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ